ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡದಲ್ಲೂ ಓದಬಹುದು ಸಚಿನ್ ಆತ್ಮಕಥೆ!

By Mahesh

ಬೆಂಗಳೂರು, ನ.12: ಕ್ರಿಕೆಟ್ ಲೋಕದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ನಿರೀಕ್ಷೆಯಂತೆ ಪುಸ್ತಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹುಟ್ಟಿಸಿದೆ. ಇಂಗ್ಲೀಷ್ ಭಾಷೆಯಲ್ಲಿ ಬಂದಿರುವ ಈ ಆತ್ಮಕಥನವನ್ನು ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಹೊರ ತರಲು ಪ್ರಕಾಶಕರು ಮುಂದಾಗಿದ್ದಾರೆ. ಹೀಗಾಗಿ ಕನ್ನಡದಲ್ಲೂ ಸಚಿನ್ ಜೀವನ ಚರಿತ್ರೆ ಓದುವ ಅವಕಾಶ ಅವರ ಅಭಿಮಾನಿಗಳಿಗೆ ಸಿಗಲಿದೆ.

ಬಹುನಿರೀಕ್ಷಿತ ಪುಸ್ತಕದ ಮೊದಲ ಪ್ರತಿಯನ್ನು ತಮ್ಮ ತಾಯಿಗೆ ನೀಡಿದ ಸಚಿನ್ ಅವರು ನ.5 ರಂದು ಆತ್ಮಕಥೆಯನ್ನು ಅಭಿಮಾನಿಗಳಿಗೆ ಅರ್ಪಿಸಿದ್ದರು. ದೇಶದ ವಿವಿಧ ಪ್ರಕಾಶಕರು ಸಚಿನ್ ಆತ್ಮಕಥೆಯನ್ನು ಪ್ರಕಟಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಇಂಗ್ಲಿಶ್ ಪುಸ್ತಕದ ಪ್ರಕಾಶನ ಸಂಸ್ಥೆ ಹ್ಯಾಶೆಟ್ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಈ ಪುಸ್ತಕವನ್ನು ಜೊತೆಯಾಗಿ ಪ್ರಕಟಿಸಲಿದೆ.

ಅತ್ಯಧಿಕ ಬೇಡಿಕೆಯಿರುವ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದ ಆತ್ಮಕತೆ "ಪ್ಲೇಯಿಂಗ್ ಇಟ್ ಮೈ ವೆ" ಇನ್ನೂ ಏಳು ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಲಿದೆ. ದೇಶದ ವಿವಿಧ ಪ್ರಕಾಶಕರು ಆಸಕ್ತಿ ತೋರಿರುವ ಹಿನ್ನಲೆಯಲ್ಲಿ ಈ ಇಂಗ್ಲಿಶ್ ಪುಸ್ತಕದ ಪ್ರಕಾಶನ ಸಂಸ್ಥೆ ಹ್ಯಾಶೆಟ್ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಈ ಪುಸ್ತಕವನ್ನು ಜೊತೆಯಾಗಿ ಪ್ರಕಟಿಸಲಿದೆ. [ಅಭಿಮಾನಿಗಳಿಗೆ ಅರ್ಪಣೆಯಾದ ಸಚಿನ್ ಕೃತಿ]

Sachin Tendulkar’s Playing it my way to be published in regional languages

ಕನ್ನಡ ಸೇರಿದಂತೆ ಮರಾಠಿ, ಹಿಂದಿ, ಗುಜರಾತಿ, ಮಲಯಾಳಂ, ಅಸ್ಸಾಮಿ, ತೆಲುಗು ಮತ್ತು ಬೆಂಗಾಳಿ ಪ್ರಕಾಶಕರ ಜೊತೆ ಪ್ರಕಟಿಸಲು ಮಾತುಕತೆ ನಡೆಸುತ್ತಿದ್ದೇವೆ. ಮುಂದಿನ ವರ್ಷದ ಒಳಗೆ ಈ ಮಾತುಕತೆಗಳು ಸಂಪೂರ್ಣಗೊಳ್ಳಲಿದ್ದು, 2015ರ ಬೇಸಿಗೆಯ ಒಳಗೆ ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕ ಹೊರಬರಲಿದೆ" ಎಂದು ಹ್ಯಾಶೆಟ್ ಭಾರತದ ಪ್ರಕಾಶಕಿ ಪೌಲಮಿ ಚಟರ್ಜಿ ತಿಳಿಸಿದ್ದಾರೆ.

"ಇಂಗ್ಲೀಷ್ ಪುಸ್ತಕದ ಬಿಡುಗಡೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಆದುದರಿಂದ ಪ್ರಾದೇಶಿಕ ಭಾಷೆಗಳಲ್ಲಿ ಈ ಪುಸ್ತಕವನ್ನು ಪ್ರಕಟಿಸಲು ವಿವಿಧ ಪ್ರಕಾಶಕರ ಜೊತೆ ಮಾತುಕತೆ ನಡೆಸುತ್ತಿದ್ದೇವೆ. [ಗ್ರೆಗ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಎಂದ ಸಚಿನ್]

ಮರಾಠಿ, ಹಿಂದಿ, ಗುಜರಾತಿ, ಮಲಯಾಳಂ, ಅಸ್ಸಾಮಿ, ತೆಲುಗು ಮತ್ತು ಬೆಂಗಾಳಿ ಪ್ರಕಾಶಕರ ಜೊತೆ ಪ್ರಕಟಿಸಲು ಮಾತುಕತೆ ನಡೆಸುತ್ತಿದ್ದೇವೆ. ಮುಂದಿನ ವರ್ಷದ ಒಳಗೆ ಈ ಮಾತುಕತೆಗಳು ಸಂಪೂರ್ಣಗೊಳ್ಳಲಿದ್ದು, 2015ರ ಬೇಸಿಗೆಯ ಒಳಗೆ ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕ ಹೊರಬರಲಿದೆ" ಎಂದು ಹ್ಯಾಶೆಟ್ ಭಾರತದ ಪ್ರಕಾಶಕಿ ಪೌಲಮಿ ಚಟರ್ಜಿ ತಿಳಿಸಿದ್ದಾರೆ. [ಪುಸ್ತಕ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ]

ನವೆಂಬರ್ 6 ರಂದು ಬಿಡುಗಡೆಯಾದ ಈ ಪುಸ್ತಕ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದೆ. ಇಲ್ಲಿ ತನಕ ಸುಮಾರು 2 ಲಕ್ಷ ಪ್ರತಿಗಳಿಗೆ ಪ್ರೀ ಆರ್ಡರ್ ಬಂದಿದೆ. ಡ್ಯಾನ್ ಬ್ರೌನ್ ಅವರ ಇನ್ಫರ್ನೋ, ವಾಲ್ಟರ್ ಐಸಾಕ್ಸನ್ ಅವರ ಸ್ಟೀವ್ ಜಾಬ್ಸ್ ಮತ್ತು ಜೆ ಕೆ ರೋಲಿಂಗ್ಸ್ ಅವರ ಕ್ಯಾಶುಯಲ್ ವೇಕೆನ್ಸಿ ಪುಸ್ತಕಗಳಿಗೆ ಸಚಿನ್ ಪುಸ್ತಕ ಪೈಪೋಟಿ ನೀಡುತ್ತಿದೆ" ಎಂದು ಹ್ಯಾಶೆಟ್ ಇಂಡಿಯಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. (ಪಿಟಿಐ)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X