ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

4ನೇ ಬ್ಯಾಟಿಂಗ್ ಕ್ರಮಾಂಕದಿಂದ ರಿಷಬ್ ಪಂತ್ ಕೈಬಿಡಬೇಕು: ಲಕ್ಷ್ಮಣ್

Rishabh Pant should drop down from No. 4 to regain form: VVS Laxman

ನವದೆಹಲಿ, ಸೆಪ್ಟೆಂಬರ್ 23: ಆಕ್ರಮಣಕಾರಿಯಾಗಿ ಬ್ಯಾಟಿಂಗ್‌ ಮಾಡುವ ಗುಣ ಹೊಂದಿರುವ ರಿಷಬ್ ಪಂತ್‌ಗೆ 4ನೇ ಬ್ಯಾಟಿಂಗ್ ಕ್ರಮಾಂಕ ಕೆಲಸಕ್ಕೆ ಬರುತ್ತಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

ರಿಷಬ್ ಪಂತ್‌ ಬದಲಿಗೆ 3 ವಿಕೆಟ್ ಕೀಪರ್‌ಗಳ ಹೆಸರಿಸಿದ ಎಂಎಸ್‌ಕೆ ಪ್ರಸಾದ್!ರಿಷಬ್ ಪಂತ್‌ ಬದಲಿಗೆ 3 ವಿಕೆಟ್ ಕೀಪರ್‌ಗಳ ಹೆಸರಿಸಿದ ಎಂಎಸ್‌ಕೆ ಪ್ರಸಾದ್!

ಕೆಳ ಕ್ರಮಾಂಕದಲ್ಲಿ ಬಂದರೆ ಪಂತ್ ಫಾರ್ಮ್ ಮರಳಿ ಪಡೆಯಲು ಅನುಕೂಲವಾಗಲಿದೆ ಎಂದು ವಿವಿಎಸ್ ಸಲಹೆ ನೀಡಿದ್ದಾರೆ. ಪಂದ್ಯದ ವೇಳೆ ಪಂತ್‌ ಬ್ಯಾಟಿಂಗ್‌ ವೈಖರಿ ಇತ್ತೀಚೆಗಂತೂ ಹೆಚ್ಚು ಚರ್ಚೆಗೀಡಾಗುತ್ತಿದೆ. ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ಪಂತ್‌ ಅವರ ಶಾಟ್‌ ಸೆಲೆಕ್ಷನ್ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಭಾರತ vs ದ.ಆಫ್ರಿಕಾ: ಧೋನಿ ದಾಖಲೆ ಸರಿದೂಗಿಸಿದ ರೋಹಿತ್ ಶರ್ಮಾಭಾರತ vs ದ.ಆಫ್ರಿಕಾ: ಧೋನಿ ದಾಖಲೆ ಸರಿದೂಗಿಸಿದ ರೋಹಿತ್ ಶರ್ಮಾ

ಪಂತ್‌ ಶಾಟ್‌ ಸೆಲೆಕ್ಷನ್ ಎಲ್ಲಾ ಪಂದ್ಯಗಳಲ್ಲೂ ಸಫಲವಾಗುತ್ತಿಲ್ಲ, ಹೆಚ್ಚಿನ ಪಂದ್ಯಗಳಲ್ಲಿ ಪಂತ್‌ ಹಿನ್ನಡೆಗೆ ಶಾಟ್ ಸೆಲೆಕ್ಷನ್ನೇ ಕಾರಣವಾಗುತ್ತಿದೆ.

