ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆದ 10 ಆಟಗಾರರು

IPL Auction

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15 ನೇ ಸೀಸನ್‌ಗೆ ದಿನಗಣನೆ ಶುರುವಾಗಿದ್ದು, ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಆಟಗಾರರ ಮೇಲೆ ಫ್ರಾಂಚೈಸಿಗಳು ಭಾರೀ ಮೊತ್ತದ ಬಿಡ್‌ ನಡೆಸಲಿವೆ. ಇದರ ನಡುವೆ ಕೆಲವು ಆಟಗಾರರು ಹೆಚ್ಚು ಮೂಲ ಬೆಲೆ ಹೊಂದಿದ್ರೆ ಮತ್ತು ಕೆಲವರು ಕಡಿಮೆ ಮೌಲ್ಯವನ್ನು ಹೊಂದಿದ್ದಾರೆ.

ಪ್ರತಿ ಸೀಸನ್‌ನಂತೆ ಕೇವಲ ಎಂಟು ತಂಡಗಳಷ್ಟೇ ಕಾದಾಟಕ್ಕೆ ಇಳಿಯುತ್ತಿಲ್ಲ. ಬದಲಾಗಿ ಈ ಬಾರಿ 10 ತಂಡಗಳು ಅಖಾಡಕ್ಕಿಳಿಯಲಿದ್ದು, ಇದುವರೆಗೂ ನಡೆಯುತ್ತಿದ್ದ ಒಟ್ಟು 60 ಪಂದ್ಯಗಳ ಬದಲಿಗೆ ಒಟ್ಟು 74 ಪಂದ್ಯಗಳು ನಡೆಯಲಿದೆ. ಹೀಗಾಗಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 10 ಫ್ರಾಂಚೈಸಿಗಳು ಕಣ್ಣಿಟ್ಟಿದ್ದು, ಕುತೂಹಲ ಹೆಚ್ಚುತ್ತಿದೆ.

ಐಪಿಎಲ್ ಇತಿಹಾಸದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಸೀಸನ್‌ನಲ್ಲಿ ಕೆಲ ಆಟಗಾರರು ಬಹು ಕೋಟಿ ಮೊತ್ತಕ್ಕೆ ಬಿಡ್ ಆಗುವುದನ್ನ ಕಂಡಿದ್ದೇವೆ. ಹೀಗೆ ಅತಿ ದುಬಾರಿ ಮೊತ್ತಕ್ಕೆ ಬಿಡ್ ಆದ 10 ಆಟಗಾರರು ಯಾರು ಎಂಬುದನ್ನ ಈ ಕೆಳಗೆ ತಿಳಿಯಿರಿ

ರಶೀದ್ ಖಾನ್- 15 ಕೋಟಿ ರೂಪಾಯಿ (2022)

ರಶೀದ್ ಖಾನ್- 15 ಕೋಟಿ ರೂಪಾಯಿ (2022)

ಟಿ20 ಕ್ರಿಕೆಟ್‌ನ ಸೂಪರ್ ಸ್ಟಾರ್‌ ರಶೀದ್‌ ಖಾನ್‌ನಂತಹ ಸ್ಪಿನ್ನರ್ ಹೊಂದಲು ಪ್ರತಿ ತಂಡವು ಬಯಸುತ್ತದೆ. ಟಿ20 ಕ್ರಿಕೆಟ್‌ನಲ್ಲಿ ಈಗಾಗಲೇ 400ಕ್ಕೂ ಹೆಚ್ಚು ವಿಕೆಟ್ ಕಬಳಿಸಿರುವ ರಶೀದ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ತಂಡದಲ್ಲಿದ್ದರು. ಆದ್ರೆ ಈ ಬಾರಿ ರೀಟೈನ್ ಮಾಡಿಕೊಳ್ಳಲು ಬಯದ ರಶೀದ್ ಅಹಮದಾಬಾದ್ ತಂಡ ಸೇರಿದ್ದಾರೆ.

2017 ರ ಮೊದಲು ನಾಲ್ಕು ಕೋಟಿ ರೂಪಾಯಿಗಳಿಗೆ ರಶೀದ್ ಖಾನ್ ಅವರನ್ನು ಹೈದರಾಬಾದ್ ಫ್ರಾಂಚೈಸಿ ಖರೀದಿಸಿತ್ತು. ಅಲ್ಲಿಂದ 2021ರ ಸೀಸನ್‌ವರೆಗೆ ರಶೀದ್ ಖಾನ್ ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಅವಿಭಾಜ್ಯ ಅಂಗವಾಗಿದ್ರು. ಇದುವರೆಗೆ 76 ಪಂದ್ಯಗಳನ್ನು ಆಡಿರುವ ಅವರು 93 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದ್ರೆ ಈ ಬಾರಿ ರಶೀದ್ ಅಹಮದಾಬಾದ್ ಪರ ಆಡಲಿದ್ದಾರೆ.

