ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಅಪ್ಪನ ಬ್ಯಾಟಿಂಗ್ ಶೈಲಿ ಅನುಸರಿಸದ ದ್ರಾವಿಡ್ ಮಕ್ಕಳು!'

By Mahesh

ಬೆಂಗಳೂರು, ನ.23: 'ನನ್ನ ಮಕ್ಕಳು ನನ್ನ ಬ್ಯಾಟಿಂಗ್ ಶೈಲಿ ಅನುಸರಿಸುತ್ತಿಲ್ಲ ಎಂದು ಕ್ರಿಕೆಟ್ ಲೋಕದ 'ವಾಲ್' ರಾಹುಲ್ ದ್ರಾವಿಡ್ ಅವರು ಹೇಳಿದ್ದಾರೆ.

ಭಾರತ ಎ ಹಾಗೂ ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಮಾತನಾಡಿ, ತಮ್ಮ ಮಕ್ಕಳಾದ ಸಮಿತ್ ಹಾಗೂ ಅನ್ವಯ್ ಇಬ್ಬರು ನನ್ನ ಬ್ಯಾಟಿಂಗ್ ಶೈಲಿ ಅನುಸರಿಸುತ್ತಿಲ್ಲ. ಬದಲಿಗೆ ಇಬ್ಬರು ಎಬಿ ಡಿ ವಿಲಿಯರ್ಸ್ ಬ್ಯಾಟಿಂಗ್ ಶೈಲಿಗೆ ಮಾರು ಹೋಗಿದ್ದಾರೆ ಎಂದು ಹೇಳಿದ್ದಾರೆ. [ರಾಹುಲ್ ದ್ರಾವಿಡ್ ಮಗ ಸಮಿತ್ ಸಕತ್ ಬ್ಯಾಟಿಂಗ್]

My sons try to copy AB de Villiers, reveals Rahul Dravid

ಎಬಿ ಡಿವಿಲಿಯರ್ಸ್ ರಂತೆ ಮೈದಾನದ ತುಂಬೆಲ್ಲಾ '360 ಡಿಗ್ರಿ ಬ್ಯಾಟ್ಸ್ ಮನ್' ಚೆಂಡು ಅಟ್ಟಲು ಇಬ್ಬರು ಬಯಸುತ್ತಾರೆ. ಎಬಿಡಿ ಶೈಲಿಯಲ್ಲಿ ಬ್ಯಾಟ್ ಬೀಸುವುದನ್ನು ಕಂಡಿದ್ದೇನೆ. ಈ ರೀತಿ ಬ್ಯಾಟಿಂಗ್ ಶೈಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.[ಸಚಿನ್ ಗಿಂತ ಎಬಿ ಡಿ ಜನಪ್ರಿಯತೆ ಹೆಚ್ಚಾಗಲಿದೆಯಂತೆ!]

ಆದರೆ, ಈ ಶೈಲಿ ಅನುಕರಣೆ ಅಷ್ಟು ಸುಲಭವಲ್ಲ. ಈ ರೀತಿ ಆಲ್ ರೌಂಡ್ ಬ್ಯಾಟಿಂಗ್ ಮಾಡಲು ಎಬಿಡಿ ಅವರ ಕಠಿಣ ಪರಿಶ್ರಮವೇ ಕಾರಣ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡುತ್ತಾ ಹೇಳಿದರು.

ದ್ರಾವಿಡ್ ಅವರ ಹಿರಿಯ ಮಗ ಸಮಿತ್ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರ ಶಾಲಾ ಟೂರ್ನಮೆಂಟ್ ನಲ್ಲಿ ಶ್ರೇಷ್ಠ ಬ್ಯಾಟ್ಸ್ ಮನ್ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿದ್ದರು. [ದ್ರಾವಿಡ್, ಗಂಗೂಲಿಗೆ ಸಿಗಲಿರುವ ಗೌರವ ಧನವೆಷ್ಟು?]

31 ವರ್ಷ ವಯಸ್ಸಿನ ಎಬಿ ಡಿ ವಿಲಿಯರ್ಸ್ ಅವರು ಇತ್ತೀಚಿಗೆ ಬೆಂಗಳೂರಿನಲ್ಲಿ ತಮ್ಮ ವೃತ್ತಿ ಬದುಕಿನ 100ನೇ ಟೆಸ್ಟ್ ಪಂದ್ಯವನ್ನಾಡಿದ್ದರು. ಮಳೆಗೆ ಆಹುತಿಯಾಗಿ ಡ್ರಾ ಆದ ಪಂದ್ಯದಲ್ಲೂ ಎಬಿಡಿ ಅವರು ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X