ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಹಾಗೂ ಟೀಂ ಇಂಡಿಯಾಗೆ ದೊಡ್ಡ ಧನ್ಯವಾದ ಎಂದ ಗ್ರೇಮ್ ಸ್ಮಿತ್

Graem smith

ಕೋವಿಡ್-19 ರೂಪಾಂತರ ಒಮಿಕ್ರೋನ್ ವೈರಸ್ ಇಡೀ ವಿಶ್ವವನ್ನೇ ಆತಂಕದಲ್ಲಿ ಕಾಲ ಕಳೆಯುತ್ತಿದ್ದು, ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿದ ಟೀಂ ಇಂಡಿಯಾಗೆ ನಿಜಕ್ಕೂ ದೊಡ್ಡ ಧನ್ಯವಾದ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್‌ನ ಡೈರೆಕ್ಟರ್ ಗ್ರೇಮ್‌ ಸ್ಮಿತ್ ಹೇಳಿದ್ದಾರೆ.

ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ ಹಾಗೂ ಟಿ20 ಸರಣಿ ಬಳಿಕ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿತ್ತು. ಆದ್ರೆ ಒಮಿಕ್ರಾನ್ ರೂಪಾಂತರ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಬಳಿಕ ಅನೇಕ ರಾಷ್ಟ್ರಗಳು ಆಫ್ರಿಕನ್ನರ ರಾಷ್ಟ್ರಗಳಿಗೆ ಜನರು ತೆರಳುವುದಕ್ಕೆ ಕಠಿಣ ನಿಯಮಗಳನ್ನ ಹೇರಿತು, ಇದರ ಜೊತೆಗೆ ಟೀಂ ಇಂಂಡಿಯಾ ಪ್ರವಾಸದ ಮೇಲೂ ಕರಿಛಾಯೆ ಬೀರಿತ್ತು.

ಆದ್ರೆ ಹಿಂದಿನ ದಿನಾಂಕಗಳನ್ನ ಮರು ಹೊಂದಿಸಿ ಧೈರ್ಯದಿಂದ ತನ್ನ ತಂಡವನ್ನ ಕಳುಹಿಸಿ ಕೊಟ್ಟ ಬಿಸಿಸಿಐ, ವಿಶ್ವದ ಎಲ್ಲಾ ಕ್ರಿಕೆಟ್ ರಾಷ್ಟ್ರಗಳಿಗೆ ಮಾದರಿಯಾಗಿ ತೋರಿಸಿದೆ. ಇದನ್ನರಿತ ಕ್ರಿಕೆಟ್ ಸೌತ್ ಆಫ್ರಿಕಾ ಭಾರತಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂಬಂತೆ ಕೃತಜ್ಞತೆ ತಿಳಿಸಿದೆ.

ಟೆಸ್ಟ್ ಹಾಗೂ ಏಕದಿನ ಸರಣಿಯನ್ನ ಒಂದು ವಾರಗಳ ಕಾಲ ಮುಂದೂಡಲಾಗಿತ್ತು!

ಟೆಸ್ಟ್ ಹಾಗೂ ಏಕದಿನ ಸರಣಿಯನ್ನ ಒಂದು ವಾರಗಳ ಕಾಲ ಮುಂದೂಡಲಾಗಿತ್ತು!

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸವನ್ನ ಒಮಿಕ್ರಾನ್ ದೃಷ್ಟಿಯಿಂದ ಪರಿಷ್ಕೃತ ದಿನಾಂಕಗಳೊಂದಿಗೆ ನಡೆಯಿತು. ಮೊದಲ ಟೆಸ್ಟ್ ಡಿಸೆಂಬರ್ 26 ರಂದು ನಡೆಯಿತು. ಆದ್ರೆ ಈ ಮೊದಲು ವೇಳಾಪಟ್ಟಿಯ ಪ್ರಕಾರ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ 9 ದಿನಗಳ ಮೊದಲು (ಡಿಸೆಂಬರ್ 17) ಪ್ರಾರಂಭವಾಗಬೇಕಿತ್ತು.

ಭಾರತವು ಮೂಲತಃ ನಿಗದಿತ ಸಮಯಕ್ಕಿಂತ ಒಂದು ವಾರದ ನಂತರ ದಕ್ಷಿಣ ಆಫ್ರಿಕಾಗೆ ತೆರಳಿತು. ಜೊತೆಗೆ ಬಾಕ್ಸಿಂಗ್ ಡೇ ಟೆಸ್ಟ್‌ನೊಂದಿಗೆ ಸರಣಿಯೊಂದಿಗೆ ಟೆಸ್ಟ್ ಪ್ರಾರಂಭವಾಯಿತು.

