ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಗೆಲುವು ನಿರಾಳತೆ ಮೂಡಿಸಿದೆ: ರೋಚಕ ಗೆಲುವಿನ ಬಳಿಕ ರೋಹಿತ್ ಮಾತು

MI vs GT: This vicory is Very satisfying: Rohit Sharma after match against GT

ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ರೋಚಕ ಗೆಲುವು ಸಾಧಿಸಿದೆ. ಡೇನಿಯಲ್ ಸ್ಯಾಮ್ಸ್ ಅವರ ಅದ್ಭುತ ಅಂತಿಮ ಓವರ್‌ನ ದಾಳಿಯಿಂದಾಗಿ ಮುಂಬೈ ಇಂಡಿಯನ್ಸ್ ರೋಚಕವಾಗಿ ಗೆದ್ದು ಬೀಗಿದೆ.ಈ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದು ಇದು ಗೆಲುವು ತಂಡಕ್ಕೆ ನಿರಾಳತೆ ಮೂಡಿಸಿದೆ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಆರಂಭಿಕ 8 ಪಂದ್ಯಗಳಲ್ಲಿಯೂ ಸತತ ಸೋಲು ಅನುಭವಿಸಿತು. ಈ ಮೂಲಕ ಪ್ಲೇಆಫ್ ಹಂತಕ್ಕೇರುವ ಅವಕಾಶವನ್ನೇ ಮುಚ್ಚಿಕೊಂಡಿತ್ತು. ಆದರೆ ಅದಾದ ಬಳಿಕ ಸತತ ಎರಡನೇ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್ ವಿಭಾಗದ ಪ್ರದರ್ಶನ ಕೂಡ ಗಮನಸೆಳೆದಿದೆ.

ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್ ಗೇಮ್ಸ್ 2022 ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ಕಾರಣ?ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್ ಗೇಮ್ಸ್ 2022 ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ಕಾರಣ?

ಈ ಗೆಲುವಿನಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸಂತಸಗೊಂಡಿದ್ದಾರೆ. "ಇದು ಅಂತಿಮ ಹಂತದಲ್ಲಿ ಬಹಳ ಪೈಪೋಟಿಯಿಂದ ಕೂಡಿತ್ತು. ಇದು ಬಹಳ ತೃಪ್ತಿದಾಯಕವಾಗಿದೆ. ಒಂದು ಹಂತದಲ್ಲಿ ಅದೃಷ್ಟವು ಕೂಡ ನಮಗೆ ಸಾಥ್ ನೀಡಿತು. ಈ ಗೆಲುವನ್ನು ನಾವು ಎರಡೂ ಕೈಗಳಿಂದ ಬಾಚಿಕೊಳ್ಳುತ್ತೇವೆ. ಇದರ ಶ್ರೇಯಸ್ಸು ಪ್ರತಿಯೊಬ್ಬರಿಗೂ ಸಲ್ಲಬೇಕು. ನಾವು 15-20 ರನ್‌ಗಳಷ್ಟು ಕೊರತೆಯನ್ನು ಅನುಭವಿಸಿದೆವು. ಅದ್ಭುತ ಆರಂಭವನ್ನು ಪಡೆದರು ಕೂಡ ಮಧ್ಯದಲ್ಲಿ ಎಡವಿದೆವು. ಆ ಹಂತದಲ್ಲಿ ಅವರು ಅದ್ಭುತ ಬೌಲಿಂಗ್ ದಾಳಿ ನಡೆಸಿದರು" ಎಂದಿದ್ದಾರೆ ರೋಹಿತ್ ಶರ್ಮಾ.

ಮುಂದುವರಿದು ಮಾತನಾಡಿದ ರೋಹಿತ್ ಅಂತಿಮ ಹಂತದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಟಿಮ್ ಡೇವಿಡ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಟಿಮ್ ಡೇವಿಡ್ ಅಂತಿಮ ಹಂತದಲ್ಲಿ ಅದ್‌ಭುತ ಬ್ಯಾಟಿಂಗ್ ನಡೆಸಿ ಉತ್ತಮವಾಗಿ ಫಿನಿಷ್ ಮಾಡಿದರು. ಈ ಮೊತ್ತವನ್ನು ರಕ್ಷಣೆ ಮಾಡುವುದು ಕಷ್ಟ ಎಂಬುದು ತಿಳಿದಿತ್ತು. ಆದರೆ ನಾವು ಉತ್ತಮವಾಗಿ ನಿಯಂತ್ರಣ ಸಾಧಿಸಿದೆವು. ಅದು ಬಹಳ ಸಂತಸ ಮೂಡಿಸುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.