ಬರೋಬ್ಬರಿ 15 ಕೋಟಿ ರೂಪಾಯಿಗೆ ಅಹಮದಾಬಾದ್ ತಂಡ ಸೇರಿರುವ ರಶೀದ್ ಖಾನ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಲಿದ್ದಾರೆ.

ಹಾರ್ದಿಕ್ ಪಾಂಡ್ಯ- 15 ಕೋಟಿ ರೂಪಾಯಿ (2022)

ಹಾರ್ದಿಕ್ ಪಾಂಡ್ಯ- 15 ಕೋಟಿ ರೂಪಾಯಿ (2022)

ಹಾರ್ದಿಕ್ ಮತ್ತು ರಶೀದ್ ಅವರಿಗೆ ತಲಾ 15 ಕೋಟಿ ನೀಡಲು ಅಹಮದಾಬಾದ್ ಫ್ರಾಂಚೈಸಿ ನಿರ್ಧರಿಸಿದೆ. 2015 ರಲ್ಲಿ 10 ಲಕ್ಷ ರೂ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಅನ್‌ಕ್ಯಾಪ್ಡ್ ಆಟಗಾರನಾಗಿ ಆಯ್ಕೆಯಾದ ಹಾರ್ದಿಕ್‌ ಪಾಂಡ್ಯ, ಕಳೆದ ಸೀಸನ್‌ವರೆಗೂ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ರು. ಆದ್ರೆ ಇದೇ ಮೊದಲ ಬಾರಿಗೆ ಪಾಂಡ್ಯ ಬೇರೆ ಫ್ರಾಂಚೈಸಿಯಲ್ಲಿ ಆಡಲು ಮುಂದಾಗಿದ್ದಾರೆ.

91 ಪಂದ್ಯಗಳಲ್ಲಿ 153.91 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಪಾಂಡ್ಯ 1476 ರನ್ ದಾಖಲಿಸಿದ್ದಾರೆ. ಅಹಮದಾಬಾದ್ ಫ್ರಾಂಚೈಸಿ ಇವರನ್ನ ಬರೋಬ್ಬರಿ 15 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

ಬಿಸಿಸಿಐ ಹಾಗೂ ಟೀಂ ಇಂಡಿಯಾಗೆ ದೊಡ್ಡ ಧನ್ಯವಾದ ಎಂದ ಗ್ರೇಮ್ ಸ್ಮಿತ್

ಪ್ಯಾಟ್ ಕಮಿನ್ಸ್- 15.50 ಕೋಟಿ ರೂಪಾಯಿ (2022)

ಪ್ಯಾಟ್ ಕಮಿನ್ಸ್- 15.50 ಕೋಟಿ ರೂಪಾಯಿ (2022)

ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 1 ಬೌಲರ್ ಆಗಿರುವ ಪ್ಯಾಟ್ ಕಮಿನ್ಸ್ ಉತ್ತಮ ಬೌಲರ್‌ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. 2020ರ ಐಪಿಎಲ್ ಮೆಗಾ ಹರಾಜಿನಲ್ಲಿ ಈತನನ್ನ ಖರೀದಿಸಿಲು ಕೊಲ್ಕತ್ತಾ ನೈಟ್‌ ರೈಡರ್ಸ್ ಮತ್ತು ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ರು. ಅಂತಿಮವಾಗಿ ಪ್ಯಾಟ್ ಕಮಿನ್ಸ್ 15.50 ಕೋಟಿ ರೂಪಾಯಿಗೆ ಕೆಕೆಆರ್ ಪರ ವಾಲಿದ್ರು.

ಕೆಕೆಆರ್ ಜೊತೆಗಿನ ಅವರ ಎರಡೂ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 8.23 ಎಕಾನಮಿಯಲ್ಲಿ ಬೌಲಿಂಗ್‌ ಮಾಡು ಕಮಿನ್ಸ್‌ , ಕೆಳಕ್ರಮಾಂಕದಲ್ಲಿ ಉತ್ತಮ ಬ್ಯಾಟ್‌ ಬೀಸುವ ಸಾಮರ್ಥ್ಯವನ್ನ ಸಹ ಹೊಂದಿದ್ದಾರೆ.

