ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023 Auction: 9 ಹೊಸ ಆಟಗಾರರ ಖರೀದಿಯೊಂದಿಗೆ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡ ಹೀಗಿದೆ

RR Team 2023 Players List: Full List of Rajasthan Royals Players With Price in Kannada

ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿನಲ್ಲಿ ಕಳೆದ ಬಾರಿಯ ರನ್ನರ್-ಅಪ್ ರಾಜಸ್ಥಾನ ರಾಯಲ್ಸ್ (ಆರ್ಆರ್) ತಂಡ ಹಲವು ಪ್ರತಿಭಾವಂತ ಕ್ರಿಕೆಟಿಗರನ್ನು ಖರೀದಿಸಿ ಬಲಿಷ್ಠ ತಂಡವನ್ನು ರಚಿಸಿದೆ.

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 13.2 ಕೋಟಿಯ ರೂಪಾಯಿ ಪರ್ಸ್‌ನೊಂದಿಗೆ ಮಿನಿ ಹರಾಜಿ ಪ್ರಕ್ರಿಯೆಯಲ್ಲಿ ಭಾಗವಹಿಸಿತು. ಇದು ಎಲ್ಲಾ 10 ತಂಡಗಳಲ್ಲಿ ಮೂರನೇ ಚಿಕ್ಕ ಮೊತ್ತವಾಗಿತ್ತು. ಗಮನಾರ್ಹ ಅಂಶವೆಂದರೆ ಚೊಚ್ಚಲ ಪಂದ್ಯಾವಳಿ ಚಾಂಪಿಯನ್ ತಂಡ ಮಿನಿ-ಹರಾಜಿನಲ್ಲಿ ತುಂಬಲು ನಾಲ್ಕು ಸಾಗರೋತ್ತರ ಆಟಗಾರರನ್ನು ಒಳಗೊಂಡಂತೆ ಒಂಬತ್ತು ಸ್ಲಾಟ್‌ಗಳನ್ನು ಹೊಂದಿದ್ದರು.

IPL Auction 2023: ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಸೇರ್ಪಡೆ; ಹೇಗಿದೆ ಮುಂಬೈ ಇಂಡಿಯನ್ಸ್ ತಂಡ?IPL Auction 2023: ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಸೇರ್ಪಡೆ; ಹೇಗಿದೆ ಮುಂಬೈ ಇಂಡಿಯನ್ಸ್ ತಂಡ?

ರಾಜಸ್ಥಾನ ತಂಡದ ಮ್ಯಾನೇಜ್‌ಮೆಂಟ್ ಹ್ಯಾರಿ ಬ್ರೂಕ್‌ಗಾಗಿ ಬಿಡ್ ಕೂಗುವ ಮೂಲಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿತು. ಆದರೆ ಅವರನ್ನು ಖರೀದಿಸಲು ವಿಫಲವಾಯಿತು. ಅಲ್ಲದೇ ಆರಂಭದಲ್ಲಿ ಸ್ಯಾಮ್ ಕರ್ರಾನ್‌ಗಾಗಿ ಎಲ್ಲರೂ ಮುಗಿಬಿದ್ದರು. ಆದರೆ ಲಭ್ಯವಿರುವ ಹಣದ ಕೊರತೆಯಿಂದಾಗಿ ರಾಜಸ್ಥಾನ ರಾಯಲ್ಸ್ ಸ್ಪರ್ಧೆಯಿಂದ ಹೊರಗುಳಿಯಿತು.

ಸ್ಟಾರ್ ಆಲ್‌ರೌಂಡರ್ ಜೇಸನ್ ಹೋಲ್ಡರ್ 5.75 ಕೋಟಿ ರೂ.

ಸ್ಟಾರ್ ಆಲ್‌ರೌಂಡರ್ ಜೇಸನ್ ಹೋಲ್ಡರ್ 5.75 ಕೋಟಿ ರೂ.