"ಬಹಳಷ್ಟು ಸಂಗತಿಗಳು ಪಂದ್ಯದ ಗತಿಯನ್ನು ಬದಲಾಯಿಸಲು ಕಾರಣವಾಗುತ್ತದೆ. ಬೌಲಿಂಗ್ ವಿಭಾಗದ ಪ್ರದರ್ಶನ ಅದ್ಭುತವಾಗಿತ್ತು. ನಿಧಾನಗತಿಯ ಎಸೆತಗಳನ್ನು ಎದ್ಭುತವಾಗಿ ಎಸೆದರು. ಹೀಗಾಗಿ ದೊಡ್ಡ ಹೊಡೆತಗಳನ್ನು ಬಾರಿಸುವುದು ಎದುರಾಳಿ ತಂಡಗಳಿಗೆ ಅಸಾಧ್ಯವಾಯಿತು. ನಾವು ಇಂದು ಕೂಡ ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಿಲ್ಲ. ಹಾಗಾಗಿ ಇಂದಿನ ಗೆಲುವಿನ ಶ್ರೇಯಸ್ಸು ಬೌಲರ್‌ಗಳಿಗೆ ಸಲ್ಲಬೇಕು. ನಿಮ್ಮಲ್ಲಿರುವ ಕೌಶಲ್ಯವನ್ನು ಬೆಂಬಲಿಸುವುದು ಬಹಳ ಮುಖ್ಯವಾಗುತ್ತದೆ. ಸ್ಯಾಮ್ಸ್ ಕೆಲ ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದ್ದರಿ. ಆದರೆ ಅವರಲ್ಲಿರು ಸಾಮರ್ಥ್ಯ ನನಗೆ ತಿಳಿದಿತ್ತು. ಅಂಥಾ ಆಟಗಾರರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗಿರುತ್ತದೆ. ನಮ್ಮಿಂದ ಸಾಧ್ಯವಾದಷ್ಟು ಇರುವ ಸ್ಕ್ವಾಡ್‌ಅನ್ನೇ ಬಳಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ" ಎಂದಿದ್ದಾರೆ ರೋಹಿತ್ ಶರ್ಮಾ.

 92 ರನ್ ಬಾರಿಸಿ ಶತಕದ ಸನಿಹದಲ್ಲಿದ್ದ ವಾರ್ನರ್‌ಗೆ ಬ್ಯಾಟಿಂಗ್ ನೀಡದ ಕುರಿತು ತುಟಿಬಿಚ್ಚಿದ ಪೊವೆಲ್! 92 ರನ್ ಬಾರಿಸಿ ಶತಕದ ಸನಿಹದಲ್ಲಿದ್ದ ವಾರ್ನರ್‌ಗೆ ಬ್ಯಾಟಿಂಗ್ ನೀಡದ ಕುರಿತು ತುಟಿಬಿಚ್ಚಿದ ಪೊವೆಲ್!

ಆಡುವ ಬಳಗ:
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ
ಬೆಂಚ್: ಮ್ಯಾಥ್ಯೂ ವೇಡ್, ವರುಣ್ ಆರೋನ್, ವಿಜಯ್ ಶಂಕರ್, ಜಯಂತ್ ಯಾದವ್, ಗುರುಕೀರತ್ ಸಿಂಗ್ ಮಾನ್, ಅಭಿನವ್ ಮನೋಹರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ದರ್ಶನ್ ನಲ್ಕಂಡೆ, ರಹಮಾನುಲ್ಲಾ ಗುರ್ಬಾಜ್, ಡೊಮಿನಿಕ್ ಡ್ರೇಕ್ಸ್, ಯಶ್ ದಯಾಳ್, ನೂರ್ ಅಹ್ಮದ್

Rohit Sharma ಆಟ ನೋಡಿ ಅಭಿಮಾನಿಗಳು ಖುಷ್ | Oneindia Kannada

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕೀರಾನ್ ಪೊಲಾರ್ಡ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್
ಬೆಂಚ್: ಜಯದೇವ್ ಉನದ್ಕತ್, ಫ್ಯಾಬಿಯನ್ ಅಲೆನ್, ಬೇಸಿಲ್ ಥಂಪಿ, ಅನ್ಮೋಲ್ಪ್ರೀತ್ ಸಿಂಗ್, ಡೆವಾಲ್ಡ್ ಬ್ರೆವಿಸ್, ರಾಹುಲ್ ಬುದ್ಧಿ, ಟ್ರಿಸ್ಟಾನ್ ಸ್ಟಬ್ಸ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಲ್, ಮಯಾಂಕ್ ಮಾರ್ಕಂಡೆ, ರಮಣದೀಪ್ ಸಿಂಗ್, ಸಂಜಯ್ ಯಾದವ್, ಹೃತಿಕ್ ಶೋಕೀನ್

Story first published: Saturday, May 7, 2022, 0:24 [IST]
Other articles published on May 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X