ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೇಸನ್ ರಾಯ್‌ ಬದಲಿಗೆ ಅಫ್ಘನ್ ಆಟಗಾರನೊಂದಿಗೆ ಗುಜರಾತ್ ಟೈಟನ್ಸ್ ಒಪ್ಪಂದ: ವರದಿ

Rahmanullah Gurbaz joins Gujarat Titans as replace to Jason Roy: Reports

ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ಕ್ರಿಕೆಟಿಗ ಜೇಸನ್ ರಾಯ್ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಆಘಾತ ನೀಡಿದ್ದರು. ಕುಟುಂಬದೊಂದಿಗೆ ಕಾಲಕಳೆಯುವ ಕಾರಣವನ್ನು ನೀಡಿ ರಾಯ್ ಐಪಿಎಲ್‌ನಿಮದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು. ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದಿದ್ದು ಜೇಸನ್ ರಾಯ್ ಬದಲಿಗೆ ಯಾವ ಆಟಗಾರ ತಂಡಕ್ಕೆ ಸೇರ್ಪಡೆಯಾಗಬಹುದು ಎಂಬ ಕುತೂಹಲ ಉಳಿದುಕೊಂಡಿತ್ತು.

ಇದೀಗ ಈ ಕುತೂಹಲ ತೆರೆಬೀಳುವ ಹಂತಕ್ಕೆ ತಲುಪಿದೆ. ಜೇಸನ್ ರಾಯ್ ಬದಲಿಗೆ ಗುಜರಾತ್ ಟೈಟನ್ಸ್ ಫ್ರಾಂಚೈಸಿ ಅಫ್ಘಾನಿಸ್ತಾನದ ಯುವ ಆಟಗಾರನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಫ್ರಾಂಚೈಸಿ ಇನ್ನಷ್ಟೇ ಅಧಿಕೃತವಾಗಿ ಮಾಹಿತಿಯನ್ನು ನೀಡಬೇಕಿದೆ. 20ರ ಹರೆಯದ ವಿಕೆಟ್ ಕೀಪರ್ ಬ್ಯಾಟರ್ ರೆಹ್ಮನುಲ್ಲಾಹ್ ಗರ್ಬಾಜ್ ಇತ್ತೀಚೆಗೆ ಅಫ್ಘಾನಿಸ್ತಾನ ತಂಡದ ಪರವಾಗಿ ಚುಟುಕು ಕ್ರಿಕೆಟ್‌ನಲ್ಲಿ ಸಾಕಷ್ಟು ಉತ್ತಮ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಮಿಂಚುಹರಿಸಿದ್ದ ಐಪಿಎಲ್ ಫ್ರಾಂಚೈಸಿಯ ಮನಗೆದ್ದಿದ್ದಾರೆ.

ರವೀಂದ್ರ ಜಡೇಜಾಗೆ ಬಿಸಿಸಿಐ A+ ಗ್ರೇಡ್ ಕಾಂಟ್ರ್ಯಾಕ್ಟ್ ನೀಡಬೇಕು: ವಾಸಿಂ ಜಾಫರ್ರವೀಂದ್ರ ಜಡೇಜಾಗೆ ಬಿಸಿಸಿಐ A+ ಗ್ರೇಡ್ ಕಾಂಟ್ರ್ಯಾಕ್ಟ್ ನೀಡಬೇಕು: ವಾಸಿಂ ಜಾಫರ್

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪರವಾಗಿ ಈವರೆಗೆ 20 ಪಂದ್ಯಗಳಲ್ಲಿ ರೆಹ್ಮನುಲ್ಲಾಹ್ ಗರ್ಬಾಜ್ ಕಣಕ್ಕಿಳಿದಿದ್ದು 26.7ರ ಸರಾಸರಿಯಲ್ಲಿ 137.63ರ ಸ್ಟ್ರೈಕ್‌ರೇಟ್‌ನೊಂದಿಗೆ 534 ರನ್‌ಗಳಿಸಿದ್ದಾರೆ. ಅವರಿಂದ ಬಂದ ಅತ್ಯುತ್ತಮ ಸ್ಕೋರ್ 87 ರನ್. ರೆಹ್ಮನುಲ್ಲಾಹ್ ಗರ್ಬಾಜ್ ಐಪಿಎಲ್‌ನಲ್ಲಿ ಈವರೆಗೆ ಆಡದಿದ್ದರೂ ವಿಶ್ವದ ಹಲವು ಟಿ20 ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇತ್ತೀಚೆಗಷ್ಟೇ ಅಂತ್ಯವಾದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಗರ್ಬಾಜ್ ಇಸ್ಲಮಾಬಾದ್ ಯುನೈಟೆಡ್ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಆರು ಪಂದ್ಯದಲ್ಲಿ ಆಡಿದ್ದ ಅವರು 27.80 ಸರಾಸರಿಯಲ್ಲಿ 180.51ರಷ್ಟು ಅದ್ಭುತ ಸ್ಟ್ರೈಕ್‌ರೇಟ್‌ನಲ್ಲಿ 139 ರನ್‌ಗಳಿಸಿದ್ದರು. ಅಗ್ರ ಕ್ರಮಾಂಕದಲ್ಲಿ ಗರ್ಬಾಜ್ ಅವರ ಸ್ಪೋಟಕ ಬ್ಯಾಟಿಂಗ್ ಇಸ್ಮಮಾಬಾದ್ ತಂಡ ಕ್ವಾಲಿಫೈಯರ್ ಹಂತಕ್ಕೇರಲು ಸಹಾಯ ಮಾಡಿತ್ತು.

