ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈನಲ್ಲಿ ಟೆವೆಲ್‌ನಲ್ಲೇ 2-3 ದಿನ ಕಳೆದಿದ್ದ ಕ್ರಿಕೆಟರ್: ಡಿಸಿ ಬ್ಯಾಟರ್ ಪೋವೆಲ್ ಬಿಚ್ಚಿಟ್ಟ ಟವೆಲ್ ಕಥೆ!

Rovman Powell reveals humorous insights of his arrival in Mumbai, said Spent 2-3 days in a towel

ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡ ಕಳೆದ ಎರಡು ಆವೃತ್ತಿಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ. ಪ್ಲೇಆಫ್ ಹಂತಕ್ಕೇರಲು ಪಂತ್ ಬಳಗ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಹಾದಿ ಕಠಿಣವಾಗಿದೆ. ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನಿಡಿ ಮಿಂಚುತ್ತಿರುವ ಆಟಗಾರ ಎಂದರೆ ಅದು ರೋಮನ್ ಪೋವೆಲ್. ಕೆಲ ಸ್ಪೋಟಕ ಇನ್ನಿಂಗ್ಸ್‌ಗಳನ್ನು ಡೆಲ್ಲಿ ಪರವಾಗಿ ನೀಡಿರುವ ಪೋವೆಲ್ ಈಗ ಅಭಿಮಾನಿಗಳ ನೆಚ್ಚಿನ ಆಟಗಾರನೂ ಆಗಿದ್ದಾರೆ.

ಐಪಿಎಲ್ ಅಂಗಳದಲ್ಲಿ ಯಶಸ್ವಿಯಾಗಿ ಮಿಂಚುತ್ತಿರುವ ಕೆರೀಬಿಯನ್ ಮೂಲದ ಆಟಗಾರ ಅಂಗಳದಾಚೆಗಿನ ಕುತೂಹಲಕಾರಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸುವ ಸಲುವಾಗಿ ಮುಂಬೈಗೆ ಬಂದಿಳಿದ ಬಳಿಕ ಅನುಭವಿಸಿದ ಪಾಡನ್ನು ಪೋವೆಲ್ ತಮಾಷೆಯಾಗಿ ಬಹಿರಂಗಪಡಿಸಿದ್ದಾರೆ.

ಕೆಕೆಆರ್ ವಿರುದ್ಧ ಸೋಲು: ಬ್ಯಾಟರ್‌ಗಳ ಪ್ರದರ್ಶನವೇ ಹೊಣೆ ಸೋಲಿಗೆ ಕಾರಣ ಎಂದ ರೋಹಿತ್ ಶರ್ಮಾಕೆಕೆಆರ್ ವಿರುದ್ಧ ಸೋಲು: ಬ್ಯಾಟರ್‌ಗಳ ಪ್ರದರ್ಶನವೇ ಹೊಣೆ ಸೋಲಿಗೆ ಕಾರಣ ಎಂದ ರೋಹಿತ್ ಶರ್ಮಾ

ಬಟ್ಟೆಯಿಲ್ಲದೆ ಟವೆಲ್‌ನಲ್ಲಿಯೇ ಕಳೆದಿದ್ದರಂತೆ ಪೋವೆಲ್

ಬಟ್ಟೆಯಿಲ್ಲದೆ ಟವೆಲ್‌ನಲ್ಲಿಯೇ ಕಳೆದಿದ್ದರಂತೆ ಪೋವೆಲ್

ರೋಮನ್ ಪೋವೆಲ್ ಈ ಬಾರಿಯ ಆವೃತ್ತಿಯಲ್ಲಿ ಆಡುವ ಸಲುವಾಗಿ ಮುಂಬೈಗೆ ಬಂದಿಳಿದ ಸಂದರ್ಭದಲ್ಲಿ ಅನುಭವಿಸಿದ ಕುತೂಹಲಕಾರಿ ಘಟನೆಯನ್ನು ಪೋವೆಲ್ ವಿವರಿಸಿದ್ದಾರೆ. ತನ್ನ ಬ್ಯಾಗ್‌ಅನ್ನು ಕಳೆದುಕೊಂಡಿದ್ದ ಕಾರಣ ಬಟ್ಟೆಯಿಲ್ಲದೆ ಕೇವಲ ಟವೆಲ್‌ನಲ್ಲಿಯೇ ಎರಡ್ಮೂರು ದಿನ ಕಳೆಯಬೇಕಾಯಿತು ಎಂದು ವಿವರಿಸಿದ್ದಾರೆ ರೋಮನ್ ಪೋವೆಲ್.

