ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಒಸಾಮ' ಎಂದು ನಿಂದಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ: ಮೊಯಿನ್ ಅಲಿ ಆರೋಪ

ಲಂಡನ್, ಸೆಪ್ಟೆಂಬರ್ 15: ಆಸ್ಟ್ರೇಲಿಯಾ ಕ್ರಿಕೆಟಿಗರು 2015ರ ಆಷಸ್ ಸರಣಿ ಸಂದರ್ಭದಲ್ಲಿ ತಮ್ಮ ಮೇಲೆ ಜನಾಂಗೀಯ ನಿಂದನೆ ನಡೆಸಿದ್ದರು ಎಂದು ಇಂಗ್ಲೆಂಡ್ ಕ್ರಿಕೆಟಿಗ ಮೊಯಿನ್ ಅಲಿ ಆರೋಪಿಸಿದ್ದಾರೆ.

ಕಾರ್ಡಿಫ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಮೊಯಿನ್, ಮಹತ್ವದ 77 ರನ್ ಕಾಣಿಕೆ ನೀಡಿದ್ದಲ್ಲದೆ, ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿ ತಮ್ಮ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಆಗಸ್ಟ್‌ನಲ್ಲಿ ಬಿಸಿಸಿಐ ಭಾರತೀಯ ಆಟಗಾರರಿಗೆ ನೀಡಿದ ವೇತನವೆಷ್ಟು ಗೊತ್ತೇ?ಆಗಸ್ಟ್‌ನಲ್ಲಿ ಬಿಸಿಸಿಐ ಭಾರತೀಯ ಆಟಗಾರರಿಗೆ ನೀಡಿದ ವೇತನವೆಷ್ಟು ಗೊತ್ತೇ?

ಈ ಪಂದ್ಯದ ವೇಳೆ ಆಸ್ಟ್ರೇಲಿಯಾ ಆಟಗಾರನೊಬ್ಬ ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದ. ತಮ್ಮ ಕಡೆಗೆ ತಿರುಗಿ ಹೀನಾಯವಾಗಿ ನಿಂದಿಸಿದ್ದ ಎಂದು ಮೊಯಿನ್ ತಮ್ಮ ಜೀವನ ಚರಿತ್ರೆಯಲ್ಲಿ ಬರೆದಿದ್ದಾರೆ.

'ಟೇಕ್ ದಟ್ ಒಸಾಮ'

'ಟೇಕ್ ದಟ್ ಒಸಾಮ'

'ನನ್ನ ವೈಯಕ್ತಿಕ ಪ್ರದರ್ಶನದ ವಿಚಾರದಲ್ಲಿ ಅದು ಅತ್ಯುತ್ತಮ ಮೊದಲ ಆಷಸ್ ಟೆಸ್ಟ್. ಆದರೆ, ಒಂದು ಘಟನೆ ನನಗೆ ತೀವ್ರವಾಗಿ ನೋವುಂಟು ಮಾಡಿದೆ. ನಾನು ಬ್ಯಾಟಿಂಗ್ ಮಾಡುವಾಗ ಆಸ್ಟ್ರೇಲಿಯಾದ ಕ್ರಿಕೆಟಿಗನೊಬ್ಬ ನನ್ನ ಕಡೆಗೆ ತಿರುಗಿ 'ಟೇಕ್ ದಟ್ ಒಸಾಮ' ಎಂದಿದ್ದ. ನಾನೇನು ಕೇಳಿದೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ. ನನ್ನ ಕೋಪ ನೆತ್ತಿಗೇರಿತ್ತು. ಕ್ರಿಕೆಟ್ ಮೈದಾನದಲ್ಲಿ ನಾನು ಎಂದಿಗೂ ಅಷ್ಟು ಕೋಪಗೊಂಡಿರಲಿಲ್ಲ' ಎಂದು ಮೊಯಿನ್ ಹೇಳಿದ್ದಾರೆ.

ಇತಿಹಾಸ : ಬಾಂಗ್ಲಾದಲ್ಲಿ ಸೊಳ್ಳೆ ವಿರುದ್ಧ ಬ್ಯಾಟ್ ಬೀಸಿದ್ದ ಟೀಂ ಇಂಡಿಯಾ

ಇಲ್ಲವೆಂದು ವಾದಿಸಿದ ಆಟಗಾರ

ಇಲ್ಲವೆಂದು ವಾದಿಸಿದ ಆಟಗಾರ

ಆ ಆಟಗಾರ ನನ್ನ ಬಗ್ಗೆ ಹೇಳಿದ್ದನ್ನು ಒಂದಿಬ್ಬರು ಸಹ ಆಟಗಾರರೊಂದಿಗೆ ಹೇಳಿಕೊಂಡಿದ್ದೆ. ಬಹುಶಃ ಟ್ರೆವರ್ ಬೈಲಿಸ್ (ಇಂಗ್ಲೆಂಡ್ ಕೋಚ್) ಅದನ್ನು ಆಸ್ಟ್ರೇಲಿಯಾ ಕೋಚ್ ಡೆರೆನ್ ಲೆಹಮನ್ ಅವರೆದುರು ಪ್ರಸ್ತಾಪಿಸಿದ್ದರು.

