ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Eng: ರೋಹಿತ್ ಶರ್ಮಾಗೆ ಕೋವಿಡ್; ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ನಾಯಕ ಯಾರು?

Ind vs Eng: Rohit Sharma Tested Positive For Covid-19; Who Is The Indian Captain Of The 5th Test Against England?

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ -19 ಸೋಂಕು ಕಾಣಿಸಿಕೊಂಡ ನಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಪ್ರಮುಖ ಕೊನೆಯ ಟೆಸ್ಟ್‌ನಲ್ಲಿ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುವರು ಯಾರು ಎಂಬ ಬಗ್ಗೆ ದೊಡ್ಡ ಪ್ರಶ್ನೆ ಉದ್ಭವಿಸಿದೆ.

ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಈ ಯುವ ಬೌಲರ್ ಇರಲೇಬೇಕು; ದಿಲೀಪ್ ವೆಂಗ್‌ಸರ್ಕರ್ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಈ ಯುವ ಬೌಲರ್ ಇರಲೇಬೇಕು; ದಿಲೀಪ್ ವೆಂಗ್‌ಸರ್ಕರ್

ಕಳೆದ ವರ್ಷ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತೀಯ ಶಿಬಿರದಲ್ಲಿ ಏಕಾಏಕಿ ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ ಸರಣಿಯನ್ನು ಮುಂದೂಡಲಾಗಿತ್ತು. ಇದೀಗ ಮರು ನಿಗದಿಪಡಿಸುವ ಮೊದಲು ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್‌ಗಳಲ್ಲಿ ರೋಹಿತ್ ಭಾರತದ ಪರ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.

ಬ್ಯಾಟ್ ಮತ್ತು ಇತರ ಪ್ರದರ್ಶನಗಳೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಐದನೇ ಟೆಸ್ಟ್ ಜುಲೈ 1ರಂದು ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುತ್ತದೆ. ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಚೇತರಿಕೆಯಾಗುತ್ತಾರೋ ಇಲ್ಲವೋ ಎಂಬುದು ಕುತೂಹಲಕಾರಿಯಾಗಿದೆ.

ರೋಹಿತ್ ಶರ್ಮಾ ಇನ್ನೂ 5ನೇ ಟೆಸ್ಟ್ ಆಡುವುದು ಹೇಗೆ?

ರೋಹಿತ್ ಶರ್ಮಾ ಇನ್ನೂ 5ನೇ ಟೆಸ್ಟ್ ಆಡುವುದು ಹೇಗೆ?

ರೋಹಿತ್ ಶರ್ಮಾ ಇನ್ನು ಐದನೇ ಟೆಸ್ಟ್ ಆಡಬಹುದು, ಆದರೆ ಮುಂದಿನ ಸುತ್ತಿನ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಬಂದರೆ ಮಾತ್ರ ಎಂಬುದನ್ನು ಮರೆಯಬಾರದು. ರೋಹಿತ್ ಶರ್ಮಾ ಸದ್ಯಕ್ಕೆ ರ್‍ಯಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ಪಾಸಿಟಿವ್ ಪರೀಕ್ಷೆ ಮಾಡಿದ್ದಾರೆ. ಇದು ತ್ವರಿತ ವರದಿಗಳನ್ನು ನೀಡುತ್ತದೆ ಮತ್ತು ತಪ್ಪು ಪಾಸಿಟಿವ್ ವರದಿ ನೀಡಿರುವ ಸಾಧ್ಯತೆವಿರಬಹುದು. ಇದೇ ವೇಳೆ RT-PCR ಪರೀಕ್ಷೆಯ ಒಂದು ಸುತ್ತಿನ ಪರೀಕ್ಷೆಯನ್ನೂ ಮಾಡಿದ್ದಾರೆ.

ಕೆಲವೇ ಗಂಟೆಗಳಲ್ಲಿ RT-PCR ಪರೀಕ್ಷೆಯ ವರದಿ ಬರಲಿದೆ ಮತ್ತು ಆ ಪರೀಕ್ಷೆಯಲ್ಲೂ ಕೋವಿಡ್ ಪಾಸಿಟಿವ್ ಆಗಿದ್ದರೆ, ರೋಹಿತ್ ಶರ್ಮಾ ಅವರ 5ನೇ ಟೆಸ್ಟ್ ಆಡುವ ಆಸೆಗೆ ತಣ್ಣೀರೆರೆಚಬಹುದು. ರಾಷ್ಟ್ರೀಯ ಆರೋಗ್ಯ ಸೇವೆಗಳ ಪ್ರಕಾರ, ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿ 5 ದಿನಗಳವರೆಗೆ ಐಸೋಲೇಶನ್‌ನಿಂದ ಹೊರಬರಬಾರದು. ರೋಹಿತ್ ಶರ್ಮಾಗೆ ನಿಜವಾಗಿಯೂ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದರೆ ಎಷ್ಟು ದಿನ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಬಿಸಿಸಿಐ ಅಥವಾ ಇಸಿಬಿಯಿಂದ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ.

Ind vs Eng: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊರೊನಾ ವೈರಸ್

ರೋಹಿತ್ ಅನುಪಸ್ಥಿತಿಯಲ್ಲಿ ಯಾರನ್ನು ಮುನ್ನಡೆಸಬೇಕು?

