ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತ್ಯುತ್ತಮ ಆರಂಭದ ಬಳಿಕ ಮಧ್ಯಮ ಕ್ರಮಾಂಕದ ಜೊತೆಯಾಟ ಅಗತ್ಯ: ಸೋಲಿನ ಬಳಿಕ ಸ್ಮಿತ್ ಪ್ರತಿಕ್ರಿಯೆ

Needed partnerships in the middle after strong start: RR captain Steve Smith

ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರೋಚಕವಾಗಿ ಸೋಲುಕಂಡಿತು. ಅಂತಿಮ ಹಂತದವರೆಗೂ ಗೆಲುವಿನ ಸಾಧ್ಯತೆಯನ್ನು ಹೊಂದಿದ್ದ ಆರ್‌ಆರ್ ಕೊನೆಯಲ್ಲಿ ಗೆಲುವು ಸಾಧ್ಯವಾಗಿಸಲು ವಿಫಲವಾಗಿ ಟೂರ್ನಿಯಲ್ಲಿ ಐದನೇ ಸೋಲನ್ನು ಕಂಡಿತು. ಈ ಸೋಲಿನ ಬಳಿಕ ನಾಯಕ ಸ್ಟೀವ್ ಸ್ಮಿತ್ ಪ್ರತಿಕ್ರಿಯಿಸಿದ್ದಾರೆ.

"ನಾವು ಉತ್ತಮ ಆರಂಭವನ್ನು ಪಡೆದೆವು. ಜೋಸ್ (ಬಟ್ಲರ್) ಸ್ಟೋಕ್ಸಿ(ಬೆನ್ ಸ್ಟೋಕ್ಸ್) ಉತ್ತಮ ಪ್ರದರ್ಶನ ನೀಡದ ಬಳಿಕ ಎರಡು ವಿಕೆಟ್ ಕಳೆದುಕೊಂಡೆವು. ನಂತರ ಸ್ಟೋಕ್ಸ್ ಹಾಗೂ ಸಂಜು ಉತ್ತಮ ಜತೆಯಾಟವನ್ನು ನೀಡಿದರು. ನಂತರ ಮತ್ತೆ ಕುಸಿತವನ್ನು ಕಂಡೆವು. ನಿಧಾನಗತಿಯ ಪಿಚ್‌ನಲ್ಲಿ ಶೀಘ್ರವಾಗಿ ರನ್ ಗಳಿಸುವುದು ಕಠಿಣ ಕೆಲಸ" ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಕೊಹ್ಲಿ, ರೋಹಿತ್, ರೈನಾ ಹೆಸರಲ್ಲಿದ್ದ ಐಪಿಎಲ್‌ ದಾಖಲೆ ಮುರಿದ ಶಿಖರ್ ಧವನ್ಕೊಹ್ಲಿ, ರೋಹಿತ್, ರೈನಾ ಹೆಸರಲ್ಲಿದ್ದ ಐಪಿಎಲ್‌ ದಾಖಲೆ ಮುರಿದ ಶಿಖರ್ ಧವನ್

ಕೆಲ ಬ್ಯಾಟ್ಸಮನ್‌ಗಳಿಂದ ನಾವು ಇನ್ನೂ ಹೆಚ್ಚಿನ ಜೊತೆಯಾಟವನ್ನು ಪಡೆಯಬೇಕಾಗಿತ್ತು, ಆದರೆ ಅದು ಸಾದ್ಯವಾಗಲಿಲ್ಲ. ಬೌಲಿಂಗ್ ವಿಭಾಗದಲ್ಲಿ ನಾವು ಉತ್ತಮವಾಗಿ ಪ್ರದರ್ಶನ ನೀಡಿದೆವು. ಡೆಲ್ಲಿ ತಂಡವನ್ನು 160ರ ಗಡಿಯಲ್ಲಿ ತಡೆಯಲು ಯಶಸ್ವಿಯಾಗಿದ್ದೆವು. ಆರಂಭವೂ ಚೆನ್ನಾಗಿತ್ತು. ಆದರೆ ಕೆಲ ಜತೆಯಾಟವನ್ನು ಮುಂದುವರಿಸುವಲ್ಲಿ ಯಾವು ಯಶಸ್ವಿಯಾಗಲಿಲ್ಲ ಎಂದು ಸ್ಮಿತ್ ಪ್ರತಿಕ್ರಿಯಿಸಿದ್ದಾರೆ.

"ಈ ಸಂದರ್ಭದಲ್ಲಿ ಟೂರ್ನಿಯಲ್ಲಿ ನಾವು ಉತ್ತಮ ಸ್ಥಾನದಲ್ಲಿ ಇಲ್ಲ. ನಾವು ಇದರಿಂದ ಮುನ್ನುಗ್ಗುವ ಅಗತ್ಯವಿದೆ. ಮುಂದಿನ ಮೂರು ದಿನಗಳ ಕಾಲಾವಕಾಶವಿದ್ದು ಉತ್ತಮ ಆಟದೊಂದಿಗೆ ಮರಳುವ ವಿಶ್ವಾಸವಿದೆ" ಎ,ದು ಸ್ಟೀವ್ ಸ್ಮಿತ್ ತಂಡದ ಪ್ರದರ್ಶನದ ಬಗ್ಗೆ ಬೇಸರದಿಂದ ನುಡಿದರು.

IPL 2020: ಪಾಯಿಂಟ್ಸ್ ಟೇಬಲ್‌ನಲ್ಲಿ ಮತ್ತೆ ಅಗ್ರಪಟ್ಟಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್IPL 2020: ಪಾಯಿಂಟ್ಸ್ ಟೇಬಲ್‌ನಲ್ಲಿ ಮತ್ತೆ ಅಗ್ರಪಟ್ಟಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ವಿರುದ್ದದ ಪಂದ್ಯದಲ್ಲೂ ನಾಯಕ ಸ್ಟೀವ್ ಸ್ಮಿತ್ ಪ್ರದರ್ಶನ ಕೆಟ್ಟದಾಗಿತ್ತು. ನಾಲ್ಕು ಎಸೆತಗಳನ್ನು ಎದುರಿಸಿದ ಸ್ಮಿತ್ ಗಳಿಸಿದ್ದು 1 ರನ್ ಮಾತ್ರ. ಇನ್ನು ಡೆಲ್ಲಿ ವಿರುದ್ದದ ಸೋಲಿನ ಮೂಲಕ ರಾಜಸ್ಥಾನ್ ಆರನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆಡಿದ 8 ಪಂದ್ಯಗಳಲ್ಲಿ 3ರಲ್ಲಿ ಮಾತ್ರವೇ ಗೆಲುವು ಸಾಧಿಸಿದೆ.

Story first published: Thursday, October 15, 2020, 15:58 [IST]
Other articles published on Oct 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X