ಆಕ್ರಮಣಕಾರಿ ಆಟ

ಆಕ್ರಮಣಕಾರಿ ಆಟ

ಪಂತ್‌ ಬಗ್ಗೆ ಮಾತನಾಡುತ್ತ ವಿವಿಎಸ್‌ ಲಕ್ಷ್ಮಣ್, ರಿಷಬ್ ನನ್ನು ಕೆಳಕ್ರಮಾಂಕಕ್ಕೆ ತರುವುದೇ ಇದಕ್ಕೆ ಪರಿಹಾರ ಎಂದಿದ್ದಾರೆ. 'ಆಕ್ರಮಣಕಾರಿಯಾಗಿ ಬ್ಯಾಟಿಂಗ್‌ ಮಾಡುವ ಗುಣ ಪಂತ್ ಅವರದ್ದು. ದುರದೃಷ್ಟಕರ ಸಂಗತಿಯೆಂದರೆ ಪಂತ್‌ 4ನೇ ಕ್ರಮಾಂಕದಲ್ಲೇ ಇದ್ದರೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ,' ಎಂದು ಲಕ್ಷ್ಮಣ್ ವಿವರಿಸಿದರು.

ಒತ್ತಡ ನೀಡಬಾರದು

ಒತ್ತಡ ನೀಡಬಾರದು

21ರ ಹರೆಯದ ಪಂತ್‌ಗೆ ಹೆಚ್ಚಿನ ಒತ್ತಡ ನೀಡದಂತೆಯೂ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಕೇಳಿಕೊಂಡಿದ್ದಾರೆ. 'ಎಲ್ಲಾ ಆಟಗಾರರೂ ಇಂಥ ಘಟ್ಟ ದಾಟಿ ಹೋದವರೆ. ಪಂತ್‌ ತನ್ನ ಸ್ವಾಭಾವಿಕ ಆಟ ಆಡಲು ಅವಕಾಶ ನೀಡಬೇಕು. ಐಪಿಎಲ್‌ನಲ್ಲಿ ಪ್ರದರ್ಶನ ನೀಡಿದಂತೆ ಇಲ್ಲೂ ಒಮ್ಮಿಂದೊಮ್ಮೆಲೆ ಪ್ರದರ್ಶನ ನೀಡಲು ಸಾಧ್ಯವಿಲ್ಲ,' ಎಂದು ಲಕ್ಷ್ಮಣ್ ಹೇಳಿದ್ದಾರೆ.

4ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರರು

4ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರರು

4ನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಐಯ್ಯರ್ ಉತ್ತಮ ಆಯ್ಕೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ. '4ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶ್ರೇಯಸ್ ಐಯ್ಯರ್ ಅವರಂತ ಕೊಂಚ ಅನುಭವವಿರುವ ಆಟಗಾರರು ಆಡಬಲ್ಲರು,' ಎಂದು ವಿವಿಎಸ್ ಸಲಹೆಯಿತ್ತಿದ್ದಾರೆ.

ಹೆಚ್ಚು ನಿರೀಕ್ಷೆ, ಆಟ ಸಪ್ಪೆ ಸಪ್ಪೆ

ಹೆಚ್ಚು ನಿರೀಕ್ಷೆ, ಆಟ ಸಪ್ಪೆ ಸಪ್ಪೆ

ಹೆಚ್ಚಿನ ಕ್ರಿಕೆಟ್‌ ಅಭಿಮಾನಿಗಳಿಗೆ, ಪರಿಣಿತರಿಗೆ ಪಂತ್‌ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಆದರೆ ಪಂತ್ ನಿರೀಕ್ಷೆಗೆ ತಕ್ಕ ಆಟ ನೀಡುತ್ತಿಲ್ಲ. ವಿಶ್ವಕಪ್‌ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ 3ನೇ ಟಿ20ಯಲ್ಲಿ ಅರ್ಧ ಶತಕ (65 ರನ್, 42 ಎಸೆತ) ಬಾರಿಸಿದ್ದು ಬಿಟ್ಟರೆ ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯೂ ಸೇರಿ ಎಲ್ಲೂ ಪಂತ್ ಮಿಂಚಿಲ್ಲ.

Story first published: Monday, September 23, 2019, 17:00 [IST]
Other articles published on Sep 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X