ಟೀಮ್ ಇಂಡಿಯಾದ ಈ 3 ಅನುಭವಿ ಆಟಗಾರರಿಗೆ ಶ್ರೀಲಂಕಾ ಪ್ರವಾಸವೇ ಕೊನೆಯ ಅವಕಾಶವಾಗುತ್ತಾ?

ಟೀಂ ಇಂಡಿಯಾದ 3 ಆಟಗಾರರಿಗೆ ಇದೆ ಕೊನೆ ಅವಕಾಶ | Oneindia Kannada

ಬೆಂಗಳೂರು, ಜುಲೈ 9: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಹುತೇಕ ಸೀಮಿತ ಓವರ್‌ಗಳ ಸ್ಪೆಶಲಿಸ್ಟ್‌ಗಳನ್ನು ಒಳಗೊಂಡಿರುವ ಈ ತಂಡದಲ್ಲಿ ಯುವ ಆಟಗಾರರು ಹೆಚ್ಚಿನ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ಅನುಭವಿಗಳ ಸಂಖ್ಯೆಗೇನೂ ಕೊರತೆಯಿಲ್ಲ. ಒಟ್ಟಾರೆ ತಂಡ ಅನುಭವಿ ಹಾಗೂ ಯುವ ಆಟಗಾರರ ಉತ್ತಮ ಮಿಶ್ರಣವಾದಂತೆ ಭಾಸವಾಗುತ್ತಿದೆ.

ಆದರೆ ಈ ಶ್ರಿಲಂಕಾ ಪ್ರವಾಸ ಟೀಮ್ ಇಂಡಿಯಾದ ಕೆಲ ಅನುಭವಿ ಆಟಗಾರರ ಪಾಲಿಗೆ ಬಹಳ ಮಹತ್ವದ ಸರಣಿಯಾಗಲಿದೆ. ಕೆಲ ಆಟಗಾರರಿಗೆ ಇದು ಅಂತಿಮ ಅವಕಾಶವಾದರೂ ಅಚ್ಚರಿಯಿಲ್ಲ. ಟೀಮ್ ಇಂಡಿಯಾದಲ್ಲಿ ಹಲವು ಅವಕಾಶ ದೊರೆತರೂ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಆಟಗಾರರು ವಿಫಲರಾಗಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿ ಭಾರತದ ಪಾಲಿಗೆ ಹೆಚ್ಚು ಮಹತ್ವ ಯಾಕೆ ಗೊತ್ತಾ!ಶ್ರೀಲಂಕಾ ವಿರುದ್ಧದ ಸರಣಿ ಭಾರತದ ಪಾಲಿಗೆ ಹೆಚ್ಚು ಮಹತ್ವ ಯಾಕೆ ಗೊತ್ತಾ!

ಹಾಗಾದರೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಉಳಿಸಕೊಳ್ಳಲು ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿರುವ ಆ ಆಟಗಾರರು ಯಾರು? ಆ ಬಗ್ಗೆ ಇಲ್ಲಿದೆ ಮಾಹಿತಿ. ಮುಂದೆ ಓದಿ..