ಲೆಹಮನ್ ಆ ಆಟಗಾರನನ್ನು ಪ್ರಶ್ನಿಸಿದ್ದರು. 'ಮೊಯಿನ್ ಅವರನ್ನು ಒಸಾಮ ಎಂದು ಕರೆದಿದ್ದೆಯಾ?' ಅತ ಅದನ್ನು ನಿರಾಕರಿಸಿದ್ದ. 'ಇಲ್ಲ. ನಾನು ಹೇಳಿದ್ದು, ಟೇಕ್ ದಟ್ ಯು ಪಾರ್ಟ್ ಟೈಮರ್ ಎಂಬುದಾಗಿ' ಎಂದು. ಅದನ್ನು ಕೇಳಿ ನನಗೆ ಅಚ್ಚರಿಯಾಯಿತು. ಆದನ ನಿಂದನೆ ಕೇಳಿದ್ದಾಗ ಇಡೀ ಪಂದ್ಯದುದ್ದಕ್ಕೂ ಕೋಪಿಸಿಕೊಂಡೇ ಇದ್ದೆ ಎಂದು ಮೊಯಿನ್ ಬರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ವೈಫಲ್ಯ, ಕೌಂಟಿಯಲ್ಲಿ ಶತಕ: ಫಾರ್ಮ್ ಕಂಡುಕೊಂಡ ಮುರಳಿ ವಿಜಯ್

ಕೆಟ್ಟ ಪದಗಳಿಂದ ನಿಂದನೆ

ಕೆಟ್ಟ ಪದಗಳಿಂದ ನಿಂದನೆ

ಆಸ್ಟ್ರೇಲಿಯಾ ಆಟಗಾರರು ಬೆದರಿಸುತ್ತಿರಲಿಲ್ಲ. ಆದರೆ, ಒರಟಾಗಿ ಮತ್ತು ಅಗೌರವದಿಂದ ನಡೆದುಕೊಳ್ಳುತ್ತಿದ್ದರು. 2015ರ ವಿಶ್ವಕಪ್‌ಗೂ ಮುನ್ನ ಸಿಡ್ನಿಯಲ್ಲಿ ನಾನು ಅವರ ವಿರುದ್ಧ ಮೊದಲ ಪಂದ್ಯ ಆಡಿದ್ದೆ. ಅವರು ನಮ್ಮ ಮೇಲೆ ಒತ್ತಡ ಹೇರುವುದು ಮಾತ್ರವಲ್ಲ, ಕೆಟ್ಟ ಪದಗಳಿಂದ ನಿಂದಿಸುತ್ತಿದ್ದರು ಕೂಡ.

ಅವರ ನಿಂದನೆ ಮೊದಲ ಸಲ ನನಗೆ ತಾಕಿತು. ನಾನು ಅನುಮಾನದ ಲಾಭವನ್ನು ಅವರಿಗೇ ನೀಡಿದೆ. ಆದರೆ, ಅವರ ಜತೆ ಹೆಚ್ಚು ಆಡಿದಷ್ಟೂ ಅವರ ಕೆಟ್ಟಗುಣ ಪರಿಚಯವಾಯಿತು. ಅದರಲ್ಲಿಯೂ ಇಲ್ಲಿ ನಡೆದ ಆಷಸ್‌ನಲ್ಲಿ (2015) ಅವರು ಇನ್ನಷ್ಟು ಕೆಟ್ಟದಾಗಿ ವರ್ತಿಸಿದ್ದರು.

ಜೀವಮಾನವಿಡೀ ಇಷ್ಟಪಡಲಾರೆ

ಜೀವಮಾನವಿಡೀ ಇಷ್ಟಪಡಲಾರೆ

ನನ್ನ ಇಡೀ ಜೀವನದಲ್ಲಿ ನಾನು ಇಷ್ಟಪಡದೆ ಇರುವ ತಂಡವೆಂದರೆ ಅದು ಆಸ್ಟ್ರೇಲಿಯಾ ಮಾತ್ರ. ಅದು ಆಸ್ಟ್ರೇಲಿಯಾ ತಂಡ ಅಥವಾ ನಮ್ಮ ಹಳೆಯ ವೈರಿ ಎಂದಲ್ಲ. ಆದರೆ, ಅವರು ಜನರು ಮತ್ತು ಆಟಗಾರರನ್ನು ಅಗೌರವಿಸುವ ಗುಣವನ್ನು ಮುಂದುವರಿಸಿಕೊಂಡು ಬಂದಿರುವ ಕಾರಣಕ್ಕೆ. ತಪ್ಪುಗಳಾದಾಗ ಜನರ ಬಗ್ಗೆ ನನಗೆ ಅನುಕಂಪ ಮೂಡಬಹುದು. ಆದರೆ, ಆಸ್ಟ್ರೇಲಿಯನ್ನರ ವಿಚಾರದಲ್ಲಿ ನನಗೆ ಹಾಗೆ ಅನಿಸುವುದು ಕಷ್ಟ ಎಂದು ಮೊಯಿನ್ ಬರೆದುಕೊಂಡಿದ್ದಾರೆ.

Story first published: Saturday, September 15, 2018, 14:24 [IST]
Other articles published on Sep 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X