ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಎರಡು, ಮೂರು ವರ್ಷದಲ್ಲಿ ಒಡಿಐ ಕ್ರಿಕೆಟ್ ಯಾರು ಆಡಲ್ಲ: ಮೊಯಿನ್ ಅಲಿ

Moeen ali

ಟಿ20 ಕ್ರಿಕೆಟ್ ಅಬ್ಬರದ ನಡುವೆ ಏಕದಿನ ಕ್ರಿಕೆಟ್‌ ಫಾರ್ಮೆಟ್‌ನ ಸೊಬಗು ಮರೆಯಾಗತೊಡಗಿದೆ. 20 ಓವರ್‌ಗಳಲ್ಲಿ ಪಂದ್ಯದ ಫಲಿತಾಂಶ ಹೊರಬರುವ ಕ್ರೇಜ್‌ನಲ್ಲಿ 50 ಓವರ್‌ಗಳ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಹಿಂದೇಟು ಹಾಕುತ್ತಿದ್ದಾರೆ. ಇದಷ್ಟೇ ಅಲ್ಲದೆ ಇದೀಗ ಒಬ್ಬರ ಹಿಂದೆ ಮತ್ತೊಬ್ಬರಂತೆ ಕ್ರಿಕೆಟಿಗರು ಸಹ ಒಡಿಐ ಕ್ರಿಕೆಟ್‌ ಫಾರ್ಮೆಟ್‌ ಕುರಿತು ಅಸಮಾಧಾನ ಹೊರಹಾಕುತ್ತಿದ್ದಾರೆ.

ಭವಿಷ್ಯದಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವುದು ಅನುಮಾನ ಎಂದು ಈಗಾಗಲೇ ಕೆಲ ಮಾಜಿ ಕ್ರಿಕೆಟಿಗರು ಮಾಡಿರುವ ಕಾಮೆಂಟ್‌ಗಳು ಇದಕ್ಕೆ ಕನ್ನಡಿ ಹಿಡಿದಿವೆ. ಇದೇ ಸಾಲಿಗೆ ಇಂಗ್ಲೆಂಡ್‌ ಆಲ್‌ರೌಂಡರ್‌ ಮೊಯಿನ್ ಅಲಿ ಕೂಡ ಸೇರ್ಪಡೆಯಾಗಿದ್ದು, ಏಕದಿನ ಫಾರ್ಮೆಟ್ ಸಾಕಷ್ಟು ನೀರಸದಾಯಕವಾಗಿದೆ ಎಂದಿದ್ದಾರೆ.

ಬೆನ್‌ ಸ್ಟೋಕ್ಸ್‌ ನಿವೃತ್ತಿಯ ಬಳಿಕ ಚರ್ಚೆ ಹೆಚ್ಚಾಗಿದೆ!

ಬೆನ್‌ ಸ್ಟೋಕ್ಸ್‌ ನಿವೃತ್ತಿಯ ಬಳಿಕ ಚರ್ಚೆ ಹೆಚ್ಚಾಗಿದೆ!

ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ, ಅದರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸಿಂ ಅಕ್ರಂ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ನ ಏಕದಿನ ಸ್ವರೂಪವು ಹೆಚ್ಚು ದಿನಗಳವರೆಗೆ ಮುಂದುವರಿಯದಿರಬಹುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಏಕದಿನ ಕ್ರಿಕೆಟ್ ನಿಂದಾಗಿ ಆಟಗಾರರು ಹೆಚ್ಚು ಸುಸ್ತಾಗುತ್ತಿದ್ದಾರೆ ಎಂಬುದು ಇವರ ಅಭಿಪ್ರಾಯವಾಗಿದೆ. ಇದು ಅವರ ವೃತ್ತಿ ಜೀವನದ ಮೇಲೂ ಪರಿಣಾಮ ಬೀರುತ್ತಿದೆ ಎಂದರು. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಆಡಲು ಆಟಗಾರರು ಹೆಚ್ಚು ಆಸಕ್ತಿ ತೋರುತ್ತಿದ್ದು, ಏಕದಿನ ಪಂದ್ಯಗಳನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಒಡಿಐ ಕ್ರಿಕೆಟ್ ಕುರಿತು ಬೇಸರ ವ್ಯಕ್ತಪಡಿಸಿದ ಮೊಯಿನ್ ಅಲಿ

ಒಡಿಐ ಕ್ರಿಕೆಟ್ ಕುರಿತು ಬೇಸರ ವ್ಯಕ್ತಪಡಿಸಿದ ಮೊಯಿನ್ ಅಲಿ

ಸುದೀರ್ಘ ಕಾಲ ಏಕದಿನ ಕ್ರಿಕೆಟ್ ಆಡಿದ ವಾಸಿಂ ಅಕ್ರಮ್ ಅವರಂತಹ ಹಿರಿಯರು ಈ ಸ್ವರೂಪದ ಉಳಿವಿನ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಇತ್ತೀಚೆಗೆ ಮತ್ತೊಬ್ಬ ಆಲ್ ರೌಂಡರ್ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ ಇತ್ತೀಚೆಗೆ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ನಿರಾಸಕ್ತಿ ತೋರಿಸಿದ್ದರು. 50 ಓವರ್‌ಗಳ ಪಂದ್ಯವನ್ನು ಆಡಲು ಬಯಸುವುದಿಲ್ಲ ಎಂದು ಅವರು ನಿರ್ಧರಿಸಿದರು. ಕ್ರಿಕೆಟ್‌ನ ಏಕದಿನ ಮಾದರಿಯು ನೀರಸವಾಗಿದೆ ಎಂದು ಅವರು ವಿಷಾದಿಸಿದರು. ಕ್ರಿಕೆಟ್ 365ಗೆ ನೀಡಿದ ಸಂದರ್ಶನದಲ್ಲಿ ಮೊಯಿನ್ ಅಲಿ ಈ ಮಾತನಾಡಿದ್ದಾರೆ.

