ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಸರಣಿ ಸೋತ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ: ಮತ್ತೋರ್ವ ವೇಗಿ ಸರಣಿಯಿಂದ ಔಟ್

Pak vs Eng: Pakistan pacer Naseem Shah ruled out of final test against England due to injury

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಪಾಕಿಸ್ತಾನ ಸೋಲು ಅನುಭವಿಸಿದ್ದು ಸರಣಿಯನ್ನು ಕಳೆದುಕೊಂಡಿದೆ. ಮುಲ್ತಾನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಗೆಲುವಿನ ಸನಿಹಕ್ಕೆ ಬಂದು ಕೇವಲ 26 ರನ್‌ಗಳ ಅಂತರದಿಂದ ಶರಣಾಗಿತ್ತು. ಇದೀಗ ಮೂರನೇ ಪಂದ್ಯಕ್ಕೆ ಸಜ್ಜಾಗಿರುವ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಯುವ ವೇಗಿ ನಸೀಮ್ ಶಾ ಗಾಯಗೊಂಡಿದ್ದು ಅಂತಿಮ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ಭುಜದ ನೋವಿಗೆ ತುತ್ತಾಗಿರುವ ಕಾರಣ ನಸೀಮ್ ಶಾ ಅಂತಿಮ ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ ಎಂದು ಪಾಕ್ ಮಂಡಳಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ಹ್ಯಾರಿಸ್ ರೌಫ್ ಬಳಿಕ ಮತ್ತೋರ್ವ ಪ್ರಮುಖ ವೇಗಿ ಈ ಸರಣಿಯಿಮದ ಹೊರಗುಳಿಯುತ್ತಿದ್ದಾರೆ.

ನಸೀಮ್ ಶಾ ಸರಣಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರೆ ಈ ಪಂದ್ಯವನ್ನು ಪ್ರವಾಸಿ ಇಂಗ್ಲೆಂಡ್ 74 ರನ್‌ಗಳಿಂದ ಗೆದ್ದುಕೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಹೊರಗುಳಿದಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾ 26 ರನ್‌ಗಳಿಂದ ಇಂಗ್ಲೆಂಡ್‌ಗೆ ಶರಣಾಗುವ ಮೂಲಕ ಸರಣಿಯನ್ನು ಇಂಗ್ಲೆಂಡ್ ತಂಡಕ್ಕೆ ಒಪ್ಪಿಸಿದೆ.

ನಸೀಮ್ ಅವರ ಗಾಯವು ಪಾಕಿಸ್ತಾನಕ್ಕೆ ಸರಣಿಯಲ್ಲಿ ಮೂರನೇ ಆಘಾತವಾಗಿದೆ. ಈ ಸರಣಿಗೂ ಮುನ್ನ ವೇಗದ ಬೌಲರ್ ಶಾಹೀನ್ ಅಫ್ರಿದಿ ಮೊಣಕಾಲಿನ ಗಾಯದಿಂದ ಹೊರಗುಳಿದರೆ ವೇಗಿ ಹ್ಯಾರಿಸ್ ರೌಫ್ ರಾವಲ್ಪಿಂಡಿಯಲ್ಲಿ ಟೆಸ್ಟ್ ಪಂದ್ಯದ ವೇಳೆ ತೊಡೆಯ ಗಾಯಕ್ಕೆ ತುತ್ತಾದರು. ಬಳಿಕ ಸರಣಿಯ ಉಳಿದ ಪಂದ್ಯಗಳಿಗೆ ಕೂಡ ಅವರು ಅಲಭ್ಯವಾಗಿದ್ದಾರೆ.

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಶನಿವಾರ ಆರಂಭವಾಗಲಿದೆ. ಕರಾಚಿಯಲ್ಲಿ ಈ ಪಂದ್ಯ ನಡೆಯಲಿದ್ದು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗದಿಂದ ಹೊರಬರಲು ಪ್ರಯತ್ನಿಸಲಿದೆ.

Story first published: Wednesday, December 14, 2022, 2:30 [IST]
Other articles published on Dec 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X