ಆತ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಬೇಕೆಂದರೆ ಕೊಡುವಷ್ಟು ಹಣ ನಮ್ಮ ಬಳಿ ಇಲ್ಲ ಎಂದ ಮ್ಯಾಕ್ಸ್‌ವೆಲ್‌

ಸೂರ್ಯಕುಮಾರ್ ಯಾದವ್ ಸದ್ಯ ವಿಶ್ವ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ಆಟಗಾರ. ಸೂರ್ಯಕುಮಾರ್ ಆಡುವ ರೀತಿಯನ್ನು ಕಂಡು ದಿಗ್ಗಜ ಕ್ರಿಕೆಟಿಗರೇ ದಂಗಾಗಿದ್ದಾರೆ. ಆತನ ಆಟಕ್ಕೆ ಎಲ್ಲರೂ ಮನಸೋತಿದ್ದಾರೆ. ಯಾವುದೇ ಬೌಲರ್ ಆದರೂ ಸ್ವಲ್ಪವೂ ಅಂಜದೆ ಬ್ಯಾಟಿಂಗ್ ಮಾಡುವ ಸೂರ್ಯಕುಮಾರ್ ಬೌಲರ್ ಗಳ ಮೇಲೆ ಒತ್ತಡ ಹೇರುತ್ತಾರೆ.

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಮೂರನೇ ಸ್ಥಾನ ಪಡೆದರು. ಆರು ಪಂದ್ಯಗಳಲ್ಲಿ 189.68 ಸ್ಟ್ರೈಕ್‌ರೇಟ್‌ನಲ್ಲಿ 239 ರನ್ ಗಳಿಸಿದ್ದ ಅವರು, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ನೇಪಿಯರ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ ಅಜೇಯ 111 ರನ್ ಗಳಿಸಿದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್‌ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಆತನಿಗೆ ಇನ್ನೂ ಎಷ್ಟು ಅಂತ ಅವಕಾಶ ನೀಡುತ್ತೀರಾ? ಮ್ಯಾನೇಜ್‌ಮೆಂಟ್ ವಿರುದ್ಧ ಮಾಜಿ ಕ್ರಿಕೆಟಿಗನ ಪ್ರಶ್ನೆಆತನಿಗೆ ಇನ್ನೂ ಎಷ್ಟು ಅಂತ ಅವಕಾಶ ನೀಡುತ್ತೀರಾ? ಮ್ಯಾನೇಜ್‌ಮೆಂಟ್ ವಿರುದ್ಧ ಮಾಜಿ ಕ್ರಿಕೆಟಿಗನ ಪ್ರಶ್ನೆ

ಎರಡನೇ ಪಂದ್ಯದಲ್ಲಿ 13 ರನ್ ಗಳಿಸಿದ ಸೂರ್ಯ ಸರಣಿಯಲ್ಲಿ ಒಟ್ಟು124 ರನ್ ಕಲೆಹಾಕುವ ಮೂಲಕ 'ಪ್ಲೇಯರ್ ಆಫ್ ದಿ ಸಿರೀಸ್' ಪ್ರಶಸ್ತಿಯನ್ನು ಪಡೆದರು.

ಸ್ಕೋರ್ ಕಾರ್ಡ್ ನೋಡಿ ದಂಗಾದ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಸೂರ್ಯಕುಮಾರ್ ಯಾದವ್‌ರ ಬ್ಯಾಟಿಂಗ್‌ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಪಂದ್ಯ ನಡೆಯುತ್ತಿರುವ ಬಗ್ಗೆ ನನಗೆ ತಿಳಿದಿರಲಿಲ್ಲ, ಆದರೆ ನಂತರ ನಾನು ಸ್ಕೋರ್ ಕಾರ್ಡ್ ಅನ್ನು ನೋಡಿದೆ, ಅದರ ಚಿತ್ರವನ್ನು ಆರನ್ ಫಿಂಚ್‌ಗೆ ಕಳುಹಿಸಿದೆ. ಅಲ್ಲಿ ಏನು ನಡೆಯುತ್ತಿದೆ? ಆತ ಸಂಪೂರ್ಣವಾಗಿ ಬೇರೆ ಗ್ರಹದವರಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ! ಬೇರೆ ಆಟಗಾರರು ಗಳಿಸಿರುವ ರನ್‌ಗಳನ್ನು ನೋಡಿ, 51 ಎಸೆತಗಳಲ್ಲಿ 111 ರನ್ ಗಳಿಸಿದ್ದಾರೆ" ಎಂದು ಹೇಳಿದ್ದಾರೆ.

"ಮರುದಿನ ನಾನು ಆ ಪಂದ್ಯದ ಮರುಪ್ರಸಾರವನ್ನು ವೀಕ್ಷಿಸಿದೆ. ಆತ ಎಲ್ಲರಿಗಿಂತ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾನೆ. ನನಗೆ ಗೊತ್ತಿರುವ ಯಾವೊಬ್ಬ ಆಟಗಾರರು ಕೂಡ ಆತನಂತೆ ಬ್ಯಾಟಿಂಗ್ ಮಾಡುವುದಿಲ್ಲ" ಎಂದು ಹೇಳಿದರು.

ಸೂರ್ಯಕುಮಾರ್ ಯಾದವ್ ಬಿಗ್ ಬ್ಯಾಷ್ ಆಡುವ ಬಗ್ಗೆ ಪ್ರತಿಕ್ರಿಯೆ

ಭವಿಷ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಿಗ್ ಬ್ಯಾಷ್‌ನಲ್ಲಿ ಆಡುವ ಒಪ್ಪಂದವನ್ನು ಪಡೆಯಬಹುದೇ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಮ್ಯಾಕ್ಸ್‌ವೆಲ್, "ಅಂತಹ ಯಾವ ಅವಕಾಶವೂ ಇಲ್ಲ, ನಮ್ಮಲ್ಲಿ ಆತನಿಗೆ ನೀಡುವಷ್ಟು ಹಣವಿಲ್ಲ. ನಾವು ಪ್ರತಿಯೊಬ್ಬ ಆಟಗಾರನನ್ನು ವಜಾಗೊಳಿಸಬೇಕು, ಆಸ್ಟ್ರೇಲಿಯಾ ಪ್ರತಿಯೊಬ್ಬ ಆಟಗಾರನನ್ನು ವಜಾಗೊಳಿಸಿದರೆ ಬಹುಶಃ ಸೂರ್ಯಕುಮಾರ್ ಯಾದವ್‌ಗೆ ನೀಡುವಷ್ಟು ಹಣ ಸಿಗಬಹುದು" ಎಂದು ತಮಾಷೆಯಾಗಿ ಉತ್ತರ ನೀಡಿದ್ದಾರೆ.

ಮೊಣಕಾಲು ಗಾಯಕ್ಕೆ ತುತ್ತಾಗಿರುವ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ ಆರಂಭವಾಗುವ ವೇಳೆಗೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ವಿಶ್ವಾಸವಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, November 23, 2022, 19:51 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X