ಇನ್ನು ವೆಸ್ಟ್ ಇಂಡೀಸ್ ಸ್ಟಾರ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಮೊದಲ ಖರೀದಿಯೊಂದಿಗೆ ರಾಜಸ್ಥಾನ ರಾಯಲ್ಸ್ ಸಾಗರೋತ್ತರ ಸ್ಲಾಟ್ ತುಂಬಲು ಸಾಧ್ಯವಾಯಿತು. ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ರಾಯಲ್ಸ್ 5.75 ಕೋಟಿ ರೂ. ಖರ್ಚು ಮಾಡಿದೆ. ಅವರ ಮುಂದಿನ ಖರೀದಿಯು ವಿದೇಶಿ ಆಟಗಾರನಾಗಿದ್ದು, ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಡೊನಾವನ್ ಫೆರೇರಾ ಅವರನ್ನು 50 ಲಕ್ಷ ರೂ.ಗೆ ಖರೀದಿಸಿದರು.

ರಾಯಲ್ಸ್ ತಂಡ ನಂತರ ದೇಶೀಯ ಕ್ರಿಕೆಟ್‌ನಲ್ಲಿ ರಾಜಸ್ಥಾನ ತಂಡಕ್ಕಾಗಿ ಆಡುವ ವಿಕೆಟ್‌ಕೀಪರ್-ಬ್ಯಾಟರ್ ಕುನಾಲ್ ರಾಥೋರ್ ಅವರನ್ನು ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿದರು.

ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಮ್ ಝಂಪಾ 1.5 ಕೋಟಿ

ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಮ್ ಝಂಪಾ 1.5 ಕೋಟಿ

ಹರಾಜಿನ ಎರಡನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಮ್ ಝಂಪಾ ಮತ್ತು ಭಾರತೀಯ ವೇಗಿ ಕೆಎಂ ಆಸಿಫ್ ಅವರನ್ನು ಕ್ರಮವಾಗಿ 1.5 ಕೋಟಿ ಮತ್ತು 30 ಲಕ್ಷ ರೂಪಾಯಿಗೆ ಖರೀದಿಸಿದ ನಂತರ, ತಮ್ಮ ತಂಡಕ್ಕೆ ಮತ್ತೊಬ್ಬ ಲೆಗ್ ಸ್ಪಿನ್ನರ್ ಮುರುಗನ್ ಅಶ್ವಿನ್ ಅವರನ್ನು 20 ಲಕ್ಷ ರೂ.ಗೆ ತೆಗೆದುಕೊಂಡರು.

ಹರಾಜಿನ ಕೊನೆಯ ಕ್ಷಣದಲ್ಲಿ ರಾಜಸ್ಥಾನ ರಾಯಲ್ಸ್ ಭಾರತದ ಬ್ಯಾಟರ್‌ಗಳಾದ ಆಕಾಶ್ ವಸಿಸ್ಟ್ ಮತ್ತು ಅಬ್ದುಲ್ ಪಿಎ ಅವರನ್ನು ತಲಾ 20 ಲಕ್ಷ ರೂ.ಗೆ ಬುಟ್ಟಿಗೆ ಹಾಕಿಕೊಂಡಿತು. ನಂತರ ರಾಜಸ್ಥಾನ ರಾಯಲ್ಸ್ ತಂಡ ದಿನದ ಆರಂಭದಲ್ಲಿ ಮಾರಾಟವಾಗದೆ ಉಳಿದಿದ್ದ ಇಂಗ್ಲೆಂಡ್‌ನ ಜೋ ರೂಟ್ ಅವರನ್ನು 1 ಕೋಟಿ ರೂ.ಗೆ ಖರೀದಿಸಿದರು.

ಬೆಲೆಯೊಂದಿಗೆ ರಾಜಸ್ಥಾನ ರಾಯಲ್ಸ್ ಆಟಗಾರರ ಪಟ್ಟಿ

ಬೆಲೆಯೊಂದಿಗೆ ರಾಜಸ್ಥಾನ ರಾಯಲ್ಸ್ ಆಟಗಾರರ ಪಟ್ಟಿ

ಜೇಸನ್ ಹೋಲ್ಡರ್ - 5.75 ಕೋಟಿ ರೂ.

ಡೊನಾವನ್ ಫೆರೇರಾ - 50 ಲಕ್ಷ ರೂ.

