ಶಾಹಿದ್ ಅಫ್ರಿದಿ ಪ್ರಕಟಿಸಿದ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಏಕೈಕ ಭಾರತೀಯ!

ಪಾಕಿಸ್ತಾನದ ಮಾಜಿ ಸ್ಪೋಟಕ ಆಟಗಾರ ಮತ್ತು ಸ್ಪಿನ್ ಬೌಲರ್ ಆಗಿ ಮಿಂಚಿದ್ದ ಶಾಹಿದ್ ಅಫ್ರಿದಿ ಮತ್ತೆ ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಡು ಸುದ್ದಿಯನ್ನು ಮಾಡತ್ತಿದ್ದಾರೆ. ಸದ್ಯ ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳಿರುವ ಶಾಹಿದ್ ಅಫ್ರಿದಿ ಕೆಲ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹುದ್ ಅಫ್ರಿದಿ ತಮ್ಮ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಪ್ರಕಟಿಸಿದ್ದಾರೆ. ಅಫ್ರಿದಿ ಪ್ರಕಟಿಸಿರುವ ಈ ತಂಡದಲ್ಲಿ ಕೆಲ ಅಚ್ಚರಿಗಳಿದ್ದು ಟೀಮ್ ಇಂಡಿಯಾದಿಂದ ಕೇವಲ ಓರ್ವ ಆಟಗಾರ ಮಾತ್ರವೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಶಾಹಿದ್ ಅಫ್ರಿದಿ ಪ್ರಕಟಿಸಿರುವ ತಂಡದಲ್ಲ ಯಾವೆಲ್ಲಾ ಆಟಗಾರರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸಾರ್ವಕಾಲಿಕ ತಂಡ ಹೇಗಿದೆ ಮುಂದೆ ಓದಿ.

ಪಾಕ್‌ ಮತ್ತು ಆಸಿಸ್ ಆಟಗಾರರೇ ಹೆಚ್ಚು

ಪಾಕ್‌ ಮತ್ತು ಆಸಿಸ್ ಆಟಗಾರರೇ ಹೆಚ್ಚು

ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಪ್ರಕಟಿಸಿರುವ ಈ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡದಲ್ಲಿ ಪಾಕಿಸ್ತಾನದ ಆಟಗಾರರಿಗೆ ಹೆಚ್ಚಿನ ಮನ್ನಣೆ ನೀಡಿದ್ದಾರೆ. ಜೊತೆಗೆ ಆಸಿಸ್‌ನ ಆಟಗಾರರು ಕೂಡ ಈ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಕ್‌ನ ಐವರು ಆಟಗಾರರು

ಪಾಕ್‌ನ ಐವರು ಆಟಗಾರರು

ಪಾಕಿಸ್ತಾನ ಕ್ರಿಕೆಟ್‌ನ ಐವರು ಆಟಗಾರರಿಗೆ ಈ ಸಾರ್ವಕಾಲಿಕ ತಂಡದಲ್ಲಿ ಅವಕಾಶವನ್ನು ನೀಡಿ ಶಾಹಿದ್ ಅಫ್ರಿದಿ ತನ್ನ ದೇಶಕ್ಕೆ ಧಾರಾಳತನ ತೋರಿಸಿದ್ದಾರೆ. ಆರಂಭಿಕ ಆಟಗಾರರಿಂದ ಹಿಡಿದು ಅಂತಿಮ ಕ್ರಮಾಂಕದವರೆಗೂ ಪಾಕ್ ಆಟಗಾರರೇ ಪ್ರಾಬಲ್ಯವಿರುವಂತೆ ಈ ಸಾರ್ವಕಾಲಿಕ ತಂಡವನ್ನು ಅಫ್ರಿದಿ ಹೆಸರಿಸಿದ್ದಾರೆ.

ನಾಲ್ಕೇ ರಾಷ್ಟ್ರಗಳಿಂದ ಆಟಗಾರರು

ನಾಲ್ಕೇ ರಾಷ್ಟ್ರಗಳಿಂದ ಆಟಗಾರರು

ಶಾಹಿದ್ ಅಫ್ರಿದಿ ಪ್ರಕಟಿಸಿರುವ ಈ ತಂಡ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ. ಕೇವಲ ನಾಲ್ಕು ರಾಷ್ಟ್ರಗಳ ಆಟಗಾರರನ್ನು ಮಾತ್ರವೇ ಅಫ್ರಿದಿ ಗಣನೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಐವರು ಮತ್ತು ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಈ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇನ್ನುಳಿದ ಇಬ್ಬರು ಆಟಗಾರರಲ್ಲಿ ಓರ್ವ ಭಾರತೀಯ ಆಟಗಾರ ಮತ್ತು ದಕ್ಷಿಣ ಆಫ್ರಿಕಾದ ಆಟಗಾರನನ್ನು ಹೆಸರಿಸಿದ್ದಾರೆ.

