ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವುದು ಪರಿಹಾರವಲ್ಲ: ವೀರೇಂದ್ರ ಸೆಹ್ವಾಗ್

kohli

2020 ರ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದ ಬಳಿಕ ನಾಯಕ ವಿರಾಟ್ ಕೊಹ್ಲಿ ಭಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಸೇರಿದಂತೆ ಅನೇಕರು ಆರ್‌ಸಿಬಿಯನ್ನು ಮುನ್ನಡೆಸಲು ಕೊಹ್ಲಿ ಸರಿಯಾದ ವ್ಯಕ್ತಿಯೇ ಎಂದು ಪ್ರಶ್ನಿಸಿದ್ದಾರೆ.

ಆರ್‌ಸಿಬಿ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವುದನ್ನು ಎದುರು ನೋಡಬೇಕಾದರೆ ಕೆಲವೊಂದನ್ನು ಮೀರಿ ನಿರ್ಧಾರ ತೆಗೆದುಕೊಳ್ಳಬೇಕು. ಕೊಹ್ಲಿ ನಾಯಕತ್ವ ವಹಿಸಿ ಎಂಟು ವರ್ಷಗಳಾಗಿವೆ ಮತ್ತು ಆರ್‌ಸಿಬಿ ಮುಂದುವರಿಯುವ ಸಮಯ ಬಂದಿದೆ.

IPL 2021: RCB ಫ್ರಾಂಚೈಸಿ ಈ ಐವರನ್ನು ತಂಡದಿಂದ ಕೈ ಬಿಡಲು ಯೋಚಿಸುತ್ತಿದೆ!IPL 2021: RCB ಫ್ರಾಂಚೈಸಿ ಈ ಐವರನ್ನು ತಂಡದಿಂದ ಕೈ ಬಿಡಲು ಯೋಚಿಸುತ್ತಿದೆ!

ದೆಹಲಿ ಮೂಲದ ಮಾಜಿ ಬ್ಯಾಟ್ಸ್‌ಮನ್ಸ್ ವೀರೇಂದ್ರ ಸೆಹ್ವಾಗ್ ಪ್ರಕಾರ ಕೊಹ್ಲಿ ಒಬ್ಬ ಉತ್ತಮ ನಾಯಕನಾಗಿದ್ದು, ಅವನು ಅಸಮತೋಲಿತ ತಂಡದಿಂದ ನಿರಾಸೆಗೊಳ್ಳುತ್ತಿದ್ದಾನೆ ಮತ್ತು ಅವನ ಸ್ಥಾನದಿಂದ ತೆಗೆದುಹಾಕುವುದು ಎಲ್ಲದಕ್ಕೂ ಪರಿಹಾರವಲ್ಲ. ಹೀಗಾಗಿ ಫ್ರಾಂಚೈಸಿ ತಂಡದಲ್ಲಿ ಹೆಚ್ಚು ಗುಣಮಟ್ಟದ ಆಟಗಾರರನ್ನು ಕರೆತರಬೇಕಾಗಿದೆ ಎಂದಿದ್ದಾರೆ.

"ಒಬ್ಬ ನಾಯಕ ತನ್ನ ತಂಡದಷ್ಟೇ ಉತ್ತಮ. ವಿರಾಟ್ ಕೊಹ್ಲಿ ಭಾರತಕ್ಕೆ ನಾಯಕತ್ವ ವಹಿಸಿದಾಗ, ಅವರು ಫಲಿತಾಂಶಗಳನ್ನು ನೀಡಲು ಸಮರ್ಥರಾಗಿದ್ದಾರೆ. ಅವರು ಪಂದ್ಯಗಳನ್ನು ಗೆಲ್ಲುತ್ತಾರೆ. ಏಕದಿನ, ಟಿ 20 ಅಂತರಾಷ್ಟ್ರೀಯ ಪಂದ್ಯ, ಟೆಸ್ಟ್ ಹೀಗೆ ಗೆದ್ದಿದ್ದಾರೆ. ಆದರೆ ಅವರು ಆರ್‌ಸಿಬಿಗೆ ನಾಯಕರಾದಾಗ ಅವರ ತಂಡಕ್ಕೆ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ "ಎಂದು ಸೆಹ್ವಾಗ್ ಕ್ರಿಕ್‌ಬಝ್‌ಗೆ ತಿಳಿಸಿದರು.

"ನಾಯಕನಿಗೆ ಉತ್ತಮ ತಂಡ ಇರುವುದು ಬಹಳ ಮುಖ್ಯ. ಆದ್ದರಿಂದ, ಮ್ಯಾನೇಜ್ಮೆಂಟ್ ತಮ್ಮ ನಾಯಕನನ್ನು ಬದಲಿಸುವ ಬಗ್ಗೆ ಪ್ರಯತ್ನಿಸಬಾರದು ಮತ್ತು ಯೋಚಿಸಬಾರದು ಮತ್ತು ಅವರು ಈ ತಂಡವನ್ನು ಹೇಗೆ ಸುಧಾರಿಸಬಹುದು ಎಂದು ಯೋಚಿಸಬೇಕು ಎಂದು ವೀರೂ ಹೇಳಿದ್ದಾರೆ.

ಆರ್‌ಸಿಬಿ ತಮ್ಮ ಮೊದಲ 10 ಪಂದ್ಯಗಳಲ್ಲಿ ಏಳನ್ನು ಗೆದ್ದು, ಮುಂದಿನ ಸತತ ಐದು ಪಂದ್ಯಗಳನ್ನು ಕಳೆದುಕೊಳ್ಳುವ ಮೂಲಕ ಮುಗ್ಗರಿಸಿತು. ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನ ಹೊಂದಲು ಆರ್‌ಸಿಬಿಗೆ ಉತ್ತಮ ಓಪನರ್ ಜೊತೆಗೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಅಗತ್ಯವಿದೆ ಎಂದಿದ್ದಾರೆ.

Story first published: Saturday, November 7, 2020, 19:14 [IST]
Other articles published on Nov 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X