ಭಾರತ vs ಆಸ್ಟ್ರೇಲಿಯಾ: ಅನಗತ್ಯ ದಾಖಲೆ ಬರೆದ ರೋಹಿತ್ ಶರ್ಮಾ!

ನಾಗ್ಪುರ, ಮಾರ್ಚ್ 5: ಕ್ರಿಕೆಟ್ ರಂಗದಲ್ಲಿ ದಾಖಲೆ ಬರೆಯಲು ಆಟಗಾರರು ಹೊಯ್ದಾಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ನಿರಾಯಾಸವಾಗಿ ಆಟಗಾರರಿಂದ ದಾಖಲೆಗಳಾಗುವುದಿದೆ; ಆದರೆ ಅದು ಸಕಾರಾತ್ಮಕ ದಾಖಲೆಯಾಗಿರಬಹುದು ಅಥವಾ ನಕಾರಾತ್ಮಕ ದಾಖಲೆಯೂ ಆಗಿಬಹುದು. ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಅನಗತ್ಯ ದಾಖಲೆಗಾಗಿ ಗಮನ ಸೆಳೆದಿದ್ದಾರೆ.
ಆಟಗಾರ ಪಂದ್ಯವೊಂದರಲ್ಲಿ ಆಡಲಿ ಆಡದಿರಲಿ, ಕೆಲವೊಂದು ಸಾರಿ ದಾಖಲೆಗಳಾಗುತ್ತವೆ. ಆಟಗಾರ ಆಡಿದ ಒಟ್ಟು ಪಂದ್ಯ, ಹಿಂದಿನ ರನ್‌ಗೆ ಮತ್ತೊಂದು ರನ್ ಸೇರ್ಪಡೆ ಹೀಗೆ ನಿರಾಯಾಸವಾಗಿ ಸಕಾರಾತ್ಮಕ ದಾಖಲೆಗಳಾಗುತ್ತವೆ. ಅದೇ ಬೇಗನೆ ಔಟಾದರೆ, ಕ್ಯಾಚ್ ಬಿಟ್ಟರೆ, ಹೆಚ್ಚು ರನ್ ಕೊಟ್ಟರೆ ನಕಾರಾತ್ಮಕ ದಾಖಲೆಗಳಾಗುತ್ತವೆ.
ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 5) ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಡಕ್ ಔಟ್ (ಸೊನ್ನೆಗೆ ಔಟ್) ಆಗುವ ಮೂಲಕ ರೋಹಿತ್ ದಾಖಲೆಗೆ ಕಾರಣರಾಗಿದ್ದಾರೆ. ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿದ ಶರ್ಮಾ ಸೊನ್ನೆ ರನ್‌ಗೆ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ನೀಡಿದ್ದರು.
ತವರು ನೆಲದಲ್ಲಿ ನಡೆದ ಏಕದಿನದಲ್ಲಿ ರೋಹಿತ್ ಯಾವತ್ತಿಗೂ ಸೊನ್ನೆಗೆ ಔಟ್ ಆಗಿರಲಿಲ್ಲ. ಆದರೆ ವೃತ್ತಿ ಜೀವನದಲ್ಲಿ ಇದೇ ಮೊದಲಬಾರಿಗೆ ಭಾರತದಲ್ಲಿ ಶರ್ಮಾ ಸೊನ್ನೆಗೆ ವಿಕೆಟ್ ಒಪ್ಪಿಸಿ ಹೀಗೆ ನಿರಾಯಾಸವಾಗಿ ನಕಾರಾತ್ಮಕ ದಾಖಲೆಗೆ ಕಾರಣರಾದರು. ಪಂದ್ಯದಲ್ಲಿ ರೋಹಿತ್, ಕಮಿನ್ಸ್ ಓವರ್‌ನಲ್ಲಿ ಆದಂ ಜಂಪಾಗೆ ಕ್ಯಾಚಿತ್ತು ನಿರ್ಗಮಿಸಿದರು. ಇದೇ ಪಂದ್ಯದಲ್ಲಿ ಎಂಎಸ್ ಧೋನಿ ಕೂಡ ಸೊನ್ನೆಗೆ ಔಟ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications