ರಿಷಭ್ ಪಂತ್ vs ಊರ್ವಶಿ ರೌಟೆಲಾ: ಇಬ್ಬರ ಒಟ್ಟು ಆಸ್ತಿ ಮೊತ್ತವೆಷ್ಟು? ಯಾರು ಹೆಚ್ಚು ಸಿರಿವಂತರು?

ಪ್ರಸ್ತುತ ಭಾರತದಲ್ಲಿ ಅತಿಹೆಚ್ಚು ಚರ್ಚೆಗೀಡಾಗಿರುವ ಹಾಗೂ ವಿವಾದಕ್ಕೆ ಒಳಗಾಗಿರುವ ಕ್ರಿಕೆಟಿಗ ಯಾರೆಂದರೆ ಅದು ರಿಷಭ್ ಪಂತ್ ಎನ್ನಬಹುದು. ಹೌದು, ಬಾಲಿವುಡ್ ನಾಯಕಿ, ಕನ್ನಡದ ನಟ ದರ್ಶನ್ ಅಭಿನಯದ ಐರಾವತ ಚಿತ್ರದಲ್ಲಿ ಅಭಿನಯಿಸಿದ್ದ ಊರ್ವಶಿ ರೌಟೇಲಾ ವಿಚಾರವಾಗಿ ರಿಷಭ್ ಪಂತ್ ಸಾಕಷ್ಟು ಸುದ್ದಿಗೀಡಾಗಿದ್ದಾರೆ. ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟಿ ಊರ್ವಶಿ ರೌಟೆಲಾ ಆರ್‌ ಪಿ ಎಂಬ ಹೆಸರಿನ ವ್ಯಕ್ತಿ ನನ್ನನ್ನು ಭೇಟಿಯಾಗುವುದಕ್ಕೋಸ್ಕರ ಹೊಟೇಲ್ ಒಂದರಲ್ಲಿ ಸುಮಾರು ಹತ್ತು ಗಂಟೆಗಳು ಕಾದಿದ್ದ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

ಭಾರತ vs ಜಿಂಬಾಬ್ವೆ: ಧವನ್ ಬದಲು ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಿದ್ದು ತಪ್ಪು ಎನ್ನುತ್ತಿವೆ ಈ 3 ಅಂಶಗಳುಭಾರತ vs ಜಿಂಬಾಬ್ವೆ: ಧವನ್ ಬದಲು ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಿದ್ದು ತಪ್ಪು ಎನ್ನುತ್ತಿವೆ ಈ 3 ಅಂಶಗಳು

ಈ ವಿಷಯದ ಕುರಿತಾಗಿ ತಮ್ಮ ಇನ್ಸ್ಟಾಗ್ರಾಮ್ ಅಧಿಕೃತ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದ ರಿಷಭ್ ಪಂತ್ ಸ್ಟೋರಿಯಲ್ಲಿ ಜನ ಪ್ರಚಾರ ಹಾಗೂ ಚಾಲ್ತಿಯಲ್ಲಿರುವುದಕ್ಕೋಸ್ಕರ ಸಂದರ್ಶನಗಳಲ್ಲಿ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾರೆ ಎಂದು ಬರೆದುಕೊಳ್ಳುವುದರ ಮೂಲಕ ಊರ್ವಶಿ ರೌಟೆಲಾ ಸಂದರ್ಶನದಲ್ಲಿ ಹೇಳಿದ್ದೆಲ್ಲಾ ಸುಳ್ಳು ಎಂದು ತಿಳಿಸಿದ್ದರು. ಇನ್ನು ಸಂದರ್ಶನದಲ್ಲಿ ಊರ್ವಶಿ ರೌಟೆಲಾ ಆರ್‌ ಪಿ ಎಂದು ಬಳಸಿದ್ದರೇ ಹೊರತು ರಿಷಭ್ ಪಂತ್ ಎಂದು ನೇರವಾಗಿ ಹೇಳಿಕೆ ನೀಡಿರಲಿಲ್ಲ. ಇತ್ತ ರಿಷಭ್ ಪಂತ್ ಕೂಡ ಕೆಲವರು ಎಂದು ಬಳಸಿ ಸ್ಟೋರಿಯನ್ನು ಬರೆದುಕೊಂಡಿದ್ದರೋ ಹೊರತು ಎಲ್ಲಿಯೂ ಊರ್ವಶಿ ರೌಟೇಲಾ ಹೆಸರನ್ನು ಬಳಸಿರಲಿಲ್ಲ. ಹೀಗೆ ಈ ಇಬ್ಬರೂ ಸಹ ಪರಸ್ಪರ ಹೆಸರನ್ನು ಬಳಸದೇ ಇದ್ದರೂ ಆನ್‌ಲೈನ್ ವಾರ್ ಮಾಡಿದ್ದಂತೂ ನಿಜ.