ಟೀಮ್ ಇಂಡಿಯಾದಿಂದ ಸಚಿನ್

ಟೀಮ್ ಇಂಡಿಯಾದಿಂದ ಸಚಿನ್

ಶಾಹಿದ್ ಅಫ್ರಿದಿ ಹೆಸರಿಸಿರುವ ಈ ತಂಡದಲ್ಲಿ ಟೀಮ್ ಇಂಡಿಯಾದ ಸಚಿನ್ ತೆಂಡೂಲ್ಕರ್ ಅವರನ್ನು ಮಾತ್ರವೇ ಪರಿಗಣಿಸಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಆಲ್‌ರೌಂಡರ್ ಜ್ಯಾಕ್ ಕ್ಯಾಲೀಸ್ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡ ಆಟಗಾರ.

ಪಾಕ್‌ನ ಆಟಗಾರರು

ಪಾಕ್‌ನ ಆಟಗಾರರು

ಆರಂಭಿಕ ಆಟಗಾರ ಸಯೀದ್ ಅನ್ವರ್, ಪಾಕ್ ಮಾಜಿ ನಾಯಕ ಇನ್ಜಮಾಮ್ ಉಲ್‌ಹಕ್, ವಿಕೆಟ್ ಕೀಪರ್ ಆಗಿ ರಶೀದ್ ಲತೀಫ್ ವೇಗಿ ವಾಸಿಂ ಅಕ್ರಮ್ ಮತ್ತು ಇನ್ನೋರ್ವ ವೇಗಿ ಶೋಯೇಬ್ ಅಖ್ತರ್ ಶಾಹಿದ್ ಅಫ್ರಿದಿ ತಂಡದಲ್ಲಿ ಸ್ಥಾನ ಪಡೆದುಕೊಂಡ ಪಾಕಿಸ್ತಾನದ ಆಟಗಾರರು.

ಆಸ್ಟ್ರೇಲಿಯಾ ಆಟಗಾರರು

ಆಸ್ಟ್ರೇಲಿಯಾ ಆಟಗಾರರು

ಆರಂಭಿಕ ಆಟಗಾರನಾಗಿ ಆಡಮ್ ಗಿಲ್‌ಕ್ರಿಸ್ಟ್, ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ವೇಗಿ ಗ್ಲೆನ್ ಮೆಕ್‌ಗ್ರಾಥ್ ಮತ್ತು ಸ್ಪಿನ್ ದಿಗ್ಗಜ ಶೇನ್ ವಾರ್ನ್ ಈ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿರುವ ಆಸ್ಟ್ರೇಲಿಯದ ಆಟಗಾರರಾಗಿದ್ದಾರೆ.

ಅಫ್ರಿದಿ ಆಲ್ ಟೈಮ್ ಇಲೆವೆನ್ ಹೀಗಿದೆ

ಅಫ್ರಿದಿ ಆಲ್ ಟೈಮ್ ಇಲೆವೆನ್ ಹೀಗಿದೆ

ಸಯೀದ್ ಅನ್ವರ್, ಆಡಮ್ ಗಿಲ್‌ಕ್ರಿಸ್ಟ್, ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಇಂಜಮಾಮ್ ಉಲ್ ಹಕ್, ಜಾಕ್ ಕಾಲಿಸ್, ರಶೀದ್ ಲತೀಫ್ (ವಿಕೆಟ್ ಕೀಪರ್) ವಸೀಂ ಅಕ್ರಮ್, ಶೇನ್ ವಾರ್ನ್, ಗ್ಲೆನ್ ಮೆಗ್ರಾತ್, ಶೋಯೆಬ್ ಅಖ್ತರ್.

For Quick Alerts
ALLOW NOTIFICATIONS
For Daily Alerts
Story first published: Wednesday, April 8, 2020, 17:17 [IST]
Other articles published on Apr 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X