ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ vs ನ್ಯೂಜಿಲೆಂಡ್: 2ನೇ ಪಂದ್ಯ ಸೋತ ಪಾಕ್ ಪಡೆಗೆ ಚಾಟಿ ಬೀಸಿದ ಶೋಯೆಬ್ ಅಖ್ತರ್

Shoaib Akhtar criticises Pakistan batting after defeat in 2nd ODI against New Zealand

ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯವಾಗಿ ಸೋಲು ಅನುಭವಿಸಿದೆ. ನ್ಯೂಜಿಲೆಂಡ್ ತಂಡ ಸವಾಲಿನ ಗುರಿ ನಿಗದಿಪಡಿಸಿದ್ದರು ಕೂಡ ಪಾಕಿಸ್ತಾನ ತಂಡ ಬ್ಯಾಟಿಂಗ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಕಾರಣ 79 ರನ್‌ಗಳ ದೊಡ್ಡ ಅಂತರದ ಸೋಲು ಅನುಭವಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ ಈಗ ಸಮಬಲದಲ್ಲಿದೆ.

ಈ ಸೋಲಿನ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.ಪಾಕ್ ಪಡೆಯ ಬ್ಯಾಟಿಂಗ್ ಪ್ರದರ್ಶನವನ್ನು ಉದ್ದೇಶಿಸಿ ಶೋಯೆಬ್ ಅಖ್ತರ್ ಮಾಡಿರುವ ಟ್ವೀಟ್ ಅವರ ಹತಾಶೆಯನ್ನು ವ್ಯಕ್ತಪಡಿಸುತ್ತಿದೆ. ಟ್ವಿಟ್ಟರ್‌ನಲ್ಲಿ ಶೋಯೆಬ್ ಅಖ್ತರ್ "*yawwnnn* Zzzzz," ಎಂದು ಬರೆದುಕೊಂಡಿದ್ದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಭಾರತ vs ಶ್ರೀಲಂಕಾ 2ನೇ ಏಕದಿನ ಪಂದ್ಯ: ಟಾಸ್ ರಿಪೋರ್ಟ್, Live ಸ್ಕೋರ್ ಹಾಗೂ ಆಡುವ ಬಳಗಭಾರತ vs ಶ್ರೀಲಂಕಾ 2ನೇ ಏಕದಿನ ಪಂದ್ಯ: ಟಾಸ್ ರಿಪೋರ್ಟ್, Live ಸ್ಕೋರ್ ಹಾಗೂ ಆಡುವ ಬಳಗ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ ಡೆವೋನ್ ಕಾನ್ವೆ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಜೋಡಿ ಅದ್ಭುತ ಪ್ರದರ್ಶನ ನೀಡುವ ಮೂಲಕ ನಿರ್ಣಾಯಕ ಪಾತ್ರವಹಿಸಿದರು. ನ್ಯೂಜಿಲೆಂಡ್ ತಂಡ 2 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಬಳಿಕ ಜೊತೆಯಾದ ಈ ಜೋಡಿ ಬರೊಬ್ಬರಿ 181 ರನ್‌ಗಳ ಜೊತೆಯಾಟವನ್ನು ನೀಡಿದೆ. ಇದರಲ್ಲಿ ಡೆವೋನ್ ಕಾನ್ವೆ 101 ರನ್‌ಗಳಿಸಿ ಶತಕದ ಸಾಧನೆ ಮಾಡಿದ್ದಾರೆ. ನಾಯಕ ವಿಲಿಯಮ್ಸನ್ ಅವರಿಂದ 85 ರನ್‌ಗಳ ಕೊಡುಗೆ ಬಂದಿದೆ.

ಉಳಿದಂತೆ ಕಿವೀಸ್ ದಾಂಡಿಗರ ಪರವಾಗಿ ಸ್ಯಾಂಟ್ನರ್ ಮಾತ್ರವೇ 37 ರನ್‌ಗಳ ಕೊಡುಗೆ ನೀಡುವ ಮೂಲಕ ಮಿಂಚಿದರು. ಇತರ ಎಲ್ಲಾ ಬ್ಯಾಟರ್‌ಗಳು ಕೂಡ ಒಂದಂಕಿಗೆ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದ್ದಾರೆ. 49.5 ಓವರ್‌ಗಳಲ್ಲಿ ಕಿವೀಸ್ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 261 ರನ್‌ಗಳಸಿತು.

ಇದನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಆರಂಬದಿಂದಲೇ ಕುಸಿತ ಕಾಣುತ್ತಾ ಸಾಗಿತ್ತು. ಪಾಕ್ ಪರವಾಗಿ ನಾಯಕ ಬಾಬರ್ ಅಜಂ ಮಾತ್ರವೇ ಏಕಾಂಗಿ ಹೋರಾಟ ನಡೆಸಿದರು. ಬಾಬರ್ ಅಜಂ 79 ರನ್‌ ಗಳಿಸಿ ವಿಕೆಟ್ ಕಳೆದುಕೊಂಡು. ಅಂತಿಮವಾಗಿ ಪಾಕಿಸ್ತಾನ 43 ಓವರ್‌ಗಳಲ್ಲಿ 182 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಶರಣಾಗಿದೆ. ಹೀಗಾಗಿ ಪಾಕಿಸ್ತಾನ ತಂಡ ಈ ಪಂದ್ಯವನ್ನು 79 ರನ್‌ಗಳ ದೊಡ್ಡ ಅಂತರದಿಂದ ಶರಣಾಗಿದೆ.

IND vs SL: ವಿರಾಟ್ ಕೊಹ್ಲಿ ಟೀಕಾಕಾರರಿಗೆ ಬಿಸಿ ಮುಟ್ಟಿಸಿದ ಪಾಕ್ ಮಾಜಿ ಕ್ರಿಕೆಟಿಗIND vs SL: ವಿರಾಟ್ ಕೊಹ್ಲಿ ಟೀಕಾಕಾರರಿಗೆ ಬಿಸಿ ಮುಟ್ಟಿಸಿದ ಪಾಕ್ ಮಾಜಿ ಕ್ರಿಕೆಟಿಗ

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಹ್ಯಾರಿಸ್ ಸೊಹೈಲ್, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್,
ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್
ಬೆಂಚ್: ಶಾನ್ ಮಸೂದ್, ಶಹನವಾಜ್ ದಹಾನಿ, ಮೊಹಮ್ಮದ್ ಹಸ್ನೈನ್, ತಯ್ಯಬ್ ತಾಹಿರ್, ಕಮ್ರಾನ್ ಗುಲಾಮ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗುಸನ್
ಬೆಂಚ್: ಹೆನ್ರಿ ಶಿಪ್ಲಿ, ಡೌಗ್ ಬ್ರೇಸ್ವೆಲ್, ಹೆನ್ರಿ ನಿಕೋಲ್ಸ್, ಬ್ಲೇರ್ ಟಿಕ್ನರ್

Story first published: Thursday, January 12, 2023, 13:49 [IST]
Other articles published on Jan 12, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X