ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ದ್ರಾವಿಡ್: ಮತ್ತೋರ್ವ ದಿಗ್ಗಜನಿಗೂ ಮಹತ್ವದ ಜವಾಬ್ದಾರಿ!

ನಿರೀಕ್ಷೆಯಂತೆಯೇ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ದ್ರಾವಿಡ್ ಮತ್ತಷ್ಟು ಹತ್ತಿರವಾಗಿದ್ದಾರೆ. ಬಿಸಿಸಿಐ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ದ್ರಾವಿಡ್ ಆಯ್ಕೆಗೆ ಸಂಬಂಧಿಸಿದ ಅಧಿಕೃತ ಪ್ರಕ್ರಿಯೆಗಳನ್ನು ನಡೆಸಲಿದೆ.

ಸ್ವತಃ ಬಿಸಿಸಿಐ ದ್ರಾವಿಡ್ ಅವರನ್ನು ಮನವೊಲಿಸಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕಾರಣವಾಗಿರುವ ಹಿನ್ನೆಲೆಯಲ್ಲಿ ದ್ರಾವಿಡ್ ಆಯ್ಕೆಯಲ್ಲಿ ಯಾವುದೇ ಅನುಮಾನಗಳು ಇಲ್ಲ. ಎನ್‌ಸಿಎ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯ ಮೇಲೆ ಆಸಕ್ತಿಯನ್ನು ಹೊಂದಿರಲಿಲ್ಲ. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದ್ರಾವಿಡ್ ಮನವೊಲಿಸುವಲ್ಲಿ ಯಶಸ್ವುಯಾಗಿದ್ದು ಮುಂದಿನ ಪ್ರಕ್ರಿಯೆಗಳೂ ಶೀಘ್ರವಾಗಿ ನಡೆಯಲಿದೆ.

ಅಗ್ರಸ್ಥಾನಕ್ಕೇರಿದ ಅಫ್ಘಾನಿಸ್ತಾನ, ಶಮಿ ಪರ ಸಚಿನ್ ಬ್ಯಾಟಿಂಗ್; ಅಕ್ಟೋಬರ್ 25ರ ಪ್ರಮುಖ ಕ್ರಿಕೆಟ್ ಸುದ್ದಿಗಳುಅಗ್ರಸ್ಥಾನಕ್ಕೇರಿದ ಅಫ್ಘಾನಿಸ್ತಾನ, ಶಮಿ ಪರ ಸಚಿನ್ ಬ್ಯಾಟಿಂಗ್; ಅಕ್ಟೋಬರ್ 25ರ ಪ್ರಮುಖ ಕ್ರಿಕೆಟ್ ಸುದ್ದಿಗಳು

ಎನ್‌ಸಿಎ ಮುಖ್ಯಸ್ಥ ಹುದ್ದೆಗೆ ಲಕ್ಷ್ಮಣ್

ಎನ್‌ಸಿಎ ಮುಖ್ಯಸ್ಥ ಹುದ್ದೆಗೆ ಲಕ್ಷ್ಮಣ್

ಇನ್ನು ದ್ರಾವಿಡ್ ಸದ್ಯ ಹೊಂದಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯ ಮುಖ್ಯಸ್ಥ ಹುದ್ದೆ ಕೂಡ ಟೀಮ್ ಇಂಡಿಯಾದ ದಿಗ್ಗಜ ಟೆಸ್ಟ್ ಆಟಗಾರನ ಆಟಗಾರನ ಪಾಲಾಗುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಈ ಹುದ್ದೆ ಅಲಂಕರಿಸುವ ಸಾಧ್ಯತೆಯಿದೆ. ಈ ಬಗ್ಗೆ ಈ ಹಿಂದೆ ಕೂಡ ವರದಿಗಳಾಗುತ್ತು. ಆದರೆ ಲಕ್ಷ್ಮಣ್ ಈ ಜವಾಬ್ಧಾರಿ ವಹಿಸಿಕೊಳ್ಳಲು ನಿರಾಕರಿಸಿದ್ದರು ಎನ್ನಲಾಗಿದೆ. ಆದರೆ ಈಗ ನಡೆದಿರುವ ಬೆಳವಣಿಗೆಯ ಪ್ರಕಾರ ಲಕ್ಷ್ಮಣ್ ಈ ಹುದ್ದೆಗೇರುವ ಸ್ಪರ್ಧೆಯಲ್ಲಿ ಮುಂದಿದ್ದಾರೆ ಎನ್ನಲಾಗಿದೆ. ಎಎನ್‌ಐ ಸುದ್ದಿ ಸಂಸ್ಥೆ ಈ ಬಗ್ಗೆ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

