ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy: ದಾಖಲೆಯ 379 ರನ್ ಗಳಿಸಿದ ನಂತರ ಪೃಥ್ವಿ ಶಾ ಬಗ್ಗೆ ಜಯ್ ಶಾ ಹೇಳಿದ್ದೇನು?

Ranji Trophy 2022: BCCI Secretary Jay Shah Reaction About Prithvi Shaws 379 Runs in Ranji Trophy

2022-23ನೇ ಸಾಲಿನ ರಣಜಿ ಟ್ರೋಫಿ ಐದನೇ ಸುತ್ತಿನ ಪಂದ್ಯದಲ್ಲಿ ಬುಧವಾರ ಅಸ್ಸಾಂ ವಿರುದ್ಧ ಮುಂಬೈ ತಂಡದ ಬ್ಯಾಟರ್ ಪೃಥ್ವಿ ಶಾ ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಣಜಿ ಟ್ರೋಫಿಯಲ್ಲಿ 400 ರನ್ ಗಳಿಸಿದ ಏಕೈಕ ಭಾರತೀಯ ಕ್ರಿಕೆಟಿಗನಾಗಲು ಕೇವಲ 21 ರನ್‌ಗಳಿಂದ ಹಿಂದೆ ಬಿದ್ದರು. ಅಸ್ಸಾಂ ವಿರುದ್ಧದ ರಣಜಿ ಟ್ರೋಫಿ ಪಂದ್ಯದ 2ನೇ ದಿನದಂದು ಪೃಥ್ವಿ ಶಾ 379 ರನ್ ಗಳಿಸಿ ಔಟಾಗುವ ಮೊದಲು, ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ 377 ರನ್ ದಾಖಲೆ ಮುರಿದು, ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದರು.

ಅಫ್ಘಾನಿಸ್ತಾನ ವಿರುದ್ಧದ ODI ಸರಣಿಯಿಂದ ಹಿಂದೆ ಸರಿದು 30 ಅಂಕ ಕಳೆದುಕೊಂಡ ಆಸೀಸ್; ಕಾರಣ?ಅಫ್ಘಾನಿಸ್ತಾನ ವಿರುದ್ಧದ ODI ಸರಣಿಯಿಂದ ಹಿಂದೆ ಸರಿದು 30 ಅಂಕ ಕಳೆದುಕೊಂಡ ಆಸೀಸ್; ಕಾರಣ?

ಬುಧವಾರ ಅಸ್ಸಾಂ ವಿರುದ್ಧ ಮುಂಬೈ ಬ್ಯಾಟರ್ ದಾಖಲೆಯ 379 ರನ್ ಗಳಿಸಿದ್ದಕ್ಕಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪೃಥ್ವಿ ಶಾ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಎರಡನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಪೃಥ್ವಿ ಶಾ

ಎರಡನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಪೃಥ್ವಿ ಶಾ

ಕೇವಲ 383 ಎಸೆತಗಳಲ್ಲಿ ಎರಡನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಪೃಥ್ವಿ ಶಾ, ಅಸ್ಸಾಂ ವಿರುದ್ಧ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. ಅವರ ಇನ್ನಿಂಗ್ಸ್‌ನಲ್ಲಿ 49 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡಿದ್ದವು.

23 ವರ್ಷದ ಆಟಗಾರ ಪೃಥ್ವಿ ಶಾ ಅವರ ಸಾಧನೆಯನ್ನು ಹಲವರು ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದಾರೆ. ಇದೇ ವೇಳೆ ಜಯ್ ಶಾ ಅವರು ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಮುಂಬೈ ತಂಡದ ಆಟಗಾರನನ್ನು ಹೊಗಳಿದರು.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪೃಥ್ವಿ ಶಾರನ್ನು ಹೊಗಳಿ ಟ್ವಿಟ್ಟರ್‌ನಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಹಾಕಿದ್ದು, ಇದೊಂದು ಅಸಾಧಾರಣ ಇನ್ನಿಂಗ್ಸ್ ಎಂದು ಜಯ್ ಶಾ ಕರೆದಿದ್ದಾರೆ. ಮುಂಬೈ ಯುವ ಬ್ಯಾಟರ್‌ನನ್ನು ಅಭಿನಂದಿಸಿದ ಅವರು, ಪೃಥ್ವಿ ಶಾ ಅಗಾಧ ಸಾಮರ್ಥ್ಯದ ಆಟಗಾರ, ಅವರ ಪ್ರಯತ್ನದ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.

