IPL 2023: ಐಪಿಎಲ್‌ನಲ್ಲಿ ಆಡಬೇಕೆನ್ನುವುದು ಕನಸು: ಅಷ್ಟು ದೊಡ್ಡ ಮೊತ್ತ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ!

ಇಂಗ್ಲೆಂಡ್‌ನ ಭರವಸೆಯ ಯುವ ಆಟಗಾರ ಹ್ಯಾರಿ ಬ್ರೂಕ್‌ಗೆ ಐಪಿಎಲ್‌ ಮಿನಿ ಹರಾಜಿನಲ್ಲಿ ಅದೃಷ್ಟ ಖುಲಾಯಿಸಿತು. ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ನನ್ನು ಬರೋಬ್ಬರಿ 13.25 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತು.

ಐಪಿಎಲ್‌ನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ ಬಗ್ಗೆ ಹ್ಯಾರಿ ಬ್ರೂಕ್ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್‌ನಲ್ಲಿ ಆಡಬೇಕು ಎನ್ನುವುದು ನನಗೆ ಕನಸಾಗಿತ್ತು, ಆದರೆ ಅಷ್ಟೊಂದು ಹಣವನ್ನು ಪಡೆಯುತ್ತೇನೆ ಎನ್ನುವ ಕಲ್ಪನೆಯೇ ಇರಲಿಲ್ಲ ಎಂದು ಹೇಳಿದ್ದಾರೆ.

SA20: ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಹೊಡೆದ ರೀತಿ ಸಿಕ್ಸ್ ಬಾರಿಸಿದ ಆರ್​ಸಿಬಿ ಬ್ಯಾಟರ್ ವಿಲ್ ಜ್ಯಾಕ್ಸ್!SA20: ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಹೊಡೆದ ರೀತಿ ಸಿಕ್ಸ್ ಬಾರಿಸಿದ ಆರ್​ಸಿಬಿ ಬ್ಯಾಟರ್ ವಿಲ್ ಜ್ಯಾಕ್ಸ್!

13.25 ಕೋಟಿ ರುಪಾಯಿ ಪಡೆದುಕೊಂಡಿರುವ ಅವರು ಅದಕ್ಕೆ ತಕ್ಕಂತೆ 2023ರ ಐಪಿಎಲ್‌ನಲ್ಲಿ ಪ್ರದರ್ಶನ ನೀಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ 2023ರ ಐಪಿಎಲ್‌ನಲ್ಲಿ ಆಡುವುದರಿಂದ 2023ರ ಏಕದಿನ ವಿಶ್ವಕಪ್‌ ತಯಾರಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದ ಹ್ಯಾರಿ ಬ್ರೂಕ್‌ರನ್ನು ಖರೀದಿಸಲು ಹಲವು ತಂಡಗಳು ಪೈಪೋಟಿ ನಡೆಸಿದವು. ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳೊಂದಿಗೆ ಸೆಣೆಸಿದ ಸನ್‌ರೈಸರ್ಸ್ ಹೈದರಾಬಾದ್ ಅಂತಿಮವಾಗಿ 13.25 ಕೋಟಿ ರುಪಾಯಿ ನೀಡಿ ಇಂಗ್ಲೆಂಡ್ ಯುವ ಆಟಗಾರನನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು.

IND W vs WI W: ಮಂದಾನ, ಕೌರ್ ಭರ್ಜರಿ ಅರ್ಧಶತಕ: ವೆಸ್ಟ್ ಇಂಡೀಸ್ ವಿರುದ್ಧ 56 ರನ್‌ಗಳ ಭರ್ಜರಿ ಜಯIND W vs WI W: ಮಂದಾನ, ಕೌರ್ ಭರ್ಜರಿ ಅರ್ಧಶತಕ: ವೆಸ್ಟ್ ಇಂಡೀಸ್ ವಿರುದ್ಧ 56 ರನ್‌ಗಳ ಭರ್ಜರಿ ಜಯ

 ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತೇನೆ ಅಂದುಕೊಂಡಿರಲಿಲ್ಲ

ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತೇನೆ ಅಂದುಕೊಂಡಿರಲಿಲ್ಲ

ಡೈಲಿ ಮೇಲ್‌ ಜೊತೆ ಮಾತನಾಡಿರುವ ಬ್ರೂಕ್, "ಇಷ್ಟೊಂದು ದೊಡ್ಡ ಮೊತ್ತವನ್ನು ಪಡೆಯುತ್ತೇನೆ ಎಂದು ಕನಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಐಪಿಎಲ್‌ನಲ್ಲಿ ಆಡಬೇಕು ಎನ್ನುವ ಆಸೆ ಇತ್ತು, ಇಷ್ಟು ದೊಡ್ಡ ಮೊತ್ತ ಸಿಕ್ಕಿರುವುದು ಬೋನಸ್" ಎಂದು ಹೇಳಿದ್ದಾರೆ.

