ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Rishabh Pant Surgery : ರಿಷಬ್‌ ಪಂತ್‌ಗೆ ಲಂಡನ್‌ನಲ್ಲಿ ನಡೆಯಲಿದೆ ಶಸ್ತ್ರಚಿಕಿತ್ಸೆ : 9 ತಿಂಗಳು ಕ್ರಿಕೆಟ್ ಆಡೋದೆ ಅನುಮಾನ!

Rishabh Pant Health: Rishabh Pant Set To Undergo Surgery In London For Knee And Ankle Ligament Tear

ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್‌ ಪಂತ್‌ರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಿಂದ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬುಧವಾರ ಅವರನ್ನು ಏರ್ ಲಿಫ್ಟ್‌ ಮಾಡುವ ಮೂಲಕ ಮುಂಬೈನ ಆಸ್ಪತ್ರೆಗೆ ಕರೆತರಲಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ರಿಷಬ್‌ ಪಂತ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ರಿಷಬ್ ಪಂತ್ ಮೊಣಕಾಲು ಮತ್ತು ಪಾದದ ಅಸ್ಥಿರಜ್ಜು ಮೇಲೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಆದರೆ, ಅವರನ್ನು ಯಾವಾಗ ಲಂಡನ್‌ಗೆ ಕರೆದೊಯ್ಯಲಾಗುತ್ತದೆ ಎಂದು ಇನ್ನೂ ತಿಳಿದುಬಂದಿಲ್ಲ. ಮುಂದಿನ 9 ತಿಂಗಳ ಕಾಲ ಅವರು ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ.

ರಿಷಬ್‌ ಪಂತ್ ಬಾಹ್ಯ ಗಾಯಗಳ ಬಗ್ಗೆ ಸದ್ಯ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಡಾಕ್ಟರ್ ದಿನ್ಶಾ ಪರ್ದಿವಾಲಾ ನೇತೃತತ್ವದಲ್ಲಿ ಅಸ್ಥಿರಜ್ಜು ಗಾಯದ ಮೇಲೆ ಪಂತ್‌ಗೆ ಶಸ್ತ್ರಚಿಕಿತ್ಸೆ ಮುಂದುವರಿಯುತ್ತದೆ.

ಟೀಮ್ ಇಂಡಿಯಾಗೆ ಮತ್ತೆ ಗಾಯದ ಆತಂಕ: 2ನೇ ಪಂದ್ಯಕ್ಕೆ ಸ್ಟಾರ್ ಆಟಗಾರ ಅನುಮಾನ!ಟೀಮ್ ಇಂಡಿಯಾಗೆ ಮತ್ತೆ ಗಾಯದ ಆತಂಕ: 2ನೇ ಪಂದ್ಯಕ್ಕೆ ಸ್ಟಾರ್ ಆಟಗಾರ ಅನುಮಾನ!

"ರಿಷಬ್ ಪಂತ್ ಮೇಲೆ ಹೆಚ್ಚಿನ ಗಮನ ಹರಿಸುವುದನ್ನು ತಪ್ಪಿಸಲು ಮುಂಬೈನ ಆಸ್ಪತ್ರೆಗೆ ಕರೆತರಲಾಗಿದೆ. ಸದ್ಯ ಪಂತ್‌ಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ. ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಜನರ ಓಡಾಟ ಇದ್ದ ಕಾರಣ ಅವರಿಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಮುಂಬೈನಲ್ಲಿ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕುಟುಂಬದ ಸದಸ್ಯರಿಗೆ ಮಾತ್ರ ಅವರನ್ನು ಭೇಟಿ ಮಾಡಲು ಅವಕಾಶ ಇದೆ. ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಂತೆ, ಅವರ ಅಸ್ಥಿರಜ್ಜು ಗಾಯದ ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಇನ್‌ಸೈಡ್ ಸ್ಪೋರ್ಟ್ಸ್‌ ವರದಿ ಮಾಡಿದೆ.

ಏಕದಿನ ವಿಶ್ವಕಪ್‌ಗೆ ಮರಳುವ ಸಾಧ್ಯತೆ

ಏಕದಿನ ವಿಶ್ವಕಪ್‌ಗೆ ಮರಳುವ ಸಾಧ್ಯತೆ

ಮುಂಬೈನಲ್ಲಿ ಡಾ. ಪಾರ್ದಿವಾಲ ನೇತೃತ್ವದಲ್ಲಿ ಪಂತ್‌ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಕೆಲವು ವರದಿಗಳು ಹೇಳಿವೆ. ಆದರೆ, ಅಕ್ಟೋಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್‌ ಆರಂಭವಾಗಲಿದ್ದು, ಆ ವೇಳೆಗೆ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ ಬಿಸಿಸಿಐ.

