ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಸರಣಿಯಿಂದ ಜಡೇಜಾ ಔಟ್: ಟೆಸ್ಟ್ ತಂಡದಲ್ಲಿ ಸೂರ್ಯಕುಮಾರ್‌ಗೆ ಸ್ಥಾನ?

Ravindra Jadeja set to be ruled out of Bangladesh series, Suryakumar Yadav may receive test call up

ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಫಿಟ್‌ನೆಸ್ ಸಮಸ್ಯೆ ಮುಂದುವರಿದಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಆಯ್ಕೆಯಾದರು ಕೂಡ ಇದೀಗ ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಾಣದ ಕಾರಣ ಈ ಸರಣಿಯಿಂದ ಹೊರಗುಳಿವುದು ನಿಚ್ಚಳವಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಮಾತ್ರವೇ ಮಾಡಬೇಕಿದೆ.

ಕಳೆದ ಆಗಸ್ಟ್‌ನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ ಟೀಮ್ ಇಂಡಿಯಾ ಪರವಾಗಿ ಕೊನೆಯ ಬಾರಿಗೆ ಆಡಿದ್ದರು. ಈ ಟೂರ್ನಿಯಲ್ಲಿ ಅವಧಿಯಲ್ಲಿ ಗಾಯಗೊಂಡಿದ್ದ ಜಡ್ಡು ಬಳಿಕ ಏಷ್ಯಾ ಕಪ್ ಟೂರ್ನಿಯಿಂದ ಹೊರಬಿದ್ದಿದ್ದರು. ವಿಶ್ವಕಪ್ ಟೂರ್ನಿಯಿಂದಲೂ ತಪ್ಪಿಸಿಕೊಂಡಿದ್ದ ಆಲ್‌ರೌಂಡರ್ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಹೆಸರಿಸಲ್ಪಟ್ಟಿದ್ದರು. ಆದರೆ ಅವರು ಇನ್ನು ಕೂಡ ಆಡಲು ಸಮರ್ಥವಾಗಿಲ್ಲದ ಕಾರಣ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಹೊರಬೀಳಲಿದ್ದಾರೆ.

ವಿಭಿನ್ನ ಮಾದರಿಯಲ್ಲಿ ಮುಂದಿನ ಪುರುಷರ ಟಿ20 ವಿಶ್ವಕಪ್; ಅದರ ಸ್ವರೂಪ ಇಲ್ಲಿದೆವಿಭಿನ್ನ ಮಾದರಿಯಲ್ಲಿ ಮುಂದಿನ ಪುರುಷರ ಟಿ20 ವಿಶ್ವಕಪ್; ಅದರ ಸ್ವರೂಪ ಇಲ್ಲಿದೆ

ರವೀಂದ್ರ ಜಡೇಜಾ ಸದ್ಯ ಬೆಂಗಳೂರಿನ ಎ್‌ಸಿಎನಲ್ಲಿದ್ದು ರಿಹ್ಯಾಬ್‌ನಲ್ಲಿ ಭಾಗಿಯಾಗಿದ್ದಾರೆ. ಸಂಪೂರ್ಣವಾಗಿ ಫಿಟ್ ಆಗಿಲ್ಲವಾದ್ದರಿಂದಾಗಿ ಜಡೇಜಾ ಈ ವರ್ಷ ಕ್ರಿಕೆಟ್ ಮೈದಾನಕ್ಕೆ ಇಳಿಯುವುದು ಅಸಾಧ್ಯವಾಗಿದ್ದು ಮುಂದಿನ ವರ್ಷವೇ ಜಡೇಜಾ ಕಣಕ್ಕಿಳಿಯುವ ಸಾಧ್ಯತೆಯಿದೆ.

ಟೆಸ್ಟ್ ಕ್ಯಾಪ್ ತೊಡಲಿದ್ದಾರಾ ಸೂರ್ಯಕುಮಾರ್ ಯಾದವ್: ಇನ್ನು ಟಿ20 ಮಾದರಿಯಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿರುವ ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡಕ್ಕೆ ರವೀಂದ್ರ ಜಡೇಜಾಗೆ ಬದಲಿಯಾಗಿ ಆಯ್ಕೆಯಾಗುವ ಸಾಧ್ಯೆತೆಯಿದೆ ಎನ್ನಲಾಗಿದೆ. ಸೂರ್ಯಕುಮಾರ್ ಟೆಸ್ಟ್ ಮಾದರಿಯಲ್ಲಿಯೂ ಕಣಕ್ಕಿಳಿಯಲು ಸೂಕ್ತವಾದ ಆಟಗಾರ ಎಂಬ ಹಿನ್ನೆಲೆಯಲ್ಲಿ ಮಾಜಿ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಅನೇಕರು ಸೂರ್ಯಕುಮಾರ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಸ್ವತಃ ಸೂರ್ಯಕುಮಾರ್ ಯಾದವ್ ಕೂಡ ಟೆಸ್ಟ್ ಮಾದರಿಯಲ್ಲಿ ಆಡಲು ಉತ್ಸುಕತೆಯನ್ನು ವ್ಯಕ್ತಪಡಿಸಿದ್ದರು. ಇದೀಗ ಈ ಕನಸು ನನಸಾಗುವ ಸಾಧ್ಯತೆಯಿದೆ.

ನ್ಯೂಜಿಲೆಂಡ್ ಪ್ರವಾಸದ ಬಳಿಕ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಮೊದಲಿಗೆ ನಡೆಯಲಿದ್ದು ಅದಾದ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆಯಾಗಲಿದೆ. ಈ ಸರಣಿಗೆ ರವೀಂದ್ರ ಜಡೇಜಾ ಅವರನ್ನು ಹೆಸರಿಸಲಾಗಿತ್ತು. ಇದೀಗ ಅವರು ಈ ಸರಣಿಗೆ ಅಲಭ್ಯವಾಗಲಿರುವ ಕಾರಣ ಬದಲಿ ಆಟಗಾರನ ಆಯ್ಕೆಯನ್ನು ಮುಂದಿನವಾರ ಬಿಸಿಸಿಐ ಘೋಷಣೆ ಮಾಡುವ ಸಾಧ್ಯತೆಯಿದೆ.

IND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆIND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆ

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಯಶ್ ದಯಾಳ್

ಬಾಂಗ್ಲಾದೇಶ ಟೆಸ್ಟ್‌ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ*, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್

Story first published: Wednesday, November 23, 2022, 21:21 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X