ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2015ರ ವಿಶ್ವಕಪ್ ಟೂರ್ನಿಯಿಡೀ ಮುರಿದ ಮೊಣಕಾಲಿನಲ್ಲೇ ಆಡಿದ್ದೆ: ಶಮಿ

Played entire 2015 World Cup with fractured knee: Mohammad Shami

ನವದೆಹಲಿ, ಏಪ್ರಿಲ್ 16: 2015ರ ವಿಶ್ವಕಪ್ ಟೂರ್ನಿಯಿಡೀ ಮುರಿದ ಮೊಣಕಾಲಿನಲ್ಲೇ ಆಡಿದ್ದೆ ಎಂದು ಭಾರತದ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ. ಈ ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದಿತ್ತು. 2015ರಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.

ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!

'2015ರ ವೇಳೆ ನನಗೆ ಮೊಣಕಾಲು ಗಾಯವಿತ್ತು. ಪಂದ್ಯದ ಬಳಿಕ ನನಗೆ ನಡೆದಾಡಲೇ ಆಗುತ್ತಿರಲಿಲ್ಲ. ಆದರೆ ನಾನು ಇಡೀ ಟೂರ್ನಿಯುದ್ದಕ್ಕೂ ಮುರಿದ ಮೊಣಕಾಲಿನಲ್ಲೇ ಆಡಿದ್ದೆ. 2015ರ ವಿಶ್ವಕಪ್‌ನಲ್ಲಿ ನಾನು ಆಡಿದ್ದು ನಿತಿನ್ ಪಟೇಲ್ ತುಂಬಿದ ವಿಶ್ವಾಸದಿಂದ,' ಎಂದು ಎಂದು ಶಮಿ ಹೇಳಿದ್ದಾರೆ.

ಕ್ರಿಕೆಟ್‌ನ ಅಪರೂಪದ ಕ್ಷಣ: ಮೈದಾನದಲ್ಲೇ ಕಣ್ಣೀರಿಟ್ಟ ಐದು ಭಾರತೀಯ ಕ್ರಿಕೆಟಿಗರು!ಕ್ರಿಕೆಟ್‌ನ ಅಪರೂಪದ ಕ್ಷಣ: ಮೈದಾನದಲ್ಲೇ ಕಣ್ಣೀರಿಟ್ಟ ಐದು ಭಾರತೀಯ ಕ್ರಿಕೆಟಿಗರು!

'ಮೊದಲ ಪಂದ್ಯದ ವೇಳೆಯೇ ಮೊಣಕಾಲು ಮುರಿದಿತ್ತು. ನನ್ನ ತೊಡೆ ಮತ್ತು ಮೊಣಕಾಲಿನ ಗಾತ್ರ ಎರಡೂ ಒಂದೇ. ಆ ದಿನಗಳಲ್ಲಿ ಡಾಕ್ಟರ್‌ಗಳು ಪ್ರತೀದಿನ ಮೊಣಕಾಲಿನಿಂದ ದ್ರವ ತೆಗೆಯುತ್ತಿದ್ದರು. ನಾನು ಪ್ರತೀ ದಿನ ಮೂರು ನೋವು ನಿವಾರಕ ಮಾತ್ರಗಳನ್ನು ನುಂಗುತ್ತಿದ್ದೆ,' ಎಂದು ಶಮಿ ವಿವರಿಸಿದರು.

ಇಂಗ್ಲೆಂಡ್‌ನ ಈ ಸಹೋದರರಿಗೆ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಸೆಇಂಗ್ಲೆಂಡ್‌ನ ಈ ಸಹೋದರರಿಗೆ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಸೆ

ಆ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಒಟ್ಟು 7 ಪಂದ್ಯಗಳನ್ನಾಡಿದ್ದ ಶಮಿ, ಒಟ್ಟು 17 ವಿಕೆಟ್‌ಗಳನ್ನು ಪಡೆದಿದ್ದರು. ಅಷ್ಟೇ ಅಲ್ಲ, ಅತ್ಯಧಿಕ ವಿಕೆಟ್‌ ಪಡೆದ ಎರಡನೇ ಬೌಲರ್‌ ಆಗಿಯೂ ಶಮಿ ಗುರುತಿಸಿಕೊಂಡಿದ್ದರು. ಅತ್ಯಧಿಕ ವಿಕೆಟ್ ಪಡೆದಿದ್ದು ಭಾರತದ ಉಮೇಶ್ ಯಾದವ್. ಶಮಿಗಿಂತ ಹೆಚ್ಚು ಪಂದ್ಯಳನ್ನಾಡಿದ್ದ ಯಾದವ್, 18 ವಿಕೆಟ್‌ಗಳನ್ನು ಮುರಿದಿದ್ದರು.

'ಟಿ20 ವಿಶ್ವಕಪ್ 2020' ರದ್ದಾದರೆ ತೊಂದರೆ: ಪಿಸಿಬಿ ಅಧ್ಯಕ್ಷ ಎಚ್ಚರಿಕೆ!'ಟಿ20 ವಿಶ್ವಕಪ್ 2020' ರದ್ದಾದರೆ ತೊಂದರೆ: ಪಿಸಿಬಿ ಅಧ್ಯಕ್ಷ ಎಚ್ಚರಿಕೆ!

29ರ ಹರೆಯದ ಶಮಿ, ಟೂರ್ನಿಯ ವೇಳೆ ತನಗೆ ನಾಯಕ ಎಂಎಸ್ ಧೋನಿ ಕೂಡ ಸ್ಫರ್ತಿ ತುಂಬಿರುವುದಾಗಿಯೂ ಹೇಳಿಕೊಂಡಿದ್ದಾರೆ. ಮುಖ್ಯವಾಗಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಸೆಮಿಫೈನಲ್‌ ಪಂದ್ಯದ ವೇಳೆ ತನಗೆ ಧೋನಿ ಧೈರ್ಯ ತುಂಬಿದ್ದರು ಎಂದು ಶಮಿ ತಿಳಿಸಿದ್ದಾರೆ. ಅಂದ್ಹಾಗೆ ಈ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 95 ರನ್‌ನಿಂದ ಸೋತಿತ್ತು.

Story first published: Thursday, April 16, 2020, 16:00 [IST]
Other articles published on Apr 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X