ರೋಹಿತ್ ಅನುಪಸ್ಥಿತಿಯಲ್ಲಿ ಯಾರನ್ನು ಮುನ್ನಡೆಸಬೇಕು?

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ಟೆಸ್ಟ್ ತಂಡವನ್ನು ಯಾರು ಮುನ್ನಡೆಸಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ರೋಹಿತ್ ಶರ್ಮಾ ಈಗಷ್ಟೇ ವಿರಾಟ್‌ ಕೊಹ್ಲಿಯಿಂದ ನಾಯಕತ್ವ ಪಡೆದಿದ್ದಾರೆ ಮತ್ತು ವಿದೇಶಿ ಟೆಸ್ಟ್‌ನಲ್ಲಿ ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಎದುರು ನೋಡುತ್ತಿದ್ದರು. ಕಳೆದ ವರ್ಷ ನಾಲ್ಕು ಟೆಸ್ಟ್‌ಗಳಲ್ಲಿ ಭಾರತವನ್ನು ಅಮೋಘವಾಗಿ ಮುನ್ನಡೆಸಿದ ವಿರಾಟ್‌ ಕೊಹ್ಲಿಯಿಂದಾಗಿ ಭಾರತ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ ಎಂಬುದನ್ನು ಮರೆಯುವಂತಿಲ್ಲ. ಅವರು 5ನೇ ಟೆಸ್ಟ್‌ನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೇ? ಎಂಬುದು ಪ್ರಶ್ನೆಯಾಗಿದೆ.

ತಂಡದಲ್ಲಿ ಉಪ ನಾಯಕನೂ ಇಲ್ಲ

ತಂಡದಲ್ಲಿ ಉಪ ನಾಯಕನೂ ಇಲ್ಲ

ಆದರೆ ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ಕೂಡ ತೊಡೆಸಂದು ಗಾಯದಿಂದಾಗಿ ತಂಡದಿಂದ ಹೊರಗುಳಿದಿರುವ ಕಾರಣ ಉಪನಾಯಕನ ಸ್ಥಾನಕ್ಕೆ ಯಾರನ್ನೂ ಹೆಸರಿಸಿಲ್ಲ. 5ನೇ ಟೆಸ್ಟ್‌ಗೆ ಬಿಸಿಸಿಐ ಆಯ್ಕೆಗಾರರು ಯಾವುದೇ ಉಪ ನಾಯಕನನ್ನು ಹೆಸರಿಸಿಲ್ಲ ಮತ್ತು ರೋಹಿತ್ ಶರ್ಮಾ ಚೇತರಿಸಿಕೊಳ್ಳದಿದ್ದಲ್ಲಿ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ವಿರಾಟ್ ಕೊಹ್ಲಿಯನ್ನು ಪರಿಗಣಿಸದಿದ್ದರೆ ರಿಷಭ್ ಪಂತ್ ಬದಲಿ ನಾಯಕ

ವಿರಾಟ್ ಕೊಹ್ಲಿಯನ್ನು ಪರಿಗಣಿಸದಿದ್ದರೆ ರಿಷಭ್ ಪಂತ್ ಬದಲಿ ನಾಯಕ

ಪಂದ್ಯ ಎಷ್ಟು ಮಹತ್ವದ್ದಾಗಿದೆ ಅಂದರೆ, ಸರಣಿಯು ಅಪಾಯದಲ್ಲಿದೆ ಎಂದು ತಿಳಿದಿರುವ ಭಾರತವು ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತ ತಂಡದ ನಾಯಕನ ಜವಾಬ್ದಾರಿ ವಹಿಸಿಕೊಳ್ಳಬಹುದು ಎನ್ನಲಾಗಿದೆ. ಆದರೆ ಇದು ಸಾಮಾನ್ಯ ಕಾರ್ಯವಿಧಾನಕ್ಕೆ ವಿರುದ್ಧವಾಗಿ ಹೋಗುತ್ತದೆ. ಕೆಲವು ಸಂದರ್ಭಗಳಲ್ಲಿ ಮುಖ್ಯ ನಾಯಕನ ಅನುಪಸ್ಥಿತಿಯಲ್ಲಿ ಉಪನಾಯಕ ತಂಡವನ್ನು ಮುನ್ನಡೆಸುವುದುಂಟು.

ವಿರಾಟ್ ಕೊಹ್ಲಿ ಅವರನ್ನು ಪರಿಗಣಿಸದಿದ್ದರೆ ರಿಷಭ್ ಪಂತ್ ಬದಲಿ ನಾಯಕನಾಗಿ ಜವಾಬ್ದಾರಿ ತೆಗೆದುಕೊಳ್ಳುವುದನ್ನು ನೋಡಬಹುದು. 24 ವರ್ಷದ ಕ್ರಿಕೆಟಿಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದರು, ಅದು 2-2 ಡ್ರಾನಲ್ಲಿ ಕೊನೆಗೊಂಡಿತು. ಆಯ್ಕೆದಾರರು ಅವರ ಮೇಲೆ ನಂಬಿಕೆ ಇಟ್ಟಿರುವುದರಿಂದ ರಿಷಭ್ ಪಂತ್ ಭಾರತವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.

Story first published: Sunday, June 26, 2022, 13:47 [IST]
Other articles published on Jun 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X