ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ.ಆಫ್ರಿಕಾ ಟಿ20 ಲೀಗ್: 10 ವರ್ಷಗಳ ಕಾರ್ಯತಂತ್ರ ಪಾಲುದಾರಿಕೆ ಘೋಷಿಸಿದ Viacom 18 sports

Viacom18 sports

ಕ್ರಿಕೆಟ್ ಸೌತ್ ಆಫ್ರಿಕಾ ಆಯೋಜಿಸಲಿರುವ SA20 ಲೀಗ್‌ನ ಮೊದಲ ಆವೃತ್ತಿಯ ಟಿ20 ಟೂರ್ನಿಗೆ ರಾಷ್ಟ್ರದ ದೈತ್ಯ ರಿಲಯನ್ಸ್‌ ಸಂಸ್ಥೆಯ ಅಂಗಸಂಸ್ಥೆ ವಯೋಕಾಮ್ 18 ಕಾರ್ಯತಂತ್ರ ಪಾಲುದಾರಿಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಭಾರತದ ಹೊಸ ಕ್ರೀಡಾ ಚಾನೆಲ್ ನೆಟ್‌ವರ್ಕ್ ಆಗಿರುವ ವಯೋಕಾಮ್ 18 ಸ್ಪೋರ್ಟ್ಸ್, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ 10 ವರ್ಷಗಳ ಕಾರ್ಯತಂತ್ರ ಪಾಲುದಾರಿಕೆ ಪಡೆದಿರುವುದಾಗಿ ಬುಧವಾರ ಘೋಷಣೆ ಮಾಡಿದೆ.

ಇತ್ತೀಚೆಗಷ್ಟೇ ದ.ಆಫ್ರಿಕಾ ಕ್ರಿಕೆಟ್ ಬೋರ್ಡ್‌ ಟಿ20 ಲೀಗ್ ಅನ್ನು ಘೋಷಿಸಿದ್ದು, ಲೀಗ್ 10ನೇ ಜನವರಿ 2023 ರಂದು ಪ್ರಾರಂಭವಾಗುತ್ತದೆ. ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಎಂಐ ಕೇಪ್ ಟೌನ್, ಡರ್ಬನ್ ಸೂಪರ್ ಜೈಂಟ್ಸ್, ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್, ಪಾರ್ಲ್ ರಾಯಲ್ಸ್, ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ.

ಇವುಗಳಲ್ಲಿ ಆರು ಫ್ರಾಂಚೈಸಿಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಫ್ರಾಂಚೈಸಿಗಳು ಸ್ವಾಧೀನಪಡಿಸಿಕೊಂಡಿವೆ. ಒಟ್ಟು ಆರು ತಂಡಗಳಲ್ಲಿ ಪ್ರತಿ ತಂಡದಲ್ಲಿ 17 ಆಟಗಾರರಿದ್ದಾರೆ. ಪ್ರತಿ ತಂಡವು ಗರಿಷ್ಠ ಏಳು ಅಂತರಾಷ್ಟ್ರೀಯ ಆಟಗಾರರನ್ನು ಹೊಂದಿದೆ.

ವಯೋಕಾಮ್ 18 ಸ್ಪೋರ್ಟ್ಸ್ ಭಾರತದ ಮೀಡಿಯಾ ಜಗತ್ತಿನಲ್ಲಿ ಕ್ರೀಡಾಭಿಮಾನಿಗಳಿಗೆ ಹೊಸ ಅನುಭವವನ್ನು ಕಟ್ಟುಕೊಡಲು ಮುನ್ನುಡಿ ಬರೆದಿದೆ. ದಕ್ಷಿಣ ಆಫ್ರಿಕಾ ಟಿ20 ಲೀಗ್ ಮತ್ತು ವಯೋಕಾಮ್18 ಒಟ್ಟಾಗಿ ಭಾರತದಲ್ಲಿನ ಕ್ರಿಕೆಟ್ ಅಭಿಮಾನಿಗಳನ್ನ ಒಟ್ಟುಗೂಡಿಸಲು, ಮನರಂಜನೆ ನೀಡಲು ದಿಟ್ಟ ಹೆಜ್ಜೆಯನ್ನಿಟ್ಟಿದೆ.

ದಕ್ಷಿಣ ಆಫ್ರಿಕಾ ಮತ್ತು ಭಾರತ ತುಂಬಾ ಹಳೆಯದಾದ ಮತ್ತು ಐತಿಹಾಸಿಕ ಕ್ರಿಕೆಟ್ ಸಂಬಂಧವನ್ನು ಹೊಂದಿದ್ದು, ಈ ಪಾಲುದಾರಿಕೆಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಗುಣಮಟ್ಟದ ಟಿ20 ಟೂರ್ನಿಯನ್ನು ಒದಗಿಸುವಲ್ಲಿ ಸಹಕಾರಿಯಾಗಲಿದೆ.

ಜನವರಿ 10ರಿಂದ ಪ್ರಾರಂಭಗೊಳ್ಳಲಿರುವ ಪ್ರಾರಂಭಗೊಳ್ಳಲಿರುವ ಟಿ20 ಟೂರ್ನಿಯು ಸೆಮಿಫೈನಲ್ ಹಾಗೂ ಫೈನಲ್‌ಗೂ ಮುನ್ನ 33 ಲೀಗ್ ಪಂದ್ಯಗಳನ್ನ ಒಳಗೊಂಡಿದ್ದು, 4 ವಾರಗಳ ಕಾಲ ನಡೆಯಲಿದೆ.

Story first published: Wednesday, November 2, 2022, 22:42 [IST]
Other articles published on Nov 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X