ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ರೀತಿ ಕೊಹ್ಲಿ ಪಡೆ ಮಿಂಚುವುದು ಅನುಮಾನ ಎಂದ ಭಾರತದ ಮಾಜಿ ಕ್ರಿಕೆಟಿಗ!

Not sure if current team India can dominate like West Indies or Australian sides says Sunil Gavaskar

ಟೀಮ್ ಇಂಡಿಯಾ ತಂಡ ಇಂಗ್ಲೆಂಡ್ ತಲುಪಿದ್ದು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್; ಕೊಹ್ಲಿ ಬೇಡ ಎಂದಿದ್ದ ವಿಷಯವನ್ನೇ ಕೆದಕಿದ ಲಕ್ಷ್ಮಣ್

ಅದರಲ್ಲಿಯೂ ಜೂನ್ 18-22ರವರೆಗೆ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮುಖ್ಯವಾದ ಪಂದ್ಯವಾಗಿದ್ದು ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಸಹ ಟ್ರೋಫಿ ವಶಪಡಿಸಿಕೊಳ್ಳುವತ್ತ ಗಮನಹರಿಸಿವೆ. ಇನ್ನು ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸದ ಕುರಿತು ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ಮಾತನಾಡಿದ್ದು ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಪರ ವೀಕ್ಷಕವಿವರಣೆ ಮಾಡಲಿರುವ ಸುನಿಲ್ ಗವಾಸ್ಕರ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಧೋನಿ ಯಶಸ್ವಿ ನಾಯಕತ್ವದ ಹಿಂದೆ ಇದೆ ಆ ಆಟಗಾರನ ನಿರಂತರ ಸಲಹೆ; ಸತ್ಯಾಂಶ ಬಿಚ್ಚಿಟ್ಟ ರುತುರಾಜ್ ಗಾಯಕ್ವಾಡ್

ಟೆಸ್ಟ್ ಪಂದ್ಯಗಳಲ್ಲಿ ಪ್ರಸ್ತುತ ಟೀಮ್ ಇಂಡಿಯಾದ ಪ್ರದರ್ಶನದ ಕುರಿತು ಮಾತನಾಡಿರುವ ಸುನಿಲ್ ಗವಾಸ್ಕರ್ ಕೊಹ್ಲಿ ಪಡೆಯನ್ನು ಹಳೆಯ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ ಹೋಲಿಕೆ ಮಾಡಿ ಈ ಕೆಳಕಂಡಂತೆ ಮಾತನಾಡಿದ್ದಾರೆ.

ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ರೀತಿ ಕೊಹ್ಲಿ ಪಡೆ ಪ್ರಾಬಲ್ಯ ಸಾಧಿಸುವುದು ಅನುಮಾನ

ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ರೀತಿ ಕೊಹ್ಲಿ ಪಡೆ ಪ್ರಾಬಲ್ಯ ಸಾಧಿಸುವುದು ಅನುಮಾನ

ಕೊಹ್ಲಿ ಪಡೆಯ ಪ್ರದರ್ಶನದ ಬಗ್ಗೆ ಮಾತನಾಡಿರುವ ಸುನಿಲ್ ಗವಾಸ್ಕರ್ ಈಗಿನ ಟೀಮ್ ಇಂಡಿಯಾ ತಂಡ 1970 ಹಾಗೂ 1980ರ ವೇಳೆಯ ವೆಸ್ಟ್ ಇಂಡೀಸ್ ತಂಡದ ರೀತಿ ಹಾಗೂ 2000 ವೇಳೆಯ ಆಸ್ಟ್ರೇಲಿಯಾ ರೀತಿ ಉತ್ತಮ ಪ್ರದರ್ಶನ ನೀಡುವುದು ಅನುಮಾನ ಎಂದಿದ್ದಾರೆ. 'ವೆಸ್ಟ್ ಇಂಡೀಸ್ ತಂಡ 5 ಪಂದ್ಯಗಳ ಪೈಕಿ 5 ಪಂದ್ಯಗಳನ್ನೂ ಗೆಲ್ಲುತ್ತಿತ್ತು, ಆಸ್ಟ್ರೇಲಿಯಾ 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಜಯ ಸಾಧಿಸಿ ಪ್ರಾಬಲ್ಯವನ್ನು ಸಾಧಿಸುತ್ತಿತ್ತು. ಆದರೆ ಈಗಿನ ಟೀಮ್ ಇಂಡಿಯಾ ತಂಡ ಆ ಎರಡೂ ತಂಡಗಳ ರೀತಿ ಪ್ರಾಬಲ್ಯ ಸಾಧಿಸುವುದು ಅನುಮಾನ' ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ತಂಡದ 11 ಆಟಗಾರರು ಮಿಂಚುವುದು ಅಸಾಧ್ಯ

ತಂಡದ 11 ಆಟಗಾರರು ಮಿಂಚುವುದು ಅಸಾಧ್ಯ

ಇನ್ನೂ ಮುಂದುವರಿದು ಮಾತನಾಡಿರುವ ಸುನಿಲ್ ಗವಾಸ್ಕರ್ ಪಂದ್ಯವೊಂದರಲ್ಲಿ ಎಲ್ಲಾ 11 ಆಟಗಾರರೂ ಉತ್ತಮ ಪ್ರದರ್ಶನ ನೀಡುವುದು ಅಸಾಧ್ಯ. ಆದರೆ ಪಂದ್ಯವೊಂದರಲ್ಲಿ 4 ಆಟಗಾರರು ( ಇಬ್ಬರು ಬ್ಯಾಟ್ಸ್‌ಮನ್‌ ಹಾಗೂ ಇಬ್ಬರು ಬೌಲರ್‌ಗಳು ) ಉತ್ತಮ ಪ್ರದರ್ಶನ ನೀಡಿದರೆ ಸಾಕು ಆ ತಂಡ ಹೆಚ್ಚಿನ ಗೆಲುವನ್ನು ಸಾಧಿಸಬಹುದು. ಇದನ್ನೇ ಖಚಿತವಾಗಿಯೂ ಪ್ರಸ್ತುತ ಟೀಮ್ ಇಂಡಿಯಾ ತಂಡ ಮಾಡುತ್ತಿದೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವು ಸಾಧಿಸಲಿದೆ ಟೀಮ್ ಇಂಡಿಯಾ

ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವು ಸಾಧಿಸಲಿದೆ ಟೀಮ್ ಇಂಡಿಯಾ

ಹಾಗೆಯೇ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಕುರಿತು ಮಾತನಾಡಿರುವ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ಖಚಿತವಾಗಿ 4-0 ಅಂತರದಿಂದ ಸರಣಿಯನ್ನು ವಶಪಡಿಸಿ ಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಬಳಿಕ 6 ವಾರಗಳ ಕಾಲಾವಕಾಶ ಭಾರತೀಯರಿಗೆ ಸಿಗಲಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಗವಾಸ್ಕರ್ ತಿಳಿಸಿದ್ದಾರೆ.

Story first published: Sunday, June 6, 2021, 12:55 [IST]
Other articles published on Jun 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X