ಕಾರು ಅಪಘಾತದಲ್ಲಿ ವೇಗಿ ಮೊಹಮ್ಮದ್ ಶಮಿಗೆ ತಲೆಗೆ ಪೆಟ್ಟು

Posted By:
Mohammed Shami injured in road accident

ನವದೆಹಲಿ, ಮಾರ್ಚ್ 25: ಟೀಂ ಇಂಡಿಯಾದ ಕ್ರಿಕೆಟರ್ ಮೊಹಮ್ಮದ್ ಶಮಿ ಅವರಿಗೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯವಾಗಿದೆ. ಡೆಹ್ರಾಡೂನ್ ನಿಂದ ದೆಹಲಿಗೆ ತೆರಳುವಾಗ ಶಮಿ ಅವರಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಎಎನ್ಐ ವರದಿ ಮಾಡಿದೆ.

ಐಪಿಎಲ್ 2018: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವೇಳಾಪಟ್ಟಿ

ಶಮಿ ಅವರ ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ತಲೆಗೆ 10 ಹೊಲಿಗೆ ಹಾಕಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡೆಹ್ರಾಡೂನ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ವೇಗಿ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದ ಬಿಸಿಸಿಐ

ಶಮಿ ಅವರ ವಿರುದ್ಧ ಕೌಟುಂಬಿಕ ಕಲಹ ಕೇಸ್ ದಾಖಲಿಸಿದ್ದ ಅವರ ಪತ್ನಿ ಹಸೀನ್ ಜಹಾನ್ ಅವರು ಪಾಕಿಸ್ತಾನದ ಯುವತಿಯ ನೆರವಿನಿಂದ ಮ್ಯಾಚ್ ಫಿಕ್ಸಿಂಗ್ ನಲ್ಲೂ ಶಮಿ ತೊಡಗಿದ್ದರು ಎಂದು ಆರೋಪಿಸಿದ್ದರು. ಆದರೆ, ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಮುಕ್ತರಾಗಿದ್ದರು.

ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಹೀಗಾಗಿ, ಶಮಿ ಅವರಿಗೆ ವಾರ್ಷಿಕ ಗುತ್ತಿಗೆ ಹಾಗೂ ಐಪಿಎಲ್ ನಲ್ಲಿ ಆಡಲು ಅವಕಾಶ ಸಿಕ್ಕಿತ್ತು. ಐಪಿಎಲ್11 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಶಮಿ ಆಡಲು ಆಯ್ಕೆಯಾಗಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, March 25, 2018, 11:19 [IST]
Other articles published on Mar 25, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