ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ನಾಯಕತ್ವದ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದೇನು?

Australian cricket legend Ricky Ponting rates Rohit Sharma | RICKY PONTING | ROHIT SHARMA
Rohit Sharma’s IPL Captaincy Record Talks For Itself, Admits Ricky Ponting

ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತುಯಲ್ಲಿ ಅನೇಕ ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಮಾತ್ರವಲ್ಲ ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ಸರಣಿಗಳನ್ನು ಟೀಮ್ ಇಂಡಿಯಾ ಮುಡಿಗೇರಿಸಿಕೊಂಡಿದೆ. ಇದರ ಜೊತೆಗೆ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅದ್ಭುತ ಆಟದ ಜೊತೆಗೆ ನಾಯಕತ್ವದಲ್ಲೂ ಮಿಂಚಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ರಿಕಿ ಪಾಂಟಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ಐಪಿಎಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಡೆಲ್ಲಿ ತಂಡದ ಹೆಡ್‌ ಕೋಚ್‌ ಆಗಿರುವ ರಿಕಿ ಪಾಂಟಿಂಗ್, ರೋಹಿತ್ ಶರ್ಮಾ ನಾಯಕತ್ವ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಅಭಿಮಾನಿಗಳ ಜೊತೆ ಟ್ವಿಟರ್‌ನಲ್ಲಿ ಸಂವಾದ ನಡೆಸಿದ ರಿಕಿ ಪಾಂಟಿಂಗ್ ಈ ಸಂದರ್ಭದಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದರು.

ಇಂಡೋ-ಆಸಿಸ್ ಕದನ: ಆಡುವ ಬಳಗ, ಫಲಿತಾಂಶದ ನಿರೀಕ್ಷೆ, ಹವಾಮಾನ ಮತ್ತು ಪಿಚ್ ರಿಪೋರ್ಟ್ಇಂಡೋ-ಆಸಿಸ್ ಕದನ: ಆಡುವ ಬಳಗ, ಫಲಿತಾಂಶದ ನಿರೀಕ್ಷೆ, ಹವಾಮಾನ ಮತ್ತು ಪಿಚ್ ರಿಪೋರ್ಟ್

ಸಂವಾದದ ಸಂದರ್ಭದಲ್ಲಿ ರಿಕಿ ಪಾಂಟಿಂಗ್‌ಗೆ ಐಪಿಎಲ್‌ಗೆ ಸಂಬಂಧಿಸಿದ ಪ್ರಶ್ನೆಗಳು ಎದುರಾದವು. ಅದರಲ್ಲಿ ಪ್ರಮುಖವಾಗಿ ರೋಹಿತ್ ಶರ್ಮಾ ನಾಯಕತ್ವದ ವಿಚಾರವಾಗಿ ಪ್ರಶ್ನೆಯನ್ನು ಅಭಿಮಾನಿಯೊಬ್ಬರು ಕೇಳಿದ್ದರು. ಇದಕ್ಕೆ ರಿಕಿ ಪಾಂಟಿಂಗ್ ಅದ್ಭುತವಾಗಿ ಉತ್ತರವನ್ನು ನೀಡಿದ್ದಾರೆ. ರೋಹಿತ್ ಶರ್ಮಾ ಅವರ ಆಟ ಹಾಗೂ ನಾಯಕತ್ವದ ಅಸಾಧಾರಣವಾದದ್ದು. ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಅವರ ದಾಖಲೆಯೇ ಎಲ್ಲವನ್ನೂ ತಿಳಿಸುತ್ತದೆ ಎಂದು ರಿಕಿ ಪಾಂಟಿಂಗ್ ಅಭಿಮಾನಿಯ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

ಔಟಾ, ನಾಟೌಟಾ?: ಕ್ರಿಕೆಟ್ ನಿಯಮವನ್ನೇ ಪ್ರಶ್ನಿಸೊ ವಿವಾದಾತ್ಮಕ ವೀಡಿಯೋ!ಔಟಾ, ನಾಟೌಟಾ?: ಕ್ರಿಕೆಟ್ ನಿಯಮವನ್ನೇ ಪ್ರಶ್ನಿಸೊ ವಿವಾದಾತ್ಮಕ ವೀಡಿಯೋ!

ಐಪಿಎಲ್‌ ಗೆ ಸಂಬಂಧಿಸಿದ ಇನ್ನೂ ಹಲವಾರು ಪ್ರಶ್ನೆಗಳನ್ನು ಅಭಿಮಾನಿಗಳು ರಿಕಿ ಪಾಂಟಿಂಗ್ ಬಳಿ ಕೇಳಿದ್ದಾರೆ. ಕೆಲವೊಂದು ಕಠಿಣ ಪ್ರಶ್ನೆಗಳು ಕೂಡ ಈ ಸಂದರ್ಭದಲ್ಲಿ ರಿಕಿ ಪಾಂಟಿಂಗ್‌ಗೆ ತೂರಿ ಬಂತು. ಪ್ರಮುಖವಾಗಿ ಐಪಿಎಲ್ ಫ್ರಾಂಚೈಸಿಗಳಿಗೆ ಕೋಚ್‌ ನೀಡುವಾಗ ಎದುರಾಗುವ ದೊಡ್ಡ್ ಸವಾಲುಗಳು ಯಾವುದು ಎಂಬ ಪ್ರಶ್ನೆ. ಇದಕ್ಕೆ ವಿದೇಶಿ ಆಟಗಾರರು ಐಪಿಎಲ್‌ಗೆ ಎಷ್ಟು ತಡವಾಗಿ ಆಗಮಿಸುತ್ತಾರೆ ಅದರ ಮೇಲೆ ಅವಲಂಬಿಸುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ತಂಡವನ್ನು ಕಟ್ಟುವುದು, ರಣತಂತ್ರ, ತಂಡದ ಸಂಸ್ಕೃತಿ ರೂಪಿಸುವುದು ಎಲ್ಲವೂ ಕಠಿಣವಾಗಿರುತ್ತದೆ ಎಂದು ಹೇಳಿದ್ದಾರೆ.

Story first published: Sunday, January 12, 2020, 18:35 [IST]
Other articles published on Jan 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X