ಗರ್ಬಾಜ್ ಐಪಿಎಲ್‌ನಲ್ಲಿ 50 ಲಕ್ಷ ಮೂಲಬೆಲೆಗೆ ಹೆಸರು ನೊಂದಾಯಿಸಿಕೊಂಡಿದ್ದರು. ಆದರೆ ಯಾವುದೇ ತಂಡ ಕೂಡ ಕೊಂಡುಕೊಳ್ಳಲು ಮನಸ್ಸು ಮಾಡದ ಕಾರಣ ಹರಾಜಾಗದೆ ಉಳಿದುಕೊಂಡಿದ್ದರು. ಆದರೆ ಈಗ ಅವರ ತಮ್ಮ ರಾಷ್ಟ್ರೀಯ ತಂಡ ಅಫ್ಘಾನಿಸ್ತಾನದ ಆಟಗಾರರಾದ ರಶೀದ್ ಖಾನ್ ಹಾಗೂ ನೂರ್ ಅಹ್ಮದ್ ಅವರನ್ನು ಒಳಗೊಂಡಿರುವ ತಂಡಕ್ಕೆ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಐದನೇ ಅಫ್ಘಾನಿಸ್ತಾನದ ಆಟಗಾರನಾಗಲಿದ್ದಾರೆ.

ಐಪಿಎಲ್: ಕೊನೆಗೂ ನೂತನ ನಾಯಕನ ಘೋಷಣೆಯ ದಿನಾಂಕ ಪ್ರಕಟಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರುಐಪಿಎಲ್: ಕೊನೆಗೂ ನೂತನ ನಾಯಕನ ಘೋಷಣೆಯ ದಿನಾಂಕ ಪ್ರಕಟಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸುರೇಶ್ ರೈನಾ ಸೇರ್ಪಡೆ ಬಗ್ಗೆ ಹರಿದಿತ್ತು ಗಾಳಿ ಸುದ್ದಿ: ಇನ್ನು ಈ ಬಾರಿಯ ಐಪಿಎಲ್‌ನಿಂದ ಜೇಸನ್ ರಾಯ್ ಹಿಂದಕ್ಕೆ ಸರಿಯುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುತ್ತಿದ್ದಂತೆಯೇ ಸುರೇಶ್ ರೈನಾ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸುರೇಶ್ ರೈನಾ ಹರಾಜಾಗದೆ ಉಳಿದುಕೊಂಡಿದ್ದರು. ಹೀಗಾಗಿ ಅಭಿಮಾನಿಗಳು ಸುರೇಶ್ ರೈನಾ ಅವರನ್ನು ಗುಜರಾತ್ ಟೈಟನ್ಸ್ ತಂಡ ಸೇರ್ಪಡೆಗೊಳಿಸಬಹುದು ಎಂಬ ನಿರೀಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಗುಜರಾತ್ ಟೈಟನ್ಸ್ ತಂಡ ಅಧಿಕೃತ ಮಾಹಿತಿ ನೀಡಿದ್ದು ಸುರೇಶ್ ರೈನಾ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯಾವ ಚಿಂತನೆಯೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.

ಗುಜರಾತ್ ಟೈಟನ್ಸ್ ಸ್ಕ್ವಾಡ್ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ಅಭಿನವ್ ಸದಾರಂಗನಿ, ಡೇವಿಡ್ ಮಿಲ್ಲರ್, ಗುರುಕೀರತ್ ಸಿಂಗ್ ಮಾನ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್) ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಡೊಮಿನಿಕ್ ಡ್ರೇಕ್ಸ್, ಬಿ ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಯಶ್ ದಯಾಳ್, ಅಲ್ಜಾರಿ ಜೋಸೆಫ್ , ಪ್ರದೀಪ್ ಸಾಂಗ್ವಾನ್, ವರುಣ್ ಆರೋನ್, ದರ್ಶನ್ ನಲ್ಕಂಡೆ, ರಶೀದ್ ಖಾನ್, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಜಯಂತ್ ಯಾದವ್

Story first published: Wednesday, March 9, 2022, 9:37 [IST]
Other articles published on Mar 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X