"ಹೌದು, ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ದ್ರಾವಿಡ್ ಅವರಿಂದ ಎನ್‌ಸಿಎ ಮುಖ್ಯಸ್ಥ ಹುದ್ದೆಯನ್ನು ವಹಿಸಿಕೊಳ್ಳುವ ರೇಸ್‌ನಲ್ಲಿ ಖಂಡಿತವಾಗಿಯೂ ವಿವಿಎಸ್ ಲಕ್ಷ್ಮಣ್ ಇದ್ದಾರೆ" ಎಂದು ಬಿಸಿಸಿಐ ಮೂಲಗಳು ಮಾಹಿತಿಯನ್ನು ನೀಡಿದೆ.

ದ್ರಾವಿಡ್ ಮನವೊಲಿಸಿದ ಗಂಗೂಲಿ

ದ್ರಾವಿಡ್ ಮನವೊಲಿಸಿದ ಗಂಗೂಲಿ

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ಕಾರ್ಯಾವಧಿ ಈ ಬಾರಿಯ ಟಿ20 ವಿಶ್ವಕಪ್‌ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಮುಂದಿನ ಕೋಚ್ ಯಾರಾಗಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿತ್ತು. ದ್ರಾವಿಡ್ ಹೆಸರು ಆರಂಭದಿಂದಲೂ ಕೇಳಿ ಬರುತ್ತಿತ್ತಾದರೂ ಸ್ವತಃ ದ್ರಾವಿಡ್ ಈ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಆದರೆ ಕಳೆದ ಐಪಿಎಲ್ ಆವೃತ್ತಿಯ ಫೈನಲ್ ಸಂದರ್ಭದಲ್ಲಿ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ದ್ರಾವಿಡ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಅರ್ಜಿಯನ್ನು ಕೂಡ ಸಲ್ಲಿಸಿರುವುದರಿಂದ ಕೋಚ್ ಹುದ್ದೆ ದ್ರಾವಿಡ್ ಪಾಲಾಗುವುದು ಖಚಿತವಾಗಿದೆ.

ಟಿ20 ವಿಶ್ವಕಪ್: ನಮ್ಮ ಅಬ್ಯಾಸವನ್ನು ಬದಲಾಯಿಸಬೇಕು!; ಗೆಲುವಿನ ಬಳಿಕ ಸಹ ಆಟಗಾರರಿಗೆ ಬಾಬರ್ ಸಲಹೆ

