ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೇ 10ರವರೆಗೆ ಭಾರತದಲ್ಲೇ ಉಳಿಯಲಿದ್ದಾರೆ ನ್ಯೂಜಿಲೆಂಡ್ ಆಟಗಾರರು

New Zealand players part of IPL 2021 to remain in India till May 10

ಐಪಿಎಲ್ ಟೂರ್ನಿ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳ ಆಟಗಾರರು ಶೀಘ್ರವಾಗಿ ಭಾರತವನ್ನು ತೊರೆದು ತಮ್ಮ ತವರು ರಾಷ್ಟ್ರವನ್ನು ಸೇರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಮಧ್ಯೆ ನ್ಯೂಜಿಲೆಂಡ್ ತಂಡದ ಆಟಗಾರರು ಇನ್ನೂ ಕನಿಷ್ಟ ಐದು ದಿನಗಳ ಕಾಲ ಭಾರತದಲ್ಲೇ ಉಳಿದುಕೊಳ್ಳುವ ಸಂಭವವಿದೆ ಎಂದು ನ್ಯೂಜಿಲೆಂಡ್‌ನ ಆಟಗಾರರ ಯೂನಿಯನ್‌ನ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ.

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಸಹಿತ ಇಂಗ್ಲೆಂಡ್‌ಗೆ ತೆರಳಿ ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿ ಭಾಗಿಯಾಗಲಿರುವ ನ್ಯೂಜಿಲೆಂಡ್ ತಂಡದ ಆಟಗಾರರು ಸದ್ಯ ಭಾರತದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಉಳಿದ ಆಟಗಾರರು ಹಾಗೂ ಕಾಮೆಂಟೇಟರ್‌ಗಳು ಸಹಿತ ಐಪಿಎಲ್‌ನಲ್ಲಿ ಭಾಗಿಯಾಗಿದ್ದ ಇತರೆ ನ್ಯೂಜಿಲೆಂಡ್‌ನ ಸದಸ್ಯರು ತವರಿಗೆ ಮರಳಬಹುದು ಎಂದು ಆಟಗಾರರ ಅಸೋಸಿಯೇಶನ್‌ನ ಮುಖ್ಯಸ್ಥ ಹೀತ್ ಮಿಲ್ಸ್ ಮಾಹಿತಿ ನೀಡಿದ್ದಾರೆ.

ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್

ಸದ್ಯ ಬ್ರಿಟನ್ ಸರ್ಕಾರ ಅಲ್ಲಿನ ನಾಗರೀಕರನ್ನು ಮಾತ್ರವೇ ಭಾರತದಿಂದ ಮರಳಲು ಅವಕಾಶವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ವಿದೇಶಿ ಪ್ರಯಾಣಿಕರಿಗೂ ಅವಕಾಶವನ್ನು ಮಾಡಿಕೊಡುವ ನಿರೀಕ್ಷೆಯಿದ್ದು ಆ ಹಿನ್ನೆಲೆಯಲ್ಲಿ ಸದ್ಯ ನ್ಯೂಜಿಲೆಂಡ್ ಆಟಗಾರರು ಭಾರತದಲ್ಲಿಯೇ ಉಳಿದುಕೊಳ್ಳಳಿದ್ದಾರೆ.

ಈ ಬಗ್ಗೆ ಈಎಸ್‌ಪಿಎನ್ ಜೊತೆಗೆ ಮಾತನಾಡಿರುವ ನ್ಯೂಜಿಲೆಂಡ್‌ನ ಆಟಗಾರರ ಅಸೋಸಿಯೇಶನ್‌ನ ಮುಖ್ಯಸ್ಥ ಹೀತ್ ಮಿಲ್ಸ್ "ಯುಕೆಯಲ್ಲಿನ ಗಡಿ ನಿಯಂತ್ರಣ ಕ್ರಮಗಳ ಹಿನ್ನೆಲೆಯಲ್ಲಿ ಮೇ 11ರ ವರೆಗೂ ತಂಡ ಇಂಗ್ಲೆಂಡ್‌ಗೆ ತೆರಳಲು ಸಾಧ್ಯವಿಲ್ಲ. ಹೀಗಾಗಿ ಖಂಡಿತವಾಗಿಯೂ ಭಾರತದಲ್ಲಿ ಮತ್ತೆ ಕೆಲವು ದಿನಗಳ ಕಾಲ ಭಾರತದಲ್ಲಿ ಕಳೆಯುವುದು ಸವಾಲಾಗಲಿದೆ" ಎಂದಿದ್ದಾರೆ. ಭಾರತದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾಗಿಯಾಗುವ ಹಿನ್ನಲೆಯಲ್ಲಿ ಕೀವಿಸ್ ಆಟಗಾರರು ಇಂಗ್ಲೆಂಡ್‌ಗೆ ಹಾರಬೇಕಿದೆ.

Story first published: Wednesday, May 5, 2021, 21:46 [IST]
Other articles published on May 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X