ಪಾಕಿಸ್ತಾನದ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ತಂಡದಿಂದ ಹೊರಕ್ಕೆ

ಕರಾಚಿ: ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ರಾಷ್ಟ್ರೀಯ ತಂಡದಿಂದ ಹೊರ ಬಿದ್ದಿದ್ದಾರೆ. ಡೆಂಗ್ಯು ಜ್ವರಕ್ಕೆ ತುತ್ತಾಗಿರುವ ಹಫೀಜ್ ಬುಧವಾರ (ಸೆಪ್ಟೆಂಬರ್ 29) ಪಾಕ್‌ ತಂಡದಿಂದ ಹೊರ ಬಿದ್ದಿದ್ದಾರೆ. ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಹಫೀಜ್ ಆಡೋದು ಅನುಮಾನ.

ಐಪಿಎಲ್ 2021: ರಾಯಲ್ ಚಾಲೆಂಜರ್ಸ್ ಪರ ಜಾರ್ಜ್ ಗಾರ್ಟನ್ ಪಾದಾರ್ಪಣೆಐಪಿಎಲ್ 2021: ರಾಯಲ್ ಚಾಲೆಂಜರ್ಸ್ ಪರ ಜಾರ್ಜ್ ಗಾರ್ಟನ್ ಪಾದಾರ್ಪಣೆ

ಮುಂದಿನ ತಿಂಗಳು 41ರ ಹರೆಯಕ್ಕೆ ಕಾಲಿರಿಸಲಿರುವ ಮೊಹಮ್ಮದ್ ಹಫೀಜ್, ಸದ್ಯ ಲಾರೋರ್‌ನಲ್ಲಿರುವ ತನ್ನ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಅಕ್ಟೋಬರ್‌-ನವೆಂಬರ್‌ನಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ ವೇಳೆ ಫಿಟ್ ಆದರೆ ಆಡುವ ನಿರೀಕ್ಷೆಯಿದೆ. ಅಕ್ಟೋಬರ್‌ 17ರಿಂದ ಟಿ20 ವಿಶ್ವಕಪ್‌ ಅರಂಭಗೊಳ್ಳಲಿದೆ.

"ಡೆಂಗ್ಯು ಜ್ವರದ ತೀವ್ರತೆ ಅವರು ಎಷ್ಟು ಬೇಗ ಚೇತರಿಸಿಕೊಳ್ಳಲಿದ್ದಾರೆ ಅನ್ನೋದನ್ನು ನಿರ್ಧರಿಸಲಿದೆ. ಖಾಯಿಲೆ ಒಂದು ವಾರಗಳವರೆಗೂ ಇರಲಿದೆ. ಪ್ಲೇಟ್‌ಲೆಟ್ಸ್ ಮತ್ತೆ ಉತ್ಪಾದನೆಯಾಗಲು ಮತ್ತು ಖಾಯಿಲೆಯಿಂದ ಸಂಪೂರ್ಣ ಚೇತರಿಸಿಕೊಳ್ಳಲು ಹತ್ತಿರ ಒಂದು ತಿಂಗಳ ಕಾಲ ಸಮಯ ಬೇಕಾಗಬಹುದು," ಎಂದು ಸ್ಥಳೀಯ ಡಾಕ್ಟರ್ ಹೇಳಿದ್ದಾರೆ.

ಐಪಿಎಲ್ 2021: ಟೂರ್ನಿ ಮಧ್ಯದಲ್ಲಿಯೇ ಮುಂಬೈ ಇಂಡಿಯನ್ಸ್‌ನಿಂದ ಅರ್ಜುನ್ ತೆಂಡೂಲ್ಕರ್ ಔಟ್!ಐಪಿಎಲ್ 2021: ಟೂರ್ನಿ ಮಧ್ಯದಲ್ಲಿಯೇ ಮುಂಬೈ ಇಂಡಿಯನ್ಸ್‌ನಿಂದ ಅರ್ಜುನ್ ತೆಂಡೂಲ್ಕರ್ ಔಟ್!

ಟಿ20 ವಿಶ್ವಕಪ್‌ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಅಕ್ಟೋಬರ್ 14ರ ವೇಳೆ ಯುಎಇಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಹಫೀಜ್ ಪಾಕ್ ತಂಡದಲ್ಲಿ ಸೀನಿಯರ್ ಮೋಸ್ಟ್ ಪ್ಲೇಯರ್. ಶೋಯೆಬ್ ಮಲಿಕ್ ಯುಗದ ಆಟಗಾರರು. ಪಾಕ್ ತಂಡದ ಪರ ಹಫೀಜ್ 55 ಟೆಸ್ಟ್ ಪಂದ್ಯಗಳಲ್ಲಿ 3652 ರನ್, 53 ವಿಕೆಟ್‌, 218 ಏಕದಿನ ಪಂದ್ಯಗಳಲ್ಲಿ 6614 ರನ್, 139 ವಿಕೆಟ್, 113 ಟಿ20ಐ ಪಂದ್ಯಗಳಲ್ಲಿ 2429 ರನ್, 8 ಐಪಿಎಲ್ ಪಂದ್ಯಗಳಲ್ಲಿ 64 ರನ್, 2 ವಿಕೆಟ್‌ ದಾಖಲೆ ಹೊಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಫೀಜ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. ಸದ್ಯ ಯುಎಇಯಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿದೆ. ಅಕ್ಟೋಬರ್ 15ರಂದು ಐಪಿಎಲ್ ಪಂದ್ಯ ಫೈನಲ್‌ ಮೂಲಕ ಕೊನೆಗೊಳ್ಳಲಿದೆ. ಆ ಬಳಿಕ ಯುಎಇ ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್ ಆರಂಭಗೊಳ್ಳಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 29, 2021, 21:31 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X