2 ವರ್ಷಗಳ ಅವಧಿಗೆ ಒಪ್ಪಂದ ಸಾಧ್ಯತೆ

2 ವರ್ಷಗಳ ಅವಧಿಗೆ ಒಪ್ಪಂದ ಸಾಧ್ಯತೆ

ವರದಿಗಳ ಪ್ರಕಾರ ದ್ರಾವಿಡ್ ಆಪ್ತ ಪರಸ್ ಮಹಾಂಬ್ರೆ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಆದರೆ ಫೀಲ್ಡಿಂಗ್ ಕೋಚ್ ಭರತ್ ಅರುಣ್ ಜಾಗಕ್ಕೆ ಯಾರು ಎಂಬುದು ಉಲ್ಲೇಖವಾಗಿಲ್ಲ. ನೂತನ ಕೋಚ್ ಆಗಿ ಆಯ್ಕೆಯಾಗಲಿರುವ ರಾಹುಲ್ ದ್ರಾವಿಡ್ 2023ರ ವರೆಗೆ ತಂಡ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. ಬಿಸಿಸಿಐ ದ್ರಾವಿಡ್ ಜೊತೆಗೆ 2 ವರ್ಷಗಳ ಒಪ್ಪಂದ ಮಾಡಿಕೊಳ್ಳಲಿದೆ. ದ್ರಾವಿಡ್ 10 ಕೋಟಿ ರೂ. ವೇತನ ಪಡೆಯಲಿದ್ದಾರೆ ಎನ್ನಲಾಗಿದೆ. ಭಾರತ ಬ್ಯಾಟಿಂಗ್‌ ಕೋಚ್ ಆಗಿ ವಿಕ್ರಮ್ ರಾತೋಡ್ ಮುಂದುವರೆಯಲಿದ್ದಾರೆ ಎಂದು ಕೂಡ ತಿಳಿದು ಬಂದಿದೆ.

India ಸೋಲಿಗೆ ಮುಖ್ಯ ಕಾರಣ ತಿಳಿಸಿದ Pak ಆಟಗಾರ | Oneindia Kannada
ರಾಹುಲ್ ದ್ರಾವಿಡ್ ಸಾಧನೆ

ರಾಹುಲ್ ದ್ರಾವಿಡ್ ಸಾಧನೆ

ಭಾರತ ತಂಡಕ್ಕೆ ನಾಯಕರಾಗಿದ್ದ 'ಗ್ರೇಟ್ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್‌ಗೆ ಕೋಚ್ ಆಗಿಯೂ ಭಾರತ ತಂಡವನ್ನು ಮುನ್ನಡೆಸಿದ ಅನುಭವವಿದೆ. ಕಳೆದ ಜುಲೈನಲ್ಲಿ ಶ್ರೀಲಂಕಾಕ್ಕೆ ಪ್ರವಾಸಕ್ಕೆ ತೆರಳಿದ್ದ ಯುವ ತಂಡಕ್ಕೆ ದ್ರಾವಿಡ್ ಕೋಚ್ ಆಗಿ ತೆರಳಿದ್ದರು. ಆ ವೇಳೆ ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಭಾರತ ಇನ್ನೊಂದು ತಂಡದ ಜೊತೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ ಪ್ರವಾಸದಲ್ಲಿದ್ದ ಕಾರಣ ದ್ರಾವಿಡ್ ಈ ಜವಾಬ್ಧಾರಿ ವಹಿಸಿಕೊಂಡಿದ್ದರು. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಒಡಿಐ ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಿತ್ತು. ಇದರಲ್ಲಿ ಏಕದಿನ ಸರಣಿ 2-1ರಿಂದ ಭಾರತದ ಕೈ ವಶವಾಗಿದ್ದರೆ, ಟಿ20 ಸರಣಿಯನ್ನು 2-1ರಿಂದ ಲಂಕಾ ವಶಪಡಿಸಿಕೊಂಡಿತ್ತು. 48ರ ಹರೆಯದ ದ್ರಾವಿಡ್, 164 ಟೆಸ್ಟ್ ಪಂದ್ಯಗಳಲ್ಲಿ 13288 ರನ್, 344 ಏಕದಿನ ಪಂದ್ಯಗಳಲ್ಲಿ 10889 ರನ್, 1 ಟಿ20ಐ ಪಂದ್ಯದಲ್ಲಿ 31 ರನ್ ಮತ್ತು 89 ಐಪಿಎಲ್ ಪಂದ್ಯಗಳಲ್ಲಿ 2174 ರನ್ ಗಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, October 26, 2021, 18:52 [IST]
Other articles published on Oct 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X