ಕಳೆದ ಬಾರಿ ಏಕದಿನ ಮಾದರಿಯಲ್ಲಿ ನಡೆದಿದ್ದ ಏಷ್ಯಾಕಪ್‌ ಈ ಬಾರಿ ಟಿ20 ಮಾದರಿಯಲ್ಲಿ ನಡೆಯಲು ಕಾರಣವೇನು?ಕಳೆದ ಬಾರಿ ಏಕದಿನ ಮಾದರಿಯಲ್ಲಿ ನಡೆದಿದ್ದ ಏಷ್ಯಾಕಪ್‌ ಈ ಬಾರಿ ಟಿ20 ಮಾದರಿಯಲ್ಲಿ ನಡೆಯಲು ಕಾರಣವೇನು?

ಇನ್ನು ರಿಷಭ್ ಪಂತ್ ಸ್ಟೋರಿ ಪೋಸ್ಟ್ ಮಾಡಿದ ನಂತರ ಸುಮ್ಮನಾಗದ ಊರ್ವಶಿ ರೌಟೇಲಾ ರಿಷಭ್ ಪಂತ್ ಅವರನ್ನು ರಕ್ಷಾಬಂಧನದ ಪ್ರಯುಕ್ತ ಪಂತ್‌ಗೆ ಚಿಕ್ಕ ಸಹೋದರ ಎಂದು ಉಲ್ಲೇಖಿಸಿ ಶುಭಾಶಯವನ್ನು ಕೋರಿ, ಸುಮ್ಮನಿದ್ದೇನೆ ಎಂದು ಅಡ್ವಾಂಟೇಜ್ ತೆಗೆದುಕೊಳ್ಳಬೇಡ ಎಂದು ಟಾಂಗ್ ನೀಡಿದ್ದರು. ಹೀಗೆ ಸಿನಿಮಾ ರಂಗದ ಓರ್ವ ಟಾಪ್ ನಟಿ ಹಾಗೂ ಕ್ರಿಕೆಟ್ ಜಗತ್ತಿನ ಸ್ಟಾರ್ ಆಟಗಾರನ ನಡುವಿನ ಶೀತಲ ಸಮರ ಒಂದು ಹಂತದ ಅತಿರೇಖವನ್ನೇ ತಲುಪಿದ್ದು, ರಿಷಭ್ ಪಂತ್ ಊರ್ವಶಿ ರೌಟೇಲಾ ಹೇಳಿಕೆಗೆ ಮುಂದೆ ಯಾವ ರೀತಿಯ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಈ ಇಬ್ಬರೂ ಸಹ ಭಾರತದಲ್ಲಿ ಖ್ಯಾತಿಯನ್ನು ಪಡೆದಿರುವ ಸೆಲೆಬ್ರಿಟಿಗಳಾಗಿದ್ದು ಯಾರು ಎಷ್ಟು ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ ಹಾಗೂ ಈ ಪೈಕಿ ಯಾರು ಹೆಚ್ಚು ಸಿರಿವಂತರು ಎಂಬ ಮಾಹಿತಿ ಈ ಕೆಳಕಂಡಂತಿದೆ.