"ರಿಷಬ್ ಪಂತ್‌ಗೆ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿದ ನಂತರ, ಅವರನ್ನು ಹೆಚ್ಚಿನ ಶಸ್ತ್ರಚಿಕಿತ್ಸೆಗಾಗಿ ಲಂಡನ್‌ಗೆ ಕಳುಹಿಸಲಾಗುತ್ತದೆ. ಆತ ಚೇತರಿಸಿಕೊಳ್ಳಲು ಇನ್ನೂ ಎಷ್ಟು ಸಮಯ ಬೇಕು ಎಂದು ತಿಳಿದಿಲ್ಲ. ಮೊಣಕಾಲು ಮತ್ತು ಪಾದದ ಊತ ಕಡಿಮೆಯಾದ ನಂತರ ಡಾ. ಪಾರ್ದಿವಾಲಾ ಮತ್ತು ತಂಡ ಚಿಕಿತ್ಸೆಯ ಬಗ್ಗೆ ನಿರ್ಧಾರ ಮಾಡುತ್ತದೆ. ಸದ್ಯದ ಮಾಹಿತಿ ಪ್ರಕಾರ, ಆತನ ಮೊಣಕಾಲು ಮತ್ತು ಪಾದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಕನಿಷ್ಠ 9 ತಿಂಗಳು ಆತ ಕ್ರಿಕೆಟ್ ಆಡುವುದಿಲ್ಲ" ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಭಾರತ, ಪಾಕಿಸ್ತಾನ ಇವೆರಡೂ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳು ಅಲ್ಲ: ಸಂಗಕ್ಕರ ನೀಡಿದ ಸುಳಿವೇನು?

ಶಸ್ತ್ರಚಿಕಿತ್ಸೆ ನಂತರ ದೀರ್ಘಾವಧಿ ವಿಶ್ರಾಂತಿ ಅಗತ್ಯ

ಶಸ್ತ್ರಚಿಕಿತ್ಸೆ ನಂತರ ದೀರ್ಘಾವಧಿ ವಿಶ್ರಾಂತಿ ಅಗತ್ಯ

ಅಸ್ಥಿರಜ್ಜು ಗಾಯದ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಮೆದುಳು ಮತ್ತು ಬೆನ್ನುಹುರಿ ಎಂಆರ್‌ಐ ಮಾಡಲಾಗಿತ್ತು. ಆದರೆ ಮೊಣಕಾಲು ಮತ್ತು ಪಾದದ ಊತ ಮತ್ತು ನೋವಿನಿಂದ ಎಂಆರ್‌ಐ ಮಾಡಲು ಸಾಧ್ಯವಾಗಿಲ್ಲ. ಊತ ಕಡಿಮೆಯಾದಾಗ ಮಾತ್ರ ಗಾಯದ ತೀವ್ರತೆ ತಿಳಿಯಲಿದೆ. ಪ್ರಾಥಮಿಕ ಪರೀಕ್ಷೆಗಳ ವರದಿಗಳ ಪ್ರಕಾರ ಪಂತ್‌ರ ಪಾದ ಮತ್ತು ಮೊಣಕಾಲು ಎರಡಕ್ಕೂ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಮೊಣಕಾಲಿನ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಸಾಮಾನ್ಯವಾಗಿ 6 ತಿಂಗಳು ಬೇಕಾಗುತ್ತದೆ. ಪಂತ್ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ವೈದ್ಯರು ಗಾಯದ ಪ್ರಮಾಣ ನಿರ್ಧರಿಸಿದ ನಂತರ ಅವರು ಎಷ್ಟು ದಿನದಲ್ಲಿ ಸುಧಾರಿಸಿಕೊಳ್ಳುತ್ತಾರೆ ಎಂದು ತಿಳಿಯಲಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಅವರು 2023ರ ಏಷ್ಯಾಕಪ್‌ ವೇಳೆಗೆ ಫಿಟ್ ಆಗಲಿದ್ದಾರೆ.

ಪಂತ್ ಆರೋಗ್ಯದ ಬಗ್ಗೆ ಬಿಸಿಸಿಐ ಕಾಳಜಿ

ಪಂತ್ ಆರೋಗ್ಯದ ಬಗ್ಗೆ ಬಿಸಿಸಿಐ ಕಾಳಜಿ

"ರಿಷಬ್ ಪಂತ್ ಮತ್ತೆ ಯಾವಾಗ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂದು ಯೋಚಿಸುವುದಿಲ್ಲ. ಆತ ಮೊದಲು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ. ನಂತರ ಪುನರ್ವಸತಿಗಾಗಿ ಹಿಂದಿರುಗುತ್ತಾರೆ. ಇದು ಸುದೀರ್ಘ ಪ್ರಕ್ರಿಯೆ. ಆತ ಸಂಪೂರ್ಣ ಫಿಟ್ ಆದ ನಂತರ ಕ್ರಿಕೆಟ್‌ಗೆ ಮರಳುವ ಬಗ್ಗೆ ಚಿಂತಿಸುತ್ತೇವೆ. ಪಂತ್‌ಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ಬಿಸಿಸಿಐ ನೀಡಲಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಷಬ್ ಪಂತ್ ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿ, ಇಂಡಿಯನ್ ಪ್ರೀಮಿಯರ್ ಲೀಗ್‌, ಜುಲೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಕಳೆದುಕೊಳ್ಳುವುದು ಖಚಿತವಾಗಿದೆ.

Story first published: Thursday, January 5, 2023, 7:56 [IST]
Other articles published on Jan 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X