ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy: ಕರ್ನಾಟಕದ ವಿರುದ್ಧ ಕುಸಿದ ಕೇರಳಕ್ಕೆ ಮಾಜಿ ಆರ್​​ಸಿಬಿ ಆಟಗಾರನ ಶತಕದ ಆಸರೆ

Ranji Trophy Kar vs Ker: Sachin Baby Century Helps Kerala To Score Good Total on the First Day

ಕರ್ನಾಟಕ ವಿರುದ್ಧದ ರಣಜಿ ಟೆಸ್ಟ್‌ನಲ್ಲಿ ಮೊದಲನೇ ದಿನ ಆರಂಭಿಕ ಕುಸಿತ ಕಂಡ ಕೇರಳ ನಂತರ ಸುಧಾರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕುಸಿದ ಕೇರಳಕ್ಕೆ ಮಾಜಿ ಆರ್​​ಸಿಬಿ ಆಟಗಾರ ಸಚಿನ್ ಬೇಬಿ ಆಸರೆಯಾದರು.

ತಿರುವನಂತಪುರಂನ ಸೈಂಟ್ ಕ್ಸೇವಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೇರಳ ಮೊದಲ ದಿನದಾಟದ ಅಂತ್ಯಕ್ಕೆ ಗೌರವಾನ್ವಿತ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನದಾಟದ ಅಂತ್ಯಕ್ಕೆ ಕೇರಳ 6 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿದೆ.

ICC Test Ranking: ಐಸಿಸಿ ದೊಡ್ಡ ಎಡವಟ್ಟು: ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದ ಟೀಂ ಇಂಡಿಯಾICC Test Ranking: ಐಸಿಸಿ ದೊಡ್ಡ ಎಡವಟ್ಟು: ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದ ಟೀಂ ಇಂಡಿಯಾ

ಟಾಸ್ ಗೆದ್ದು ಕೇರಳ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡತು. ಆರಂಭದಲ್ಲೇ ಕರ್ನಾಟಕದ ವೇಗದ ಬೌಲಿಂಗ್ ದಾಳಿಗೆ ನಲುಗಿದ ಕೇರಳ, ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು. 6 ರನ್‌ ಗಳಿಸುವಷ್ಟರಲ್ಲಿ ಅದು 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ವಾಸುಕಿ ಕೌಶಿಕ್, ವಿಜಯ್ ಕುಮಾರ್ ವೈಶಾಕ್ ಅತ್ಯುತ್ತಮ ಬೌಲಿಂಗ್ ಸಂಘಟಿಸಿದರು. ಕೇರಳ ಆರಂಭಿಕ ಆಟಗಾರ ಪೊನ್ನನ್ ರಾಹುಲ್ ಶೂನ್ಯಕ್ಕೆ ಔಟಾದರೆ, ರೋಹನ್ 5 ರನ್ ಗಳಿಸಿ ಪೆವಿಲಿಯನ್ ಸೇರಿದರು, ರೋಹನ್ ಪ್ರೇಮ್ ಕೂಡ ಸೊನ್ನೆಗೆ ಔಟಾದರು.

ನಂತರ ಕ್ರೀಸ್‌ಗೆ ಬಂದ ಸಚಿನ್ ಬೇಬಿ ತಾಳ್ಮೆಯ ಇನ್ನಿಂಗ್ಸ್ ಆಡಿದರು. ಸಚಿನ್ ಬೇಬಿ ಮತ್ತು ಗೋವಿಂದ್ ವತ್ಸಲ್ ಜೋಡಿ 4ನೇ ವಿಕೆಟ್‌ಗೆ 120 ರನ್‌ ಗಳ ಜೊತೆಯಾಟ ಆಡಿದರು. ಗೋವಿಂದ್ ವತ್ಸಲ್ 46 ರನ್ ಗಳಿಸಿ ಅಮೂಲ್ಯ ಕಾಣಿಕೆ ನೀಡಿದರು.

Ranji Trophy Kar vs Ker: Sachin Baby Century Helps Kerala To Score Good Total on the First Day

ಸಚಿನ್ ಬೇಬಿ ಶತಕದ ಆಸರೆ

ವತ್ಸಲ್ ಗೋವಿಂದ್ ನಂತರ ಬಂದ ಸಲ್ಮಾನ್ ನಿಜಾರ್ ಶೂನ್ಯಕ್ಕೆ ಔಟಾದರು. ಅಕ್ಷಯ್ ಚಂದ್ರನ್ ಕೂಡ 17 ರನ್ ಗಳಿಸಿ ಔಟಾದ ನಂತರ ಮತ್ತೆ ಕೇರಳ ಕುಸಿಯುವ ಭೀತಿ ಇತ್ತು. ಆದರೆ, ಸಚಿನ್ ಬೇಬಿ ಜೊತೆಯಾದ ಜಲಜ್ ಸಕ್ಸೇನಾ ದಿನದ ಅಂತ್ಯದವರೆಗೂ ವಿಕೆಟ್ ಬೀಳದಂತೆ ನೋಡಿಕೊಂಡರು.

7ನೇ ವಿಕೆಟ್‌ಗೆ ಈ ಜೋಡಿ ಅಜೇಯ 50 ರನ್‌ಗಳ ಜೊತೆಯಾಟ ಆಡುವ ಮೂಲಕ ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಸಚಿನ್ ಬೇಬಿ 272 ಎಸೆತಗಳಲ್ಲಿ ಅಜೇಯ 116 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಜಲಜ್ ಸಕ್ಸೇನಾ ಅಜೇಯ 31 ರನ್ ಗಳಿಸಿದ್ದಾರೆ.

ವಾಸುಕಿ ಕೌಶಿಕ್ ಅತ್ಯುತ್ತಮ ಬೌಲಿಂಗ್

ಕರ್ನಾಟಕದ ಪರವಾಗಿ ವಾಸುಕಿ ಕೌಶಿಕ್ ಅತ್ಯುತ್ತಮ ಬೌಲಿಂಗ್ ಮಾಡಿದರು. ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ಕೇರಳ ತಂಡಕ್ಕೆ ಆಘಾತ ನೀಡಿದರು. ವಿಜಯ್ ಕುಮಾರ್ ಕೌಶಿಕ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

Story first published: Tuesday, January 17, 2023, 17:54 [IST]
Other articles published on Jan 17, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X