ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್, ವಾರ್ನರ್‌ನಿಂದಾಗಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲಿದೆ: ಶೇನ್ ವಾರ್ನ್

Shane Warne says Australia can win World Cup with Smith and Warner

ಸಿಡ್ನಿ, ಮಾರ್ಚ್ 6: ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧಿಸಲ್ಪಟ್ಟಿರುವ ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ತಂಡವನ್ನು ಮರಳಿ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಜಯಿಸಲಿದೆ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಸಾಧನೆ ಸಾಲಿಗೆ ರವೀಂದ್ರ ಜಡೇಜಾ!ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಸಾಧನೆ ಸಾಲಿಗೆ ರವೀಂದ್ರ ಜಡೇಜಾ!

ಆಸ್ಟ್ರೇಲಿಯಾ ತಂಡದಲ್ಲಿ ಆಕರ್ಷಣೀಯ ಆಟಗಾರನಾಗಿ ಮಿಂಚಿದ್ದ ಸ್ಪಿನ್ ದಿಗ್ಗಜ ಶೇನ್ ಕೂಡ 2003ರಲ್ಲಿ ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಿದ್ದರು. ನಿಷೇಧಿತ ಮೂತ್ರವರ್ಧಕ ಔಷಧಿ (Diuretic drugs) ಸೇವಿಸಿ ಸಿಕ್ಕಿಬಿದ್ದಿದ್ದರಿಂದ ವಾರ್ನ್‌ಗೆ ನಿಷೇಧ ಶಿಕ್ಷೆ ವಿಧಿಸಲಾಗಿತ್ತು.

ಆಸ್ಟ್ರೇಲಿಯಾ ತಂಡವನ್ನು ಮರಳಿ ಸೇರಿಕೊಳ್ಳಲಿರುವ ಇಬ್ಬರೂ ಆಟಗಾರರು ಕ್ರೀಡಾರಂಗದಲ್ಲಿ ಮತ್ತೆ ಮಿಂಚಲಿದ್ದಾರೆ ಎನ್ನುತ್ತ ವಾರ್ನ್, 'ಕೊಂಚ ಕಾಲ ಮೈದಾನದಿಂದ ದೂರ ಉಳಿದಿದ್ದವರು ಮತ್ತೆ ಮೈದಾನಕ್ಕಿಳಿಯುವಾಗ ಅವರಲ್ಲಿ ಹೊಸತನವಿರುತ್ತದೆ. ಕ್ರಿಕೆಟ್ ಬಗ್ಗೆ ಹಸಿವಿರುತ್ತದೆ. ಅಲ್ಲದೆ ಕ್ರಿಕೆಟ್ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದು ಅವರಿಗಾಗ ಅರಿವಾಗಿರುತ್ತದೆ. ಹೀಗಾಗಿ ಈ ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲಿದೆ. ಎಂದು ವಾರ್ನ್ ವಿವರಿಸಿದ್ದಾರೆ.

ಇದು ಕೇವಲ ನಂಬರ್ ಅಷ್ಟೇ: 40ನೇ ಏಕದಿನ ಶತಕಕ್ಕೆ ಕೊಹ್ಲಿ ಪ್ರತಿಕ್ರಿಯೆಇದು ಕೇವಲ ನಂಬರ್ ಅಷ್ಟೇ: 40ನೇ ಏಕದಿನ ಶತಕಕ್ಕೆ ಕೊಹ್ಲಿ ಪ್ರತಿಕ್ರಿಯೆ

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಆತಿಥೇಯ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪದಲ್ಲಿ ಪಾಲ್ಗೊಂಡ ಆರೋಪದಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಕಳೆದ ಮಾರ್ಚ್ 28ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಐಸಿಸಿ ನಿಷೇಧಿಸಿತ್ತು.

Story first published: Wednesday, March 6, 2019, 13:26 [IST]
Other articles published on Mar 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X