ಯೂನಿವರ್ಸಲ್ ಬಾಸ್ ಗೇಲ್ ಗೆ ಪಾಕಿಸ್ತಾನದಲ್ಲಿ ಬೆಲೆಯೇ ಇಲ್ಲ

Posted By:

ಕರಾಚಿ, ನವೆಂಬರ್ 14: ಟ್ವೆಂಟಿ20 ಮಾದರಿ ಕ್ರಿಕೆಟ್ ನ ಅತ್ಯಂತ ಸ್ಫೋಟಕ ಕ್ರಿಕೆಟರ್, ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಸ್ ಗೇಲ್ ಅವರ ಜನಪ್ರಿಯತೆ ಕಳೆಗುಂದುತ್ತಿದೆಯೇ? ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಗೇಲ್ ಅವರನ್ನು ಹರಾಜಿನಲ್ಲಿ ಕೊಳ್ಳಲು ಪಾಕಿಸ್ತಾನದಲ್ಲಿ ಯರು ಧೈರ್ಯ ಮಾಡಿಲ್ಲ.

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನ ಹರಾಜಿನ ಡ್ರಾಫ್ಟ್ ನಲ್ಲಿ ಕ್ರಿಸ್ ಗೇಲ್ ಹೆಸರು ಇಲ್ಲ. ಯಾವ ಫ್ರಾಂಚೈಸಿ ಕೂಡಾ ಗೇಲ್ ಬೇಕು ಎಂದು ಕೇಳಿಲ್ಲ. 308 ವಿದೇಶಿ ಆಟಗಾರರು, 193 ದೇಶಿ ಆಟಗಾರರು ಸೇರಿದಂತೆ 501 ಕ್ರಿಕೆಟರ್ ಗಳ ಪಟ್ಟಿಯಲ್ಲಿ ಗೇಲ್ ಹೆಸರಿಲ್ಲದಿರುವುದು ಅಚ್ಚರಿಯಾದರೂ ಸತ್ಯ.

No takers for 'Universe Boss' Chris Gayle in Pakistan Super League 2018

ಟಿ20 ಮಾದರಿಯಲ್ಲಿ 10 ಸಾವಿರ ರನ್ ಗಳಿಸಿರುವ ಏಕೈಕ ಆಟಗಾರ ಗೇಲ್ ಅವರು ಪಿಎಸ್ಎಲ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂಬ ಮಾಹಿತಿ ಅರಿತ ಫ್ರಾಂಚೈಸಿಗಳು ಗೇಲ್ ಹೆಸರು ಪ್ರಸ್ತಾಪಿಸದಿರಲು ನಿರ್ಧರಿಸಿವೆ.

2018ರ ವಿಶ್ವಕಪ್ ಗೆ ನೇರ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ವೆಸ್ಟ್ ಇಂಡೀಸ್ ತಂಡ ಐಸಿಸಿ ವಿಶ್ವಕಪ್ 2018ರ ಅರ್ಹತಾ ಸುತ್ತಿನಲ್ಲಿ ಗೆಲ್ಲಬೇಕಿದೆ. ಇದಕ್ಕೆ ಗೇಲ್ ಬಲ ಅನಿವಾರ್ಯವಾಗಿದೆ.

ಮೊದಲ ಎರಡು ಸೀಸನ್ ಪಿಎಸ್ಎಲ್ ನಲ್ಲಿ ಆಡಿದ್ದ ಗೇಲ್ 103 (5ಪಂದ್ಯ) ಹಾಗೂ 160ರನ್ (9 ಪಂದ್ಯಗಳು) ಮಾತ್ರ ಗಳಿಸಿದ್ದರು. ಗೇಲ್ ಅಲ್ಲದೆ ಸ್ಪಾಟ್ ಫಿಕ್ಸಿಂಗ್ ನಿಷೇಧದಿಂದ ಹೊರ ಬಂದಿರುವ ಮಾಜಿ ನಾಯಕ ಸಲ್ಮಾನ್ ಬಟ್ ಹಾಗೂ ಮೊಹಮ್ಮದ್ ಆಸಿಫ್ ಅವರಿಗೂ ಪಿಎಸ್ಎಲ್ ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

Story first published: Tuesday, November 14, 2017, 14:17 [IST]
Other articles published on Nov 14, 2017
Please Wait while comments are loading...