ಕುಲ್‌ದೀಪ್ ಯಾದವ್

ಕುಲ್‌ದೀಪ್ ಯಾದವ್

ಟೀಮ್ ಇಂಡಿಯಾದಲ್ಲಿ ಕಳೆದ ಹಲವು ವರ್ಷಗಳಿಂದ ಇರುವ ಕುಲ್‌ದೀಪ್ ಯಾದವ್ ಇತ್ತೀಚೆಗೆ ಮಂಕಾಗಿ ಹೋಗಿದ್ದಾರೆ. ತಂಡದಲ್ಲಿದ್ದರೂ ಕುಲ್‌ದೀಪ್ ಯಾದವ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ಸತತವಾಗಿ ವಿಫಲರಾಗಿದ್ದಾರೆ. ಕೆಲ ಅವಕಾಶ ದೊರೆತರೂ ಅದನ್ನು ಪರಿಣಾಮಕಾಇಯಾಗಿ ಬಳಸಲು ಅವರಿಂದ ಸಾಧ್ಯವಾಗಿಲ್ಲ. ಈ ಮಧ್ಯೆ ಇಂಗ್ಲೆಂಡ್‌ಗೆ ತೆರಳಿದ ಟೆಸ್ಟ್ ತಂಡದಿಂದ ಕುಲ್‌ದೀಪ್ ಯಾದವ್ ಹೊರಬಿದ್ದರು. ಆದರೆ ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರವಾಸದಲ್ಲಿ ಅವಕಾಶ ದೊರೆತು ಉತ್ತಮ ಪ್ರದರ್ಶನ ನೀಡಿದರಷ್ಟೇ ಕುಲ್‌ದೀಪ್ ಯಾದವ್‌ಗೆ ಟೀಮ್ ಇಂಡಿಯಾದಲಲ್ಇ ಮುಂದುವರಿಯುವ ಅವಕಾಶ ದೊರೆಯಬಹುದು.

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಕಿರಿ ವಯಸ್ಸಿನಲ್ಲಿಯೇ ತಮ್ಮಲ್ಲಿರುವ ಅದ್ಭುತ ಸಾಮರ್ಥ್ಯ ಹಾಗೂ ಪ್ರತಿಭೆಯಿಂದ ಎಲ್ಲರ ಚಿತ್ತ ತನ್ನತ್ತ ಬೀಳುವಂತೆ ಮಾಡಿದ ಆಟಗಾರ ಸಂಜು ಸ್ಯಾಮ್ಸನ್. ಐಪಿಎಲ್‌ನಲ್ಲಿಯೂ ಮಿಂಚುತ್ತಿರುವ ಸಂಜು ಈಗ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿದ್ದಾರೆ. ಆದರೆ ಅಸ್ಥಿರ ಪ್ರದರ್ಶನ ಸಂಜು ಪಾಲಿಗೆ ಮುಳುವಾಗಿದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಲು ಸಂಜು ಸ್ಯಾಮ್ಸನ್‌ಗೆ ಸಾಧ್ಯವಾಗಿಲ್ಲ. ಈ ಮಧ್ಯೆ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಬ್ಯಾಟ್ಸ್‌ಮನ್ ಆಗಿ ಮಿಂಚಲು ಹಾತೊರೆಯುತ್ತಿರುವುದು ಸಂಜು ಪಾಲಿಗೆ ಭಾರತ ತಂಡದ ಅವಕಾಶ ಮತ್ತಷ್ಟು ಕ್ಷೀಣವಾದಂತೆ ಭಾಸವಾಗುತ್ತಿದೆ.

ಮನೀಶ್ ಪಾಂಡೆ

ಮನೀಶ್ ಪಾಂಡೆ

ಕರ್ನಾಟಕದ ಈ ಆಟಗಾರ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ. ದುರದೃಷ್ಟವಶಾತ್ ಪ್ರತಿಭೆಯಿದ್ದರೂ ಮನೀಶ್ ಪಾಲಿಗೆ ಅವಕಾಶಗಳು ಬಹಳಷ್ಟು ಕಡಿಮೆ ದೊರೆತಿದೆ. ತಂಡದಲ್ಲಿದ್ದರೂ ಹೆಚ್ಚಿನ ಕಾಲ ಬೆಂಚ್ ಕಾಯುತ್ತಲೇ ಕಳೆದಿದ್ದಾರೆ. ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರೂ ಅದು ತಂಡದಲ್ಲಿ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಶ್ರೀಲಂಕಾ ಪ್ರವಾಸ ಮನೀಶ್ ಪಾಲಿಗೆ ಮತ್ತೊಂದು ಅವಕಾಶದಂತೆ ದೊರೆತಿದೆ. ಈ ಅವಕಾಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲೇಬೇಕಾದ ಅನಿವಾರ್ಯತೆ ಖಂಡಿತಾ ಇದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, July 9, 2021, 16:50 [IST]
Other articles published on Jul 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X