ಘಟನೆ ವಿವರಿಸಿದ ಪೋವೆಲ್

ಘಟನೆ ವಿವರಿಸಿದ ಪೋವೆಲ್

"ನಾನು ಮುಂಬೈಗೆ ಬಂದಿಳಿದ ಸಂದರ್ಭದಲ್ಲಿ ನನ್ನ ಯಾವುದೇ ಬ್ಯಾಗ್‌ಗಳು ಇಲ್ಲ ಎಂಬುದನ್ನು ಏರ್‌ಲೈನ್ಸ್ ತಿಳಿಸಿತು. ನನ್ನ ಬಳಿಕ ಆ ಸಂದರ್ಭದಲ್ಲಿ ನನ್ನ ಕೈಯಲ್ಲಿದ್ದ ಬ್ಯಾಗ್ ಮಾತ್ರವೇ ಇತ್ತು. ನನ್ನಲ್ಲಿ ಯಾವುದೇ ಹೆಚ್ಚುವರಿ ಬಟ್ಟೆ ಇರಲಿಲ್ಲ. ಹಾಗಾಗಿ ನಾನು ಹೋಟೆಲ್‌ ಕೋಣೆಯಲ್ಲಿ ಟವೆಲ್‌ನಲ್ಲಿಯೇ ಎರಡ್ಮೂರು ದಿನ ಕಳೆದಿದ್ದೇನೆ" ಎಂದಿದ್ದಾರೆ ರೋಮನ್ ಪೋವೆಲ್.

"ಐಪಿಎಲ್ 2022ರ ಅತಿ ಕೆಟ್ಟ ರೀಟೆನ್ಶನ್ ಇದು": ಮುಂಬೈ ಇಂಡಿಯನ್ಸ್ ಸೋಲಿನ ಬಳಿಕ ಅಭಿಮಾನಿಗಳ ಆಕ್ರೋಶ

ಮಧ್ಯಮ ಕ್ರಮಾಂಕದ ಅಸ್ತ್ರ

ಮಧ್ಯಮ ಕ್ರಮಾಂಕದ ಅಸ್ತ್ರ

ಹಾರ್ಡ್ ಹಿಟ್ಟರ್ ರೋಮನ್ ಪೋವೆಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿಯುತ್ತಿದ್ದು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಫಿನಿಷರ್ ಆಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಆವೃತ್ತಿಯಲ್ಲಿ ಪೋವೆಲ್ ಈವರೆಗೆ 205 ರನ್‌ಗಳಿಸಿದ್ದು 161 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಮೆಗಾ ಹರಾಜಿನಲ್ಲಿ 2.8 ಕೋಟಿ ಮೊತ್ತಕ್ಕೆ ಡೆಲ್ಲಿ ತಂಡದ ಪಾಲಾಗಿರುವ ಪೋವೆಲ್ ಕೆಲ ಸ್ಪೋಟಕ ಇನ್ನಿಂಗ್ಸ್ ನೀಡಿದ್ದಾರೆ.

Points tableನ ಮೊದಲ ಸ್ಥಾನಕ್ಕೆ ನಡೆದ low scoring thriller | Oneindia Kannada

"ಡೆಲ್ಲಿ ಕ್ಯಾಪಿಟಲ್ಸ್ ಕುಟುಂಬದಂತಿದೆ"

ಇನ್ನು ಈ ಸಂದರ್ಭದಲ್ಲಿ ರೋಮನ್ ಪೋವೆಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಾತಾವರಣದ ಬಗ್ಗೆಯೂ ಮಾತನಾಡಿದ್ದಾರೆ. "ಕೆರೀಬಿಯನ್‌ನಿಂದ ಬಂದ ನನಗೆ ಇಲ್ಲಿ ತವರಿನ ಅನುಭವ ದೊರೆಯುವುದು ಮುಖ್ಯವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ನನ್ನನ್ನು ಈ ಕುಟುಂಬದ ಭಾಗ ಎಂಬುದನ್ನು ಒಪ್ಪಿಕೊಂಡಿದೆ. ಹಾಗಾಗಿ ನನಗೆ ಇದು ನನ್ನ ಕುಟುಂಬದಂತೆ ಭಾಸವಾಗುತ್ತಿದೆ. ಉತ್ತಮ ವಾತಾವರಣದಲ್ಲಿದ್ದರೆ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಅಲ್ಲದೆ ಮೈದಾನದಲ್ಲಿ ನಿಮ್ಮ ದಿನ ಉತ್ತಮವಾಗುದ್ದರೂ ಅಥವಾ ಕೆಟ್ಟದಾಗಿದ್ದರೂ ಎಲ್ಲರೂ ನಿಮಗೆ ಬೆಂಬಲವಾಗಿ ನಿಲ್ಲುವುದು ಬಹಳ ಮುಖ್ಯವಾಗುತ್ತದೆ" ಎಂದಿದ್ದಾರೆ ರೋಮನ್ ಪೋವೆಲ್.

Story first published: Tuesday, May 10, 2022, 15:42 [IST]
Other articles published on May 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X