ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ಸೆಹ್ವಾಗ್ ಸ್ಫೋಟಕ ಅರ್ಧ ಶತಕ

Road Safety World Series 2021: Virender Sehwag slams half century

ರಾಯ್‌ಪುರ್‌: ಛತ್ತೀಸ್‌ಗಢದ ರಾಯ್‌ಪುರ್‌ನಲ್ಲಿರುವ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ರೋಡ್ ಸ್ಟೇಫ್ಟಿ ವರ್ಲ್ಡ್ ಸೀರೀಸ್ 5ನೇ ಪಂದ್ಯದಲ್ಲಿ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ಬಾಂಗ್ಲಾದೇಶ್ ಲೆಜೆಂಡ್ಸ್‌ ವಿರುದ್ಧ ಸ್ಫೋಟಕ ಅರ್ಧ ಶತಕ ಬಾರಿಸಿದ್ದಾರೆ.

ಸ್ಫೋಟಕ ಸಿಕ್ಸ್‌ಗಳ ಚಚ್ಚಿ ನೂತನ ದಾಖಲೆ ಬರೆದ ಆ್ಯರನ್ ಫಿಂಚ್!ಸ್ಫೋಟಕ ಸಿಕ್ಸ್‌ಗಳ ಚಚ್ಚಿ ನೂತನ ದಾಖಲೆ ಬರೆದ ಆ್ಯರನ್ ಫಿಂಚ್!

ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಬಾಂಗ್ಲಾದೇಶ್ ಲೆಜೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್‌ ತಂಡ 10 ವಿಕೆಟ್ ಸುಲಭ ಜಯ ಗಳಿಸಿದೆ. ಇದು ಟೂರ್ನಿಯಲ್ಲಿ ಭಾರತಕ್ಕೆ ಲಭಿಸುತ್ತಿರುವ ಎರಡನೇ ಗೆಲುವು.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಬಾಂಗ್ಲಾದೇಶ್ ಲೆಜೆಂಡ್ಸ್‌ ನಿಂದ ನಿಝಾಮುದ್ದೀನ್ 49, ಜಾವೆದ್ ಓಮರ್ 12, ರಜಿನ್ ಸಲೇಹ್ 12 ರನ್ ಬಾರಿಸಿದ್ದೇ ಹೆಚ್ಚು. ಬಾಂಗ್ಲಾದೇಶ 19.4ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 109 ರನ್ ಬಾರಿಸಿತ್ತು.

ಎಂಎಸ್ ಧೋನಿ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿಎಂಎಸ್ ಧೋನಿ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ

ಗುರಿ ಬೆನ್ನಟ್ಟಿದ ಇಂಡಿಯಾ ಲೆಜೆಂಡ್ಸ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ 80 (35 ಎಸೆತ), ನಾಯಕ ಸಚಿನ್ ತೆಂಡೂಲ್ಕರ್ 33 (26) ರನ್‌ ಸೇರಿಸಿದರು. ಭಾರತ 10.1 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 114 ರನ್ ಬಾರಿಸಿತು. ಭಾರತ ಪರ ವಿನಯ್ ಕುಮಾರ್ 2, ಪ್ರಗ್ಯಾನ್ ಓಜಾ 2, ಯುವರಾಜ್ ಸಿಂಗ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಐಪಿಎಲ್‌ಗೆ ಮುಂಚಿತವಾಗಿ ನಡೆಯುತ್ತಿರುವ ಈ ಟೂರ್ನಿ ಕ್ರಿಕೆಟ್ ಪ್ರಿಯರನ್ನು ಆಕರ್ಷಿಸುತ್ತಿದೆ.

Story first published: Friday, March 5, 2021, 21:49 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X