IND vs WI: ವಿರಾಟ್ ಕೊಹ್ಲಿ ಕನಿಷ್ಠ ಏಕದಿನ or ಟಿ20 ಆಡಬೇಕಿತ್ತು ಎಂದ ಮಾಜಿ ಕ್ರಿಕೆಟಿಗ

ಮುಂದಿನ ಎರಡು ಮೂರು ವರ್ಷದಲ್ಲಿ ಒಡಿಐ ಕ್ರಿಕೆಟ್ ಯಾರು ಆಡಲ್ಲ!

ಮುಂದಿನ ಎರಡು ಮೂರು ವರ್ಷದಲ್ಲಿ ಒಡಿಐ ಕ್ರಿಕೆಟ್ ಯಾರು ಆಡಲ್ಲ!

ಮುಂದಿನ ಎರಡು-ಮೂರು ವರ್ಷಗಳಲ್ಲಿ ಯಾರೂ ಏಕದಿನ ಕ್ರಿಕೆಟ್ ಆಡಲು ಬಯಸುವುದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಕಾರಣಗಳನ್ನೂ ಸಹ ವಿವರಿಸಿದರು. ಕ್ರಿಕೆಟ್ ಕ್ಯಾಲೆಂಡರ್ ಕ್ರಮೇಣ ಟೈಟ್ ಪ್ಯಾಕ್ ಆಗುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಷ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್, 100 ಬಾಲ್ ಇತ್ಯಾದಿ ಟೂರ್ನಿಗಳು ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ನಡೆಯುತ್ತಿವೆ ಎಂದು ಮೊಯಿನ್ ಅಲಿ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

Ind vs WI 5th T20: ಡ್ರೀಂ ಟೀಂ ಫ್ಯಾಂಟೆಸಿ ಟಿಪ್ಸ್‌, ಪಿಚ್ ರಿಪೋರ್ಟ್‌, ಪ್ಲೇಯಿಂಗ್ 11

ಏಕದಿನ ಫಾರ್ಮೆಟ್‌ ದಿನದಿಂದ ದಿನಕ್ಕೆ ತಗ್ಗುತ್ತಿದೆ!

ಏಕದಿನ ಫಾರ್ಮೆಟ್‌ ದಿನದಿಂದ ದಿನಕ್ಕೆ ತಗ್ಗುತ್ತಿದೆ!

ಏಕದಿನ ಮಾದರಿಯ ಕ್ರಿಕೆಟ್ ಪಂದ್ಯಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಇನ್ನೆರಡು ಮೂರು ವರ್ಷಗಳಲ್ಲಿ ಕಣ್ಮರೆಯಾಗಲಿದೆ ಎಂದರು. ಒಡಿಐ ಕ್ರಿಕೆಟ್‌ ಇತಿಹಾಸ ಪುಸ್ತಕದಲ್ಲಿ ಸೇರ್ಪಡೆಯಾಗಲಿದೆ ಎಂದು ಪ್ರತಿಕ್ರಿಯಿಸಿದರು. ಆಟಗಾರರು 50 ಓವರ್‌ಗಳ ಪಂದ್ಯವನ್ನು ಆಡಲು ಆಸಕ್ತಿ ತೋರದಿದ್ದಾಗ, ಅದನ್ನು ಕೊನೆಗೊಳಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಮೊಯಿನ್ ಅಲಿ ನಂಬಿದ್ದಾರೆ. ದೇಶೀಯ ಪಂದ್ಯಾವಳಿಗಳಲ್ಲಿಯೂ ಏಕದಿನ ಮಾದರಿಯ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಅನೇಕ ಕ್ರಿಕೆಟಿಗರು ಏಕದಿನ ಮಾದರಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಮೊಯಿನ್ ಅಲಿ ಭವಿಷ್ಯ ನುಡಿದಿದ್ದಾರೆ. ಬೆನ್ ಸ್ಟೋಕ್ಸ್ ಈಗಾಗಲೇ ಈ ಸ್ವರೂಪದಿಂದ ನಿವೃತ್ತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಬೆನ್ ಸ್ಟೋಕ್ಸ್ ಅವರಂತಹ ಗುಣಮಟ್ಟದ ಆಟಗಾರ ಏಕದಿನ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ ಎಂದರೆ ತೀವ್ರತೆಯ ಮಟ್ಟವನ್ನು ಅರ್ಥಮಾಡಿಕೊಳ್ಳಬಹುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದು ಖುಷಿಯಾಗಿರುವುದು ನಿಜವಾದರೂ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಹಲವು ಟೂರ್ನಿಗಳಲ್ಲಿ ಭಾಗವಹಿಸಬೇಕಾಗಿರುವುದು ತ್ರಾಸದಾಯಕ ಎಂದು ಅವರು ತಿಳಿಸಿದ್ದಾರೆ.

Story first published: Sunday, August 7, 2022, 18:59 [IST]
Other articles published on Aug 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X