ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ನಲ್ಲಿ ಸಿಕ್ಸರ್ ಸಿಡಿಸಿದ ಬ್ಯಾಟ್ ಹರಾಜಿಗಿಡಲು ಮುಂದಾದ ನಸೀಮ್ ಶಾ

Pakistan pacer Naseem Shah Donate his Asia Cup six-hitting bat to Shahid Afridi Foundation to auction

ಏಷ್ಯಾ ಕಪ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ಬೌಲಿಂಗ್‌ನಲ್ಲಿ ಮಾಯತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಪಾಕಿಸ್ತಾನ ತಂಡಕ್ಕೆ ನೆರವಾಗಿದ್ದಾರೆ. ಅಫ್ಘಾನಿಸ್ತಾನ ತಂಡದ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ಫೈನಲ್ ಹಂತಕ್ಕೇರಲು ಕಾರಣವಾಗಿದ್ದದ್ದರು ನಸೀಮ್ ಶಾ. ಇದೀಗ ಆ ಸಿಕ್ಸರ್ ಸಿಡಿಸಿದ ಬ್ಯಾಟನ್ನು ಹರಾಜಿಗಿಟ್ಟು ನೆರೆ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದಾರೆ.

19ರ ಹರೆಯದ ನಸೀಮ್ ಶಾ ನೇರವಾಗಿ ತಾವೇ ಬ್ಯಾಟನ್ನು ಹರಾಜಿಗೆ ಇಡುತ್ತಿಲ್ಲ. ಬದಲಾಗಿ ಸಪ್ಟೆಂಬರ್ 15ರಂದು ಶಾಹೀದ್ ಅಫ್ರಿದಿ ಫೌಂಡೇಶನ್‌ಗೆ ಬ್ಯಾಟನ್ನು ದಾನ ಮಾಡಿರುವ ನಸೀಮ್ ಶಾ ಈ ಮೂಲಕ ನೆರೆ ಸಂತ್ರಸ್ತರಿಗೆ ಸಹಾಯಕ್ಕೆ ಮುಂದಾಗಿದ್ದಾರೆ.

ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!

ಈ ಬ್ಯಾಟ್ ಸ್ಮರಣೀಯ ಎಂದ ಶಾ: ಇನ್ನು ಈ ಬ್ಯಾಟನ್ನು ದಾನ ಮಾಡುವುದಕ್ಕೂ ಮುನ್ನ ನಸೀಮ್ ಶಾ ಇದು ಅತ್ಯಂತ ಸ್ಮರಣೀಯ ಬ್ಯಾಟ್ ಆಗಿದೆ ಎಂದಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಫೈನಲ್ ಹಂತಕ್ಕೇರಲು ಮಹತ್ವದ್ದಾಗಿದ್ದ ಪಂದ್ಯದಲ್ಲಿ ಅಂತಿಮ ಓವರನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿದ್ದರು ನಸೀಮ್ ಶಾ. ಈ ಮೂಲಕ ಪಾಕಿಸ್ತಾನ ತಂಡಕ್ಕೆ ಮಹತ್ವದ ಗೆಲುವು ತಂದುಕೊಟ್ಟಿದ್ದರು. ಈ ಗೆಲುವಿನಿಂದಾಗಿ ಪಾಕಿಸ್ತಾನ ಭಾರತ ತಂಡವನ್ನು ಹಿಂದಿಕ್ಕಿ ಫೈನಲ್ ಹಂತಕ್ಕೇರಲು ಯಶಸ್ವಿಯಾಗಿತ್ತು.

ಪಾಕಿಸ್ತಾನದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯಿಂದಾಗಿ ಸಂತ್ರಸ್ತರ ನೆರವಾಗುವ ಹಿನ್ನೆಲೆಯಲ್ಲಿ ಪ್ರವಾಹ ಪರಿಹಾರ ಅಭಿಯಾನವನ್ನು ನಡೆಸುತ್ತಿರುವ ನಡೆಸುತ್ತಿದೆ ಶಾಹಿದ್ ಅಫ್ರಿದಿ ನೇತೃತ್ವದ ವೆಲ್ಫೇರ್ ಫೌಂಡೇಶನ್. ಈ ಫೌಂಡೇಶನ್ ಮೂಲಕ ತಮ್ಮ ಬ್ಯಾಟ್ ಅನ್ನು ಹರಾಜು ಮಾಡುವುದಾಗಿ ನಸೀಮ್ ಶಾ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟಪಡಿಸಿದ್ದಾರೆ.

"ಈ ಬ್ಯಾಟ್ ನನಗೆ ತುಂಬಾ ಅಮೂಲ್ಯವಾಗಿದೆ. ಆದರೆ ಪಾಕಿಸ್ತಾನದ ಪ್ರವಾಹದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾನು ಈ ಬ್ಯಾಟನ್ನು ಶಾಹಿದ್ ಅಫ್ರಿದಿ ಫೌಂಡೇಶನ್‌ಗೆ ನೀಡುತ್ತಿದ್ದೇನೆ. ಯಾಕೆಂದರೆ ಲಾಲಾ ಯಾವಾಗಲೂ ನಿರ್ಗತಿಕರಿಗೆ ಮತ್ತು ಅರ್ಹರಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತಾರೆ" ಎಂದು ನಸೀಮ್ ಶಾ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನಿಮ್ಮ ಜೊತೆ ಆಡಿದ್ದು ತುಂಬಾ ಖುಷಿ ನೀಡಿದೆ: ರಾಬಿನ್ ಉತ್ತಪ್ಪಗೆ ವಿರಾಟ್ ಕೊಹ್ಲಿ ಸಂದೇಶನಿಮ್ಮ ಜೊತೆ ಆಡಿದ್ದು ತುಂಬಾ ಖುಷಿ ನೀಡಿದೆ: ರಾಬಿನ್ ಉತ್ತಪ್ಪಗೆ ವಿರಾಟ್ ಕೊಹ್ಲಿ ಸಂದೇಶ

ಪಾಕಿಸ್ತಾನಕ್ಕೆ ನೆರೆ ಆಘಾತ: ಈ ವರ್ಷ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಬಹುತೇಕ ಪಾಕಿಸ್ತಾನ ನೆರೆಯಿಂದ ತತ್ತರಿಸಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ ಸೆಪ್ಟೆಂಬರ್ 15ರ ವೇಳೆಗೆ ಪ್ರವಾಹಕ್ಕೆ ಬಲಿಯಾದ ಪಾಕಿಸ್ತಾನಿಯರ ಸಂಖ್ಯೆ 1,500ರ ಸಮೀಪದಲ್ಲಿದೆ. ದಾಖಲೆ ಪ್ರಮಾಣದಲ್ಲಿ ಸುರಿದ ಮಾನ್ಸೂನ್ ಮಳೆ ಮತ್ತು ಉತ್ತರ ಪರ್ವತಗಳಲ್ಲಿ ಹಿಮಕರಗುವಿಕೆಯಿಂದ ಉಂಟಾದ ಪ್ರವಾಹದ ಕಾರಣದಿಂದಾಗಿ ಸಾವಿರಾರು ಕೋಟಿ ಮೌಲ್ಯದ ನಷ್ಟವುಂಟಾಗಿದೆ.

Story first published: Thursday, September 15, 2022, 18:44 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X