ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಐಪಿಎಲ್ 2022ರ ಅತಿ ಕೆಟ್ಟ ರೀಟೆನ್ಶನ್ ಇದು": ಮುಂಬೈ ಇಂಡಿಯನ್ಸ್ ಸೋಲಿನ ಬಳಿಕ ಅಭಿಮಾನಿಗಳ ಆಕ್ರೋಶ

IPL 2022: Fans disappointed on Kieron Pollard performance said Worst retention of IPL 2022

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಿಂದೆಂದೂ ಕಂಡಿರದಂತಾ ಕಳಪೆ ಆವೃತ್ತಿಯನ್ನು ಕಂಡಿದೆ. ಇದೇ ಮೊದಲ ಬಾರಿಗೆ ಐಪಿಎಲ್‌ನ ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ 9 ಸೋಲು ಅನುಭವಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಮತ್ತೊಂದು ಹೀನಾಯ ಸೋಲು ಕಂಡಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಓರ್ವ ಅನುಭವಿ ಆಟಗಾರನ ಪ್ರದರ್ಶನದ ಬಗ್ಗೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 166 ರನ್‌ಗಳನ್ನು ಬೆನ್ನಟ್ಟಲು ವಿಫಲವಾಗಿತ್ತು. ಇಶಾನ್ ಕಿಶನ್ ಹೊರತುಪಡಿಸಿ ಉಳಿದ ಎಲ್ಲಾ ದಾಂಡಿಗರು ಕೂಡ ಈ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರು. ಇದರ ಪರಿಣಾಮವಾಗಿ ಮುಂಬೈ ಇಂಡಿಯನ್ಸ್ ತಂಡ ಕೇವಲ 113 ರನ್‌ಗಳಿಗೆ ಆಲೌಟ್ ಆಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೆಕೆಆರ್ ವಿರುದ್ಧ ಸೋಲು: ಬ್ಯಾಟರ್‌ಗಳ ಪ್ರದರ್ಶನವೇ ಹೊಣೆ ಸೋಲಿಗೆ ಕಾರಣ ಎಂದ ರೋಹಿತ್ ಶರ್ಮಾಕೆಕೆಆರ್ ವಿರುದ್ಧ ಸೋಲು: ಬ್ಯಾಟರ್‌ಗಳ ಪ್ರದರ್ಶನವೇ ಹೊಣೆ ಸೋಲಿಗೆ ಕಾರಣ ಎಂದ ರೋಹಿತ್ ಶರ್ಮಾ

ಅನುಭವಿ ಆಟಗಾರನ ಬಗ್ಗೆ ಅಭಿಮಾನಿಗಳು ಕಿಡಿ

ಅನುಭವಿ ಆಟಗಾರನ ಬಗ್ಗೆ ಅಭಿಮಾನಿಗಳು ಕಿಡಿ

ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅನುಭವಿ ಆಟಗಾರ ಪ್ರಮುಖ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಭಾರೀ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ತಂಡಕ್ಕೆ ಪೊಲಾರ್ಡ್ ಅವರಿಂದ ಉಪಯುಕ್ತ ಕೊಡುಗೆ ಬರುತ್ತಿಲ್ಲ. ಕೆಳ ಮಧ್ಯಮ ಕ್ರಮಾಂಕದಲ್ಲಿ ಪೊಲಾರ್ಡ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಾರದಿರುವುದು ಮುಂಬೈ ಸೋಲಿಗೆ ಮತ್ತೊಂದು ಕಾರಣವಾಗಿದೆ. ಹೀಗಾಗಿ ಪೊಲಾರ್ಡ್ ವಿರುದ್ಧ ತಮ್ಮ ಅಸಮಾಧಾನವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಐಪಿಎಲ್‌ನ ಅತಿ ಕೆಟ್ಟ ರೀಟೆನ್ಶನ್ ಎಂದ ಅಭಿಮಾನಿಗಳು

ಐಪಿಎಲ್‌ನ ಅತಿ ಕೆಟ್ಟ ರೀಟೆನ್ಶನ್ ಎಂದ ಅಭಿಮಾನಿಗಳು

ಮುಂಬೈ ಇಂಡಿಯನ್ಸ್ ತಂಡ ಕಿರಾನ್ ಪೊಲಾರ್ಡ್ ಅವರನ್ನು ರೀಟೈನ್ ಮಾಡಿಕೊಳ್ಳುವ ಮೂಲಕ ತಂಡದಲ್ಲಿಯೇ ಉಳಿಸಿಕೊಂಡಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡದ ಈ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುವಂತಾ ಪ್ರದರ್ಶನ ಪೊಲಾರ್ಡ್ ಅವರಿಂದ ಬಂದಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಪೊಲಾರ್ಡ್ ಅವರನ್ನು ರೀಟೈನ್ ಮಾಡಿಕೊಳ್ಳುವ ನಿರ್ಧಾರ ಐಪಿಎಲ್‌ನ ಅತ್ಯಂತ ಕೆಟ್ಟ ರೀಟೆನ್ಶನ್ ಎಂದು ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೊನೆಯ ಸ್ಥಾನದಲ್ಲಿಯೇ ಮುಂದುವರಿದ ಮುಂಬೈ ಇಂಡಿಯನ್ಸ್

ಕೊನೆಯ ಸ್ಥಾನದಲ್ಲಿಯೇ ಮುಂದುವರಿದ ಮುಂಬೈ ಇಂಡಿಯನ್ಸ್

ಈ ಬಾರಿಯ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಸ್ಥಾನದಲ್ಲಿಯೇ ಭದ್ರವಾಗಿದೆ. ಆಡಿರುವ 11 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಿರುವುದು ಕೇವಲ 2 ಪಂದ್ಯಗಳನ್ನು ಮಾತ್ರ. ಹೀಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಟೂರ್ನಿ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಆವೃತ್ತಿಯನ್ನು ಈ ಬಾರಿ ಹೊಂದಿದೆ. ಅಲ್ಲದೆ ಈ ಬಾರಿಯ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿರುವ ಮೊದಲ ತಂಡ ಎನಿಸಿಕೊಂಡಿದೆ.

ಪೊಲ್ಲಾರ್ಡ್ ಗೆಟ್ ಔಟ್!! ಮುಂಬೈ ಅಭಿಮಾನಿಗಳಿಂದ ಪೊಲಾರ್ಡ್ ಫುಲ್ ಟ್ರೋಲ್ | Oneindia Kannada
ಮುಂದಿನ ಎದುರಾಳಿ ಸಿಎಸ್‌ಕೆ

ಮುಂದಿನ ಎದುರಾಳಿ ಸಿಎಸ್‌ಕೆ

ಮುಂಬೈ ಇಂಡಿಯನ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಮೇ 12 ಗುರುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಆಡಲಿದೆ. ಇದು ಈ ಟೂರ್ನಿಯ 59ನೇ ಪಂದ್ಯವಾಗಿದ್ದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.

Story first published: Tuesday, May 10, 2022, 11:40 [IST]
Other articles published on May 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X