ಕುನಾಲ್ ರಾಥೋಡ್ - 20 ಲಕ್ಷ ರೂ.

ಆಡಮ್ ಝಂಪಾ - 1.5 ಕೋಟಿ ರೂ.

ಕೆ.ಎಂ. ಆಸಿಫ್ - 30 ಲಕ್ಷ ರೂ.

ಮುರುಗನ್ ಅಶ್ವಿನ್ - 20 ಲಕ್ಷ ರೂ.

ಆಕಾಶ್ ವಸಿಸ್ಟ್ - 20 ಲಕ್ಷ ರೂ.

ಅಬ್ದುಲ್ ಪಿಎ - 20 ಲಕ್ಷ ರೂ.

ಜೋ ರೂಟ್ - 1 ಕೋಟಿ ರೂ.

ಸಂಜು ಸ್ಯಾಮ್ಸನ್ - 14 ಕೋಟಿ ರೂ.

ಜೋಸ್ ಬಟ್ಲರ್ - 10 ಕೋಟಿ ರೂ.

ಯಶಸ್ವಿ ಜೈಸ್ವಾಲ್ - 4 ಕೋಟಿ ರೂ.

ರವಿಚಂದ್ರನ್ ಅಶ್ವಿನ್ - 5 ಕೋಟಿ ರೂ.

ಟ್ರೆಂಟ್ ಬೌಲ್ಟ್ - 8 ಕೋಟಿ ರೂ.

ಶಿಮ್ರಾನ್ ಹೆಟ್ಮೆಯರ್ - 8.5 ಕೋಟಿ ರೂ.

ದೇವದತ್ ಪಡಿಕ್ಕಲ್ - 7.75 ಕೋಟಿ ರೂ.

ರಿಯಾನ್ ಪರಾಗ್ - 3.8 ಕೋಟಿ ರೂ.

ಕೆ.ಸಿ.ಕಾರ್ಯಪ್ಪ- 30 ಲಕ್ಷ ರೂ.

ಪ್ರಸಿದ್ಧ್ ಕೃಷ್ಣ - 10 ಕೋಟಿ ರೂ.

ಯುಜುವೇಂದ್ರ ಚಹಾಲ್ - 6.5 ಕೋಟಿ ರೂ.

ನವದೀಪ್ ಸೈನಿ - 2.6 ಕೋಟಿ ರೂ.

ಒಬೆದ್ ಮೆಕಾಯ್ - 75 ಲಕ್ಷ ರೂ.

ಕುಲದೀಪ್ ಸೇನ್ - 20 ಲಕ್ಷ ರೂ.

ಕುಲದೀಪ್ ಯಾದವ್ - 20 ಲಕ್ಷ ರೂ.

ಧ್ರುವ್ ಜುರೆಲ್ - 20 ಲಕ್ಷ ರೂ.

ಐಪಿಎಲ್ 2023ಕ್ಕೆ ರಾಜಸ್ಥಾನ ರಾಯಲ್ಸ್ ಪೂರ್ಣ ತಂಡ

ಐಪಿಎಲ್ 2023ಕ್ಕೆ ರಾಜಸ್ಥಾನ ರಾಯಲ್ಸ್ ಪೂರ್ಣ ತಂಡ

ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ನವದೀಪ್ ಸೈನಿ, ಒಬೆದ್ ಮೆಕಾಯ್, ಕುಲದೀಪ್ ಸೇನ್, ಕುಲದೀಪ್ ಯಾದವ್, ಧ್ರುವ್ ಜುರೆಲ್, ಜೇಸನ್ ಹೋಲ್ಡರ್, ಡೊನಾವೊನ್ ಫೆರೇರಾ, ಕುನಾಲ್ ರಾಥೋರ್, ಆ್ಯಡಮ್ ಝಂಪಾ, ಕೆಎಂ ಆಸಿಫ್, ಮುರುಗನ್ ಅಶ್ವಿನ್, ಆಕಾಶ್ ವಸಿಸ್ಟ್, ಅಬ್ದುಲ್ ಪಿಎ, ಜೋ ರೂಟ್.

Story first published: Saturday, December 24, 2022, 11:36 [IST]
Other articles published on Dec 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X