ಊರ್ವಶಿ ರೌಟೇಲಾ ಆಸ್ತಿ ಮೊತ್ತ

ಊರ್ವಶಿ ರೌಟೇಲಾ ಆಸ್ತಿ ಮೊತ್ತ

ಊರ್ವಶಿ ರೌಟೆಲಾ ಎರಡು ಬಾರಿ ಮಿಸ್ ಯೂನಿರ್ವಸ್ ಆಗಿದ್ದು, ಒಟ್ಟು 36 ಕೋಟಿ ಆಸ್ತಿ ಮೊತ್ತವನ್ನು ತನ್ನ ಹೆಸರಿನಲ್ಲಿ ಹೊಂದಿದ್ದಾರೆ ಎಂದು ಹಲವಾರು ಮೂಲಗಳು ವರದಿ ಮಾಡಿವೆ. ಒಟ್ಟಾರೆ ಹನ್ನೊಂದು ಚಿತ್ರಗಳಲ್ಲಿ ಅಭಿನಯಿಸಿರುವ ಇನ್ನೂ ಸಹ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಿಟ್ ಚಿತ್ರವನ್ನು ಕಂಡಿಲ್ಲ ಎನ್ನಬಹುದು. ಇನ್ನು ಒಳ್ಳೆಯ ಅಂಶಗಳನ್ನೊಳಗೊಂಡ ಗಟ್ಟಿ ಚಿತ್ರಕತೆಯಿರುವ ಸಿನಿಮಾದಲ್ಲಿಯೂ ಸಹ ಊರ್ವಶಿ ರೌಟೆಲಾ ಇನ್ನೂ ಸಹ ಅಭಿನಯಿಸಿಲ್ಲ ಎನ್ನಬಹುದು.

ರಿಷಭ್ ಪಂತ್

ರಿಷಭ್ ಪಂತ್

ಇನ್ನು ರಿಷಭ್ ಪಂತ್ ಪ್ರಸ್ತುತ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರಲ್ಲಿ ಓರ್ವನಾಗಿದ್ದು ಒಟ್ಟು 63 ಕೋಟಿ ಆಸ್ತಿಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ ಎಂದು ಹಲವಾರು ಮೂಲಗಳು ವರದಿ ಮಾಡಿವೆ. ಈ ಮೂಲಕ ರಿಷಭ್ ಪಂತ್ ಊರ್ವಶಿ ರೌಟೇಲಾಗಿಂತ ದುಪ್ಪಟ್ಟು ಆಸ್ತಿಯನ್ನು ಹೊಂದಿ ಸಿರಿವಂತ ಎನಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಯಾರಿಗೆ ಹೆಚ್ಚು ಅನುಯಾಯಿಗಳು

ಸಾಮಾಜಿಕ ಜಾಲತಾಣದಲ್ಲಿ ಯಾರಿಗೆ ಹೆಚ್ಚು ಅನುಯಾಯಿಗಳು

ಇನ್ನು ಸಾಮಾಜಿಕ ಜಾಲತಾಣದಲ್ಲಿ ಊರ್ವಶಿ ರೌಟೇಲಾ ಸದ್ಯ ಸಾಮಾಜಿಕ ಜಾಲತಾಣದ ವೇದಿಕೆಯಾದ ಇನ್ಸ್ಟಾಗ್ರಾಮ್‌ನಲ್ಲಿ 53.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ರಿಷಭ್ ಪಂತ್ 6.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ರಿಷಭ್ ಪಂತ್‌ಗಿಂತ ಊರ್ವಶಿ ರೌಟೇಲಾ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಆದರೆ ಆಫ್‌ಲೈನ್ ವಿಚಾರಕ್ಕೆ ಬಂದರೆ ನಟಿ ಊರ್ವಶಿ ರೌಟೆಲಾಗಿಂತ ರಿಷಭ್ ಪಂತ್ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು.

For Quick Alerts
ALLOW NOTIFICATIONS
For Daily Alerts
Read more about: rishabh pant mykhel original
Story first published: Sunday, August 14, 2022, 17:28 [IST]
Other articles published on Aug 14, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X