ಪೃಥ್ವಿ ಶಾ ಅಪಾರ ಸಾಮರ್ಥ್ಯ ಹೊಂದಿರುವ ಪ್ರತಿಭೆ

"ದಾಖಲೆ ಪುಸ್ತಕಕ್ಕೆ ಮತ್ತೊಂದು ಪ್ರವೇಶ! ಪೃಥ್ವಿ ಶಾ ಎಂತಹ ಅಸಾಧಾರಣ ಇನ್ನಿಂಗ್ಸ್ ಆಡಿದು. ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ರಣಜಿ ಕ್ರಿಕೆಟ್ ಸ್ಕೋರ್ ಮಾಡಿದ್ದಕ್ಕಾಗಿ ಅಭಿನಂದನೆಗಳು. ಅಪಾರ ಸಾಮರ್ಥ್ಯ ಹೊಂದಿರುವ ಪ್ರತಿಭೆ. ಅವರ ಪ್ರಯತ್ನದ ಬಗ್ಗೆ ನಾವು ಹೆಮ್ಮೆಪಡುತ್ತೇವೆ," ಎಂದು ಜಯ್ ಶಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಸಂದೇಶಕ್ಕೆ ಧನ್ಯವಾದ ಅರ್ಪಿಸಿದ ಪೃಥ್ವಿ ಶಾ, ಪ್ರೋತ್ಸಾಹದ ಮಾತುಗಳು ಬಹಳಷ್ಟು ಅರ್ಥವಾಗಿವೆ ಎಂದು ಹೇಳಿದರು. ತಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜಯ್ ಶಾ ಅವರ ಸಂದೇಶಕ್ಕೆ ಧನ್ಯವಾದ ಅರ್ಪಿಸಿದ ಪೃಥ್ವಿ ಶಾ

"ತುಂಬಾ ಧನ್ಯವಾದಗಳು ಜಯ್ ಶಾ ಸರ್. ನಿಮ್ಮ ಪ್ರೋತ್ಸಾಹದ ಮಾತುಗಳು ಬಹಳಷ್ಟು ಅರ್ಥವನ್ನು ನೀಡುತ್ತವೆ. ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರುತ್ತೇನೆ," ಎಂದು ಪೃಥ್ವಿ ಶಾ ಟ್ವಿಟ್ಟರ್‌ನಲ್ಲಿ ಉತ್ತರಿಸಿದ್ದಾರೆ.

ಬುಧವಾರದಂದು ತಾನು 400 ರನ್ ಮಾಡಬಹುದಿತ್ತು ಮತ್ತು ಆ ದಿನದಂದು ಅವರು ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೆ ಎಂದು ಪೃಥ್ವಿ ಶಾ ತಿಳಿಸಿದರು.

"ನನ್ನ ಬ್ಯಾಟಿಂಗ್ ಪ್ರದರ್ಶನ ನೋಡಿ ನಿಜವಾಗಿಯೂ ಸಂತೋಷವಾಗಿದೆ. ನಾನು 400 ರನ್‌ಗಳಿಗೆ ಪರಿವರ್ತಿಸಬಹುದಿತ್ತು. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೆ ಎಂದು ಭಾವಿಸುತ್ತೇನೆ. ಆದರೆ ದೊಡ್ಡ ರನ್‌ಗಳು ಬರುತ್ತಿಲ್ಲವಾದ್ದರಿಂದ ಅದು ಕೆಟ್ಟ ಸಮಯದಲ್ಲಿ ಔಟಾದೆ. ನಾನು ಮಧ್ಯದಲ್ಲಿ ನನಗೆ ಹೆಚ್ಚಿನ ಸಮಯವನ್ನು ನೀಡಬೇಕೆಂದು ನಾನು ಯೋಚಿಸಿದೆ, ತಾಳ್ಮೆಯನ್ನು ಪ್ರದರ್ಶಿಸಿದೆ," ಎಂದು ಪೃಥ್ವಿ ಶಾ ತಮ್ಮ ಬ್ಯಾಟಿಂಗ್ ಇನ್ನಿಂಗ್ಸ್ ಬಗ್ಗೆ ವಿವರಿಸಿದರು.

Story first published: Thursday, January 12, 2023, 15:52 [IST]
Other articles published on Jan 12, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X