ಮ್ಯಾನ್ಚೆಸ್ಟರ್‌ನಲ್ಲಿ ಮೊಹಮ್ಮದ್ ಶಮಿ, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಆಡ್ತಾರಾ?!

ಲಂಡನ್: ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರಿನ್ನು ಸೆಪ್ಟೆಂಬರ್‌ 10ರಂದು ಮ್ಯಾನ್ಚೆಸ್ಟರ್‌ನಲ್ಲಿ ನಡೆಯಲಿರುವ ಭಾರತ vs ಇಂಗ್ಲೆಂಡ್ ಐದನೇ ಮತ್ತು ಕೊನೇಯ ಟೆಸ್ಟ್‌ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಶಮಿ ಮತ್ತು ಮತ್ತೊಬ್ಬ ವೇಗಿ ಇಶಾಂತ್ ಶರ್ಮಾ ಆಡಿರಲಿಲ್ಲ, ವಿಶ್ರಾಂತಿ ಪಡೆದುಕೊಂಡಿದ್ದರು.

ಚೆನ್ನೈ ಕೋಚ್ ವಿರುದ್ಧ 8 ಮಹಿಳಾ ಅಥ್ಲೀಟ್‌ಗಳಿಂದ ಲೈಂಗಿಕ ಕಿರುಕುಳ ದೂರು!ಚೆನ್ನೈ ಕೋಚ್ ವಿರುದ್ಧ 8 ಮಹಿಳಾ ಅಥ್ಲೀಟ್‌ಗಳಿಂದ ಲೈಂಗಿಕ ಕಿರುಕುಳ ದೂರು!

ಲಂಡನ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಭರ್ಜರಿ 157 ರನ್ ಗಳಿಸಿದ್ದ ಗೆದ್ದಿತ್ತು. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2-1ರ ಮುನ್ನಡೆಯೂ ಗಿಟ್ಟಿಸಿಕೊಂಡಿದೆ. ಆದರೆ ಸರಣಿ ವಿಜೇತರನ್ನು ನಿರ್ಧರಿಸಲು ಮ್ಯಾನ್ಚೆಸ್ಟರ್‌ನಲ್ಲಿ ನಡೆಯಲಿರುವ ಐದನೇ ಟೆಸ್ಟ್‌ ಪ್ರಮುಖವೆನಿಸಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಸರಣಿ ಸಮಬಲವೆನಿಸಲಿದೆ.

ಟಿ20 ವಿಶ್ವಕಪ್ ತಂಡಕ್ಕೆ ಮೆಂಟರ್ ಆಗಲು ಧೋನಿ ಮುಂದಿಟ್ಟ ಷರತ್ತು ಬಹಿರಂಗಪಡಿಸಿದ ಜಯ್ ಶಾಟಿ20 ವಿಶ್ವಕಪ್ ತಂಡಕ್ಕೆ ಮೆಂಟರ್ ಆಗಲು ಧೋನಿ ಮುಂದಿಟ್ಟ ಷರತ್ತು ಬಹಿರಂಗಪಡಿಸಿದ ಜಯ್ ಶಾ

ಗಾಯದಿಂದ ಶಮಿ ಸಂಪೂರ್ಣ ಚೇತರಿಕೆ, ಅಭ್ಯಾಸ ಆರಂಭ
ಲೀಡ್ಸ್‌ನ ಹೆಡ್ಡಿಂಗ್ಲಿಯಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ, ಪಂದ್ಯದ ಬಳಿಕ ವಿಶ್ರಾಂತಿ ಪಡೆದುಕೊಂಡಿದ್ದರು. ಪಡೆದುಕೊಂಡಿದ್ದರು ಅನ್ನುವುದಕ್ಕಿಂತ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈಗ ಶಮಿ ಸಂಪೂರ್ಣವಾಗಿ ಫಿಟ್ ಆಗಿರುವುದರಿಂದ ಬುಧವಾರ (ಸೆಪ್ಟೆಂಬರ್‌ 8) ನಡೆದಿದ್ದ ಟೀಮ್ ಇಂಡಿಯಾದ ಅಭ್ಯಾಸದಲ್ಲಿ ಶಮಿ ಪಾಲ್ಗೊಂಡಿದ್ದಾರೆ. ಅಂತಿಮ ಟೆಸ್ಟ್‌ ಆರಂಭವಾಗಲು ಇನ್ನು ಎರಡು ದಿನಗಳು ಬಾಕಿಯಿರುವಾಗ ಶಮಿ ತಂಡದಲ್ಲಿದ್ದು ಅಭ್ಯಾಸ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. "ಶಮಿ ಈಗ ಫಿಟ್ ಆಗಿದ್ದಾರೆ. ಅವರೀಗ ಆಟೋಮ್ಯಾಟಿಕ್ ಚಾಯ್ಸ್ ಆಗಿ ಉಳಿದಿದ್ದಾರೆ," ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಯಾವುದೇ ಪರಿಸ್ಥಿತಿಯಲ್ಲಿಯೂ ಭಾರತದ ಈ ದಾಂಡಿಗನಿಗೆ ಬೌಲಿಂಗ್ ಕಷ್ಠ: ಮಾರ್ಕ್‌ ವುಡ್ಯಾವುದೇ ಪರಿಸ್ಥಿತಿಯಲ್ಲಿಯೂ ಭಾರತದ ಈ ದಾಂಡಿಗನಿಗೆ ಬೌಲಿಂಗ್ ಕಷ್ಠ: ಮಾರ್ಕ್‌ ವುಡ್

ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ ಕತೆಯೇನು?
ಟೀಮ್ ಇಂಡಿಯಾದ ಇನ್ನಿಬ್ಬರು ಅನುಭವಿ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಮುಖ್ಯವಾಗಿ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ 127 ರನ್, ಪೂಜಾರ 61 ರನ್ ಕೊಡುಗೆ ನೀಡಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್ ಮಾರಕ ಬೌಲಿಂಗ್‌ನಿಂದಾಗಿ ಪೂಜಾರ ಮತ್ತು ರೋಹಿತ್ ಇಬ್ಬರಿಗೂ ಗಾಯವಾಗಿತ್ತು. ಮುಖ್ಯವಾಗಿ ರೋಹಿತ್ ತೊಡೆ ಭಾಗದಲ್ಲಿ ಚೆಂಡು ಬಡಿದ ಗುರುತುಗಳು ಕಾಣಿಸಿದ್ದವು. ಹೀಗಾಗಿ ಮುಂದಿನ ಪಂದ್ಯದಲ್ಲಿ ಅವರಿಬ್ಬರು ಆಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಅನುಮಾನ ಮೂಡಿದೆ. ಆದರೆ ಬಲ್ಲ ಮಾಹಿತಿಯ ಪ್ರಕಾರ ತಂಡದ ಫಿಸಿಯೋಗಳು ರೋಹಿತ್ ಮತ್ತು ಪೂಜಾರ ಇಬ್ಬರನ್ನು ಆಗಾಗ ಪರಿಶೀಲಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಉತ್ತಮಗೊಳ್ಳುತ್ತಿದೆ. ಹೀಗಾಗಿ ಕೊನೇ ಟೆಸ್ಟ್‌ನಲ್ಲಿ ಇಬ್ಬರೂ ಆಡುವ ನಿರೀಕ್ಷೆಯಿದೆ ಎನ್ನಲಾಗಿದೆ.

ಟೀಮ್ ಇಂಡಿಯಾ ನಾಯಕತ್ವದಿಂದ ವಿರಾಟ್ ಔಟ್ | Oneindia Kannada

ರೋಹಿತ್ ಶರ್ಮಾ ಆಡೋದು ಬಹುತೇಕ ಖಚಿತ
ರೋಹಿತ್‌ಗೆ ಚೆಂಡು ಬಡಿದು ತೊಡೆಯ ಭಾಗದಲ್ಲಿ ಗಾಯಗಳಾಗಿದ್ದವು. ಈ ಬಗ್ಗೆ ಸ್ವತಃ ರೋಹಿತ್ ಮಾತನಾಡಿದ್ದರು. "ಈ ಕೂಡಲೇ ಗಾಯವನ್ನು ಪರಿಶೀಲಿಸುತ್ತೇವೆ. ಅದರ ಸ್ಥಿತಿ ಹೇಗಿದೆ ಎಂದು ಕ್ಷಣ ಕ್ಷಣಕ್ಕೂ ಗಮನ ಹರಿಸುತ್ತಿರುತ್ತೇವೆ ಎಂದು ಫಿಸಿಯೋ ಸಂದೇಶ ನೀಡಿದ್ದಾರೆ. ಆದರೆ ಗಾಯ ಅಂಥ ಗಂಭೀರ ಏನೂ ಇಲ್ಲ. ಬೇಗ ಗುಣವಾಗುತ್ತದೆ ಎಂದು ನನಗನ್ನಿಸುತ್ತದೆ," ಎಂದು ರೋಹಿತ್ ಹೇಳಿದ್ದರು. ಇದರರ್ಥ ಐದು ಪಂದ್ಯಗಳ ಟೆಸ್ಟ್ ಸರಣಿ ವಿಜೇತರನ್ನು ನಿರ್ಧರಿಸಲು ನಿರ್ಣಾಯಕವೆನಿಸಿರುವ ಐದನೇ ಟೆಸ್ಟ್‌ ಪಂದ್ಯದ ವೇಳೆ ಶರ್ಮಾ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಆ ಪಂದ್ಯದಲ್ಲಿ ಆಡೋದು ಬಹುತೇಕ ಖಚಿತ.

For Quick Alerts
ALLOW NOTIFICATIONS
For Daily Alerts
Story first published: Wednesday, September 8, 2021, 21:00 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X