"ಐಪಿಎಲ್ ಮಿನಿ ಹರಾಜಿನಲ್ಲಿ ಯಾವುದಾದರೂ ತಂಡ ನನ್ನನ್ನು ಖರೀದಿ ಮಾಡುತ್ತದೆ ಎನ್ನುವ ನಂಬಿಕೆ ಇತ್ತು. ಆದರೆ, ಇಷ್ಟೊಂದು ಪೈಪೋಟಿ ಇರುತ್ತದೆ ಎಂದುಕೊಂಡಿರಲಿಲ್ಲ. ಅತ್ಯುತ್ತಮ ತಂಡಗಳ ಜೊತೆ ಕ್ರಿಕೆಟ್‌ ಆಡಬೇಕು ಎನ್ನುವ ಇಚ್ಛೆಯಿದೆ. ಸಾಧ್ಯವಾದಷ್ಟು ಕಾಲ ಇಂಗ್ಲೆಂಡ್ ತಂಡಕ್ಕಾಗಿ ಆಡಲು ಬಯಸುತ್ತೇನೆ. ಐಪಿಎಲ್‌ನಲ್ಲಿ ಆಡುವುದು ದೊಡ್ಡ ಕನಸಾಗಿತ್ತು, ಬ್ಯಾಟಿಂಗ್‌ ಮಾಡುವುದು ನನಗೆ ಇಷ್ಟ, ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ" ಎಂದು ಹೇಳಿದರು.

 ಸ್ಪಿನ್ ವಿರುದ್ಧ ಬ್ರೂಕ್ ಉತ್ತಮ ಪ್ರದರ್ಶನ

ಸ್ಪಿನ್ ವಿರುದ್ಧ ಬ್ರೂಕ್ ಉತ್ತಮ ಪ್ರದರ್ಶನ

ಸ್ಪಿನ್ ವಿರುದ್ಧ ಉತ್ತಮವಾಗಿ ಆಡುವ ಅವರ ಸಾಮರ್ಥ್ಯವೇ ಅವರಿಗೆ ಐಪಿಎಲ್‌ನಲ್ಲಿ ಹೆಚ್ಚಿನ ಬೇಡಿಕೆ ಬರಲು ಕಾರಣ ಎಂದು ಬ್ರೂಕ್ ಒಪ್ಪಿಕೊಂಡಿದ್ದಾರೆ. "ಐಪಿಎಲ್‌ ನಂತರ ನಾನು ಈ ಬಗ್ಗೆ ಹೇಳಬಲ್ಲೆ. ನಾನು ಯಾವಾಗಲೂ ಮ್ಯಾಚ್‌ ವಿನ್ನರ್ ಆಗಲು ಬಯಸುತ್ತೇನೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ನನ್ನ ಸಾಮರ್ಥ್ಯ, ದೊಡ್ಡ ಗುರಿಯನ್ನು ಕೂಡ ಬೆನ್ನಟ್ಟಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

"ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ, ಇಷ್ಟೊಂದು ಮೊತ್ತ ಪಡೆಯುತ್ತಿರಲಿಲ್ಲ ಎನಿಸುತ್ತದೆ. ಆದರೆ, ಪಾಕಿಸ್ತಾನದ ನೆಲದಲ್ಲಿ ಸ್ಪಿನ್‌ ದಾಳಿ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡಿದೆ. ಐಪಿಎಲ್‌ನಲ್ಲಿ ಕೂಡ ಸ್ಪಿನ್‌ ಬೌಲಿಂಗ್ ಪ್ರಮುಖವಾಗಿರಲಿದೆ. ಸಾಕಷ್ಟು ಸ್ಪಿನ್ನರ್ ಗಳ ವಿರುದ್ಧ ಆಡಬೇಕಾಗಿದೆ, ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ." ಎಂದು ಹೇಳಿದ್ದಾರೆ.

 ಟೆಸ್ಟ್ ಸರಣಿಯಲ್ಲಿ ಸತತ ಮೂರು ಶತಕ

ಟೆಸ್ಟ್ ಸರಣಿಯಲ್ಲಿ ಸತತ ಮೂರು ಶತಕ

ಹ್ಯಾರಿ ಬ್ರೂಕ್ ಕಡಿಮೆ ಅವಧಿಯಲ್ಲೇ ಇಂಗ್ಲೆಂಡ್‌ನ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಬ್ರೂಕ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸರಣಿಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಸತತವಾಗಿ ಶತಕ ಸಿಡಿಸಿ ಮಿಂಚಿದರು.

ಮೂರು ಟೆಸ್ಟ್ ಗಳಿಂದ 93.60 ಸರಾಸರಿಯಲ್ಲಿ 468 ರನ್ ಗಳಿಸಿದರು. ಅವರ ಅತ್ಯುತ್ತಮ ಆಟದ ಪರಿಣಾಮವಾಗಿ 2022ರ ಡಿಸೆಂಬರ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Tuesday, January 24, 2023, 12:35 [IST]
Other articles published on Jan 24, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X