ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೇಯಸ್ ಐಯ್ಯರ್ ಐತಿಹಾಸಿಕ ಸಾಧನೆ: ಬೆರಗು ಮೂಡಿಸುವ ಅಂಕಿಅಂಶಗಳು!

Shreyas Iyer sensational ODI Form continues, created history in New Zealand soil

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರೂ ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದ ಕಾರಣದಿಂದಾಗಿ 7 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಮೂವರು ಆಟಗಾರರಾದ ಶಿಖರ್ ಧವನ್, ಶುಬ್ಮನ್ ಗಿಲ್ ಹಾಗೂ ಶ್ರೇಯಸ್ ಐಯ್ಯರ್ ಅರ್ಧ ಶತಕ ಸಿಡಿಸಿ ಮಿಂಚಿದರು.

ಇನ್ನು ಟೀಮ್ ಇಂಡಿಯಾದ ಆಟಗಾರ ಶ್ರೇಯಸ್ ಐಯ್ಯರ್ ಏಕದಿನ ಮಾದರಿಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ. ಟಿ20 ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ದರೂ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಐಯ್ಯರ್ ಏಕದಿನ ಮಾದರಿಯಲ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಅದರಲ್ಲೂ ನ್ಯೂಜಿಲೆಂಡ್ ತನ್ನ ನೆಚ್ಚಿನ ತಾಣ ಎಂಬುದನ್ನು ಮತ್ತೆ ಸಾರಿದ್ದಾರೆ.

ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?

ಈ ಹಿಂದಿನ ಕಿವೀಸ್ ಪ್ರವಾಸದಲ್ಲಿ ಅಬ್ಬರಿಸಿದ್ದ ಐಯ್ಯರ್

ಈ ಹಿಂದಿನ ಕಿವೀಸ್ ಪ್ರವಾಸದಲ್ಲಿ ಅಬ್ಬರಿಸಿದ್ದ ಐಯ್ಯರ್

ಟೀಮ್ ಇಂಡಿಯಾ ಈ ಹಿಂದೆ 2020ರಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಏಕದಿನ ಸರಣಿಯಲ್ಲಿ ಆಡಿತ್ತು. ಈ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ ಅಮೋಗ ಪ್ರದರ್ಶನ ನೀಡಿ ರನ್ ಮಳೆ ಹರಿಸುವಲ್ಲಿ ಯಶಸ್ವಿಯಾಗಿದ್ದರು. ಅಂದು ನಡದ ಮೂರು ಪಂದ್ಯಗಳ ಸರಣಿಯಲ್ಲಿ ಶ್ರೇಯಸ್ ಐಯ್ಯರ್ ಕ್ರಮವಾಗಿ 103, 52, 62 ರನ್‌ಗಳನ್ನು ಗಳಿಸಿ ಮಿಂಚಿದ್ದರು. ಈ ಬಾರಿಯೂ ತಮ್ಮ ಫಾರ್ಮ್ ಮುಂದುವರಿಸಿರುವ ಐಯ್ಯರ್ ಮೊದಲ ಪಂದ್ಯದಲ್ಲಿಯೇ 80 ರನ್‌ಗಳನ್ನು ಗಳಿಸಿ ಮಿಂಚಿದ್ದಾರೆ.

ಚಾಮಿಕಾ ಕರುಣಾರತ್ನೆಗೆ ಒಂದು ವರ್ಷ ಅಮಾನತು ಶಿಕ್ಷೆ ನೀಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಮೊದಲ ಪಂದ್ಯದಲ್ಲಿ ಐಯ್ಯರ್ ಮಿಂಚು

ಮೊದಲ ಪಂದ್ಯದಲ್ಲಿ ಐಯ್ಯರ್ ಮಿಂಚು

ಏಕದಿನ ಮಾದರಿಯಲ್ಲಿ ಶ್ರೇಯಸ್ ಐಯ್ಯರ್ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಕಿವೀಸ್ ವಿರುದ್ಧ ಆಕ್ಲೆಂಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿಯೂ ಮಿಂಚಿದ ಶ್ರೇಯಸ್ ಐಯ್ಯರ್ 76 ಎಸೆತಗಳಲ್ಲಿ 80 ರನ್‌ಗಳಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದಾರೆ. ಈ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಟೀಮ್ ಇಂಡಿಯಾ 306 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಶುಬ್ಮನ್ ಗಿಲ್ ಕೂಡ ಈ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದ್ದಾರೆ.

ಸತತ 4 ಪಂದ್ಯಗಳಲ್ಲಿ 50+ ರನ್‌ಗಳಿಸಿ ಐತಿಹಾಸಿಕ ಸಾಧನೆ

ಸತತ 4 ಪಂದ್ಯಗಳಲ್ಲಿ 50+ ರನ್‌ಗಳಿಸಿ ಐತಿಹಾಸಿಕ ಸಾಧನೆ

ನ್ಯೂಜಿಲೆಂಡ್ ನೆಲದಲ್ಲಿ ಶ್ರೇಯಸ್ ಐಯ್ಯರ್ ಸತತ ನಾಲ್ಕು ಅರ್ಧ ಶತಕ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕಿವೀಸ್ ನಾಡಿನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ. ಇನ್ನು ಒಟ್ಟಾರೆಯಾಗಿ ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಈ ವಿಶೇಷ ಸಾಧನೆ ಮಾಡಿದ್ದರು.

ಆತ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಬೇಕೆಂದರೆ ಕೊಡುವಷ್ಟು ಹಣ ನಮ್ಮ ಬಳಿ ಇಲ್ಲ ಎಂದ ಮ್ಯಾಕ್ಸ್‌ವೆಲ್‌

ಕಳೆದ 8 ಇನ್ನಿಂಗ್ಸ್‌ನಲ್ಲಿ 5 ಅರ್ಧ ಶತಕ ಒಂದು ಶತಕ

ಕಳೆದ 8 ಇನ್ನಿಂಗ್ಸ್‌ನಲ್ಲಿ 5 ಅರ್ಧ ಶತಕ ಒಂದು ಶತಕ

ಶ್ರೇಯಸ್ ಐಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ಸದ್ಯ ಎಂಥಾ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಎಂಬುದಕ್ಕೆ ಅವರು ಕಳೆದ 8 ಇನ್ನಿಂಗ್ಸ್‌ಗಳಲ್ಲಿ ನೀಡಿರುವ ಪ್ರದರ್ಶನವೇ ಸಾಕ್ಷಿಯಾಗಿದೆ. ಕಳೆದ 8 ಇನ್ನಿಂಗ್ಸ್‌ನಲ್ಲಿ ಅವರು ಗಳಿಸಿರುವ ರನ್ ಬರೊಬ್ಬರಿ 512. ಇದರಲ್ಲಿ 5 ಅರ್ಧ ಶತಕ ಗಳಿಸಿದ್ದು ಒಂದು ಶತಕದ ಸಾಧನೆ ಮಾಡಿದ್ದಾರೆ. ಅವರ ಕಳೆದ 8 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ ಮೊತ್ತ ಹೀಗಿದೆ: 80, 54, 63, 44, 50, 113, 28, 80. ಈ ಅದ್ಭುತ ಅಂಕಿಅಂಶಗಳು ಶ್ರೇಯಸ್ ಐಯ್ಯರ್ ಅವರ ಅದ್ಭುತ ಫಾರ್ಮ್‌ಗೆ ಸಾಕ್ಷಿಯಾಗಿದೆ.

Story first published: Friday, November 25, 2022, 18:56 [IST]
Other articles published on Nov 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X