ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ದೇವರ ಜನ್ಮದಿನ: ರಿಸ್ಟ್ ಸ್ಪಿನ್ನಿಂಗ್‌ಗೆ ಸಚಿನ್‌ ಮೆಚ್ಚುಗೆ

Sachin Tendulkar speaks on his birthday

ನವದೆಹಲಿ, ಏಪ್ರಿಲ್ 24: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ಗೆ ಇಂದು (ಏಪ್ರಿಲ್ 24) 45ನೇ ಜನ್ಮದಿನ. ಅಭಿಮಾನಿಗಳ ಪ್ರೀತಿಯ ಆಟಗಾರನಿಗೆ ಜಗತ್ತಿನ ವಿವಿಧೆಡೆಯಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ಕ್ರಿಕೆಟ್ ಅಂಗಳದಿಂದ ದೂರವಿದ್ದರೂ, ಅದರ ನಂಟು ಅವರಲ್ಲಿ ಇಂದಿಗೂ ತೀವ್ರವಾಗಿದೆ. ರಾಜಕೀಯದ ಹಾದಿಯನ್ನು ತುಳಿದಿದ್ದರೂ, ಅವರಲ್ಲಿರುವುದು ಅಪ್ಪಟ ಕ್ರಿಕೆಟಿಗ. ಜನ್ಮದಿನದ ಹೊತ್ತಿನಲ್ಲಿ ಅವರು ಈಗಿನ ಕ್ರಿಕೆಟ್ ಜಗತ್ತಿನ ಕುರಿತು ಕೆಲವು ವಿಚಾರ ಹಂಚಿಕೊಂಡರು. ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸುತ್ತಿದ್ದ ಸಚಿನ್, ಸ್ಪಿನ್ ಬೌಲಿಂಗ್ ಕುರಿತು ಮಾತನಾಡಿದ್ದಾರೆ.

ಬಹುಭಾಷಾ ತಜ್ಞನಂತೆ ಸ್ಪಿನ್ನರ್
ಲೆಗ್‌ ಬ್ರೇಕ್ ಕೂಡ ಮಾಡಬಲ್ಲ ಆಫ್ ಸ್ಪಿನ್ನರ್ ಬಹುಭಾಷಾ ಪರಿಣತನಂತೆ ಎನ್ನುವುದು ಸಚಿನ್ ಬಣ್ಣನೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಣಿಕಟ್ಟಿನ ಸ್ಪಿನ್ನರ್‌ಗಳಿಗೆ (ರಿಸ್ಟ್ ಸ್ಪಿನ್ನರ್ಸ್) ಬಲು ಬೇಡಿಕೆ ಬಂದಿದೆ. ಈ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳು ಸರಾಗವಾಗಿ ರನ್ ಕಲೆಹಾಕಲು ಕಡಿವಾಣ ಹಾಕುತ್ತಾರೆ.

ಸಚಿನ್ ಈ ವಿಚಾರದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಲಿಲ್ಲ. ಆದರೆ, ಆಫ್ ಸ್ಪಿನ್ನರ್‌ ಆಗಿ ಲೆಗ್‌ ಬ್ರೇಕ್‌ನತ್ತ ಗಮನ ಹರಿಸಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ಇದು ಅನ್ವಯವಾಗಬಹುದು. ಈ ರೀತಿಯ ಬೌಲಿಂಗ್ ಶೈಲಿ ಸಾಕಷ್ಟು ನೆರವಾಗುತ್ತದೆ. ಇದೊಂದು ರೀತಿ ಎರಡು ಮೂರು ಭಾಷೆಗಳನ್ನು ತಿಳಿದಿರುವಂತೆ. ಐದು ಅಥವಾ ಆರು ಭಾಷೆಯನ್ನು ಕಲಿಯುವುದರಲ್ಲಿ ಯಾವ ತಪ್ಪೂ ಇಲ್ಲ. ಅದು ನಿಮ್ಮಿಂದ ಏನನ್ನೂ ಕಸಿದುಕೊಳ್ಳುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಸಚಿನ್ ಹೇಳಿದ್ದಾರೆ.

ಬೌಲರ್‌ ಒಬ್ಬ ಹೆಚ್ಚು ವೈವಿಧ್ಯವನ್ನು ಬೆಳೆಸಿಕೊಂಡಾಗ ಬ್ಯಾಟ್ಸ್‌ಮನ್‌ಗಳ ಮೇಲೆ ನಿಯಂತ್ರಣ ಹೊಂದಲು ಸಾಧ್ಯ. ಎಲ್ಲ ಸ್ಪಿನ್ನರ್‌ಗಳೂ ಇದೇ ದಾರಿಯನ್ನು ಅನುಸರಿಸುತ್ತಾರೆ ಎನ್ನುವುದು ಸರಿಯಲ್ಲ. ರಿಸ್ಟ್ ಸ್ಪಿನ್ನರ್‌ಗಳು ಲೆಗ್‌ ಸ್ಪಿನ್ನರ್‌ಗಳಾಗುತ್ತಿಲ್ಲ. ಬದಲಾಗಿ, ಅವರು ಒಂದು ಎಸೆತ ವಿಭಿನ್ನವಾಗಬೇಕೆಂದು ಹೆಚ್ಚುವರಿ ಪ್ರಯತ್ನ ಹಾಕುತ್ತಾರೆ. ಆಫ್‌ ಸ್ಪಿನ್ನರ್‌ಗಳು ಲೆಗ್‌ ಸ್ಪಿನ್ ಮಾಡಲಾರರು ಎನ್ನುವುದು ತಪ್ಪು. ಲೆಗ್‌ ಬ್ರೇಕ್‌ ಎನ್ನುವುದು ಶಸ್ತ್ರಾಗಾರದಲ್ಲಿನ ಒಂದು ಶಸ್ತ್ರದಂತೆ ಎಂದಿದ್ದಾರೆ.

ಶಾರ್ಜಾ ನೆನಪು
ತಮ್ಮ ಕ್ರಿಕೆಟ್ ಪಯಣದಲ್ಲಿ ಶ್ರೇಷ್ಠವಾದ ಗಳಿಗೆಯನ್ನು ನೆನಪಿಸಿಕೊಳ್ಳುವಾಗ ಎರಡು ದಶಕಗಳ ಹಿಂದೆ ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡು ಫೈನಲ್‌ಗಳನ್ನು ಸಚಿನ್ ಹೆಸರಿಸುತ್ತಾರೆ. ಎರಡೂ ಪಂದ್ಯಗಳಲ್ಲಿ ಶತಕಗಳಿಸಿದ್ದ ಸಚಿನ್, ತಂಡ ಟ್ರೋಫಿ್ ಎತ್ತಿಹಿಡಿಯಲು ನೆರವಾಗಿದ್ದರು. ಇದು ನನ್ನ ವೃತ್ತಿ ಬದುಕಿನ ಅದ್ಭುತ ಗಳಿಗೆಗಳು. ಈ ಅನುಭವ ಹೊಂದಲು ಅದೃಷ್ಟಮಾಡಿದ್ದೆ ಎನ್ನುವ ಸಚಿನ್, ಶಾರ್ಜಾದ ಎರಡು ಪಂದ್ಯಗಳು ಈಗಲೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಹೇಳಿದ್ದಾರೆ.

Story first published: Tuesday, April 24, 2018, 16:22 [IST]
Other articles published on Apr 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X