ಪ್ರೇಕ್ಷಕರಿಲ್ಲದೆ ಟೂರ್ನಿ ಯಶಸ್ವಿಯಾಗಿ ನಡೆಯಿತು

ಪ್ರೇಕ್ಷಕರಿಲ್ಲದೆ ಟೂರ್ನಿ ಯಶಸ್ವಿಯಾಗಿ ನಡೆಯಿತು

ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಯಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಮೂರು ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳು ಯಾವುದೇ ಪ್ರೇಕ್ಷಕರಿಲ್ಲದೆ ಯಶಸ್ವಿಯಾಗಿಯೇ ನಡೆಯಿತು. ಸಾಕಷ್ಟು ಜಿದ್ದಾಜಿದ್ದಿನ ಟೆಸ್ಟ್ ಸರಣಿಯನ್ನ ಆಫ್ರಿಕನ್ನರು 2-1ರಿಂದ ಜಯಿಸಿದ್ರೆ, ಏಕದಿನ ಸರಣಿಯನ್ನ 3-0 ಅಂತರದಲ್ಲಿ ಗೆದ್ದುಕೊಂಡರು.

6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು

ಟಿ20 ಸರಣಿ ಮುಂದೂಡಿಕೆಯಾಗಿದೆ

ಟಿ20 ಸರಣಿ ಮುಂದೂಡಿಕೆಯಾಗಿದೆ

ಭಾರತ ತಂಡ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನ ಸಹ ಆಡಬೇಕಿತ್ತು. ಆದ್ರೆ ಪರಿಷ್ಕೃತ ದಿನಾಂಕದಿಂದಾಗಿ ಈ ಮೊದಲು ತೀರ್ಮಾನಿಸಿದ್ದ ಟಿ20 ಸರಣಿಯನ್ನ ಮತ್ತೊಂದು ಸಮಯದಲ್ಲಿ ಆಡಲಾಗುವುದು.

ಭಾರತಕ್ಕೆ ಧನ್ಯವಾದ ತಿಳಿಸಿದ CSA ಡೈರೆಕ್ಟರ್ ಗ್ರೇಮ್ ಸ್ಮಿತ್‌

ದಕ್ಷಿಣ ಆಫ್ರಿಕಾದ ಯಶಸ್ವಿ ಮಾಜಿ ನಾಯಕ, ಪ್ರಸ್ತುತ ಸಿಎಸ್‌ಎ ಡೈರೆಕ್ಟರ್ ಗ್ರೇಮ್ ಸ್ಮಿತ್ ಕಷ್ಟದ ಕಾಲದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಂಬಿ ಟೀಂ ಇಂಡಿಯಾವನ್ನ ಕಳುಹಿಸಿಕೊಟ್ಟ ಬಿಸಿಸಿಐಗೆ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾಗೆ ದೊಡ್ಡ ಧನ್ಯವಾದ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮೇಲಿನ ನಂಬಿಕೆಯನ್ನು ಹುಟ್ಟುಹಾಕುವಲ್ಲಿ ಭಾರತವು ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಮತ್ತು ಅದೇ ರೀತಿಯಲ್ಲಿ ಇನ್ನೂ ಹೆಚ್ಚಿನ ಪ್ರವಾಸಗಳನ್ನು ನಡೆಸಬೇಕೆಂದು ನಿರೀಕ್ಷಿಸುತ್ತದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹೇಳಿದರು.

ಕೋವಿಡ್ ಪ್ರಕರಣಗಳ ಉಲ್ಬಣದಿಂದಾಗಿ ಆಸ್ಟ್ರೇಲಿಯಾ ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿತು. ಇದರ ಪರಿಣಾಮವಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ತಲುಪಲು ಸಾಧ್ಯವಾಗಲಿಲ್ಲ.

"ಬಿಸಿಸಿಐ JayShahSGanguly99 ಮತ್ತು ಭಾರತೀಯ ಆಟಗಾರರಿಗೆ ದೊಡ್ಡ ಧನ್ಯವಾದಗಳು. ನೀವು ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಸುರಕ್ಷಿತ ಮತ್ತು ಯಶಸ್ವಿ ಪ್ರವಾಸವನ್ನು ಹಿಂತೆಗೆದುಕೊಳ್ಳುವ ಸಾಮರ್ಥ್ಯದಲ್ಲಿ ತೋರಿದ ನಂಬಿಕೆಗೆ ಧನ್ಯವಾದಗಳು. ಅನಿಶ್ಚಿತ ಸಮಯದಲ್ಲಿ ನಿಮ್ಮ ಬದ್ಧತೆಯು ಇತರರು ಅನುಸರಿಸಬಹುದಾದ ಉದಾಹರಣೆಯನ್ನು ಸೃಷ್ಟಿಸಿದೆ'' ಎಂದು ಸ್ಮಿತ್ ಟ್ವೀಟ್ ಮಾಡಿದ್ದಾರೆ.

ವಿಶ್ವದ ಬಲಿಷ್ಠ ಕ್ರಿಕೆಟ್ ರಾಷ್ಟ್ರವಾಗಿ ಮೆರೆಯುತ್ತಿದ್ದ ಭಾರತ ಮತ್ತೊಮ್ಮೆ ಹರಿಣಗಳ ನಾಡಲ್ಲಿ ಸೋಲುವ ಮೂಲಕ ಕಣ್ತೆರೆಸಿದಂತಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಗಾಯಾಳು ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.

Kohli ನಾಯಕತ್ವ ಬಿಡುವ ಹಿಂದೆ ದೊಡ್ಡ ಮಾಸ್ಟರ್ ಪ್ಲಾನ್ ಇತ್ತಾ! | Oneindia Kannada

Story first published: Monday, January 24, 2022, 17:20 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X