ಯುವರಾಜ್ ಸಿಂಗ್ 16 ಕೋಟಿ (2015)

ಯುವರಾಜ್ ಸಿಂಗ್ 16 ಕೋಟಿ (2015)

ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್ ಸಿಂಗ್, 2019 ರಲ್ಲಿ ನಿವೃತ್ತರಾಗುವ ಮೊದಲು, ಅವರು ಹಲವಾರು ಫ್ರಾಂಚೈಸಿಗಳ ಭಾಗವಾಗಿದ್ದರು. ಪಂಜಾಬ್ ಕಿಂಗ್ಸ್, ಪುಣೆ ವಾರಿಯರ್ಸ್ ಇಂಡಿಯಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಅವರು ಪ್ರತಿನಿಧಿಸಿದ ತಂಡಗಳಾಗಿವೆ.

ಆದ್ರೆ ಈ ಹಿಂದೆ ಅವರು 2015ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್) ಅವರನ್ನು 16 ಕೋಟಿಗಳ ಭಾರಿ ಬೆಲೆಗೆ ಖರೀದಿ ಮಾಡಿತ್ತು. ಇದು ಆ ಸಮಯದಲ್ಲಿ ಅತಿ ಹೆಚ್ಚು ಹರಾಜು ಬಿಡ್ ಆಗಿತ್ತು.

ಆದ್ರೆ ಆ ವರ್ಷ ದೆಹಲಿ ಫ್ರಾಂಚೈಸಿ ಪರ ಯಶಸ್ವಿಯಾಗಿ ಬ್ಯಾಟ್ ಬೀಸಲಿಲ್ಲ. ಎರಡು ಅರ್ಧಶತಕಗಳೊಂದಿಗೆ, ಅವರು 248 ರನ್ ಗಳಿಸಿದರು ಮತ್ತು ಇಡೀ ಪಂದ್ಯಾವಳಿಯಲ್ಲಿ ಬೌಲರ್ ಆಗಿ ಕೇವಲ ಒಂದು ವಿಕೆಟ್ ಪಡೆದರು. ಪರಿಣಾಮವಾಗಿ, ನಂತರದ ಹರಾಜಿನಲ್ಲಿ, ಅವರನ್ನು ರಿಲೀಸ್ ಮಾಡಲಾಯಿತು.

16 ಕೋಟಿಗೂ ಹೆಚ್ಚು ಬಿಡ್ ಆದ ಆಟಗಾರರು

16 ಕೋಟಿಗೂ ಹೆಚ್ಚು ಬಿಡ್ ಆದ ಆಟಗಾರರು

ಈ ಬಾರಿಯ ರೀಟೈನ್ ಪ್ರಕ್ರಿಯೆಯಲ್ಲಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ವರು ಆಟಗಾರರನ್ನ ರೀಟೈನ್ ಮಾಡಿಕೊಂಡಿದೆ. ಎಲ್ಲರಿಗೂ ತುಂಬಾ ಆಶ್ಚರ್ಯ ಮೂಡಿಸಿರುವ ಆಯ್ಕೆಯಾಗಿ ರವೀಂದ್ರ ಜಡೇಜಾ ರೀಟೈನ್ ಆದ ಮೊದಲ ಪ್ಲೇಯರ್ ಆಗಿ ಹೊರಹೊಮ್ಮಿದ್ದು, ಜಡ್ಡು 16 ಕೋಟಿಗೆ ರೀಟೈನ್ ಆಗಿದ್ದಾರೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ಈ ವರ್ಷ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ರನ್ನ 16 ಕೋಟಿ ರೂಪಾಯಿಗೆ ರೀಟೈನ್ ಮಾಡಿಕೊಂಡರೆ, ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾರನ್ನ 16 ಕೋಟಿ ರೂಪಾಯಿ ಕೊಟ್ಟು ಮೊದಲ ಆಟಗಾರನಾಗಿ ಉಳಿಸಿಕೊಂಡಿದೆ. ಹೀಗೆ ಹೆಚ್ಚು ಮೊತ್ತಕ್ಕೆ ಬಿಡ್ ಆದ ಉಳಿದ ಆಟಗಾರರೆಂದರೆ

ಕ್ರಿಸ್ ಮೊರಿಸ್ 16.25 ಕೋಟಿ- ರಾಜಸ್ತಾನ್ ರಾಯಲ್ಸ್‌ (2021)
ವಿರಾಟ್ ಕೊಹ್ಲಿ 17 ಕೋಟಿ- ಆರ್‌ಸಿಬಿ (2018)
ಕೆ.ಎಲ್ ರಾಹುಲ್ 17 ಕೋಟಿ- ಲಕ್ನೋ ಸೂಪರ್ ಜಾಯಿಂಟ್ಸ್‌ (2022)

Virat ವಿಕೆಟ್ ತೆಗೆದ ಸೌತ್ ಆಫ್ರಿಕಾ ಬೌಲರ್ ಬಾಯಲ್ಲಿ ಜೈ ಶ್ರೀರಾಮ್ ಜಪ | Oneindia Kannada

Story first published: Tuesday, January 25, 2022, 9:44 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X