ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ಪಂಜಾಬ್‌ ಬ್ಯಾಟ್ಸ್‌ಮನ್ ಶುಬ್‌ಮಾನ್‌ ಗಿಲ್‌ಗೆ ಭಾರೀ ದಂಡ!

Shubman Gill docked full match fee after altercation with umpire

ನವದೆಹಲಿ, ಜನವರಿ 9: ಪಂಜಾಬ್‌ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಶುಬ್‌ಮಾನ್‌ ಗಿಲ್‌ಗೆ ಪಂದ್ಯದ ಸಂಭಾವನೆಯ ಶೇಕಡಾ 100ರಷ್ಟು ದಂಡ ವಿಧಿಸಲಾಗಿದೆ. ರಣಜಿ ಟ್ರೋಫಿಯಲ್ಲಿ ದೆಹಲಿ ವಿರುದ್ಧದ ಪಂದ್ಯದ ವೇಳೆ ಅಂಪೈರ್ ತೀರ್ಪಿಗೆ ಅಗೌರವ ತೋರಿದ್ದಕ್ಕಾಗಿ ಗಿಲ್‌ಗೆ ಫೈನ್ ಹಾಕಲಾಗಿದೆ.

T20 ವಿಶ್ವಕಪ್: ಭಾರತದ ''ಅಚ್ಚರಿಯT20 ವಿಶ್ವಕಪ್: ಭಾರತದ ''ಅಚ್ಚರಿಯ" ಬೌಲರ್ ಹೆಸರಿಸಿದ ಕೊಹ್ಲಿ

ಮೊಹಾಲಿಯಲ್ಲಿ ಜನವರಿ 3ರಿಂದ 6ರ ವರೆಗೆ ನಡೆದಿದ್ದ ರಣಜಿ ಟ್ರೋಫಿ ಎಲೈಟ್ ಗ್ರೂಪ್ 'ಎ' ಮತ್ತು 'ಬಿ' ರೌಂಡ್‌ 4 ಪಂದ್ಯಕ್ಕಾಗಿ ಪಂಜಾಬ್-ಡೆಲ್ಲಿ ತಂಡಗಳು ಮೈದಾನಕ್ಕಿಳಿದಿದ್ದವು. ಈ ವೇಳೆ ಸುಬೋಧ್ ಭಾಟಿ ಓವರ್‌ನಲ್ಲಿ ಗಿಲ್ ಔಟಾಗಿದ್ದರು. ಅಂಪೈರ್‌ ಮೊಹಮ್ಮದ್ ರಫೀ ಇದಕ್ಕೆ ಔಟ್ ತೀರ್ಪು ಕೂಡ ನೀಡಿದ್ದರು.

ಲಕ್ಷ್ಮಣ್‌ ನೆಚ್ಚಿನ ಭಾರತ ಟಿ20 ವಿಶ್ವಕಪ್‌ ತಂಡದಲ್ಲಿ ಧೋನಿ, ಧವನ್‌ ಇಲ್ಲ!ಲಕ್ಷ್ಮಣ್‌ ನೆಚ್ಚಿನ ಭಾರತ ಟಿ20 ವಿಶ್ವಕಪ್‌ ತಂಡದಲ್ಲಿ ಧೋನಿ, ಧವನ್‌ ಇಲ್ಲ!

ಆದರೆ ಸದ್ಯ ಭಾರತ 'ಎ' ತಂಡದ ನಾಯಕರಾಗಿರುವ ಶುಬ್‌ಮಾನ್‌ ಗಿಲ್‌ಗೆ ಅಂಪೈರ್‌ ತೀರ್ಮಾನ ಸರಿ ಕಾಣಲಿಲ್ಲ. ಗಿಲ್ ಕ್ರೀಸ್‌ನಿಂದ ಕದಲಲಿಲ್ಲ. ಆ ಬಳಿಕ ಲೆಗ್ ಅಂಪೈರ್ ಪಶ್ಚಿಮ್ ಪಾಠಕ್ ಜೊತೆ ಚರ್ಚಿಸಿದ ರಫೀ ಔಟ್ ತೀರ್ಪನ್ನು ಬದಲಿಸಿ ಗಿಲ್‌ಗೆ ಆಡಲು ಅನುವು ಮಾಡಿಕೊಟ್ಟಿದ್ದರು.

ಟ್ರೈನರ್ ಮೇಲೆ ರೊಚ್ಚಿಗೆದ್ದ ಯುಜುವೇಂದ್ರ ಚಾಹಲ್ ದಾಳಿ!: ವಿಡಿಯೋಟ್ರೈನರ್ ಮೇಲೆ ರೊಚ್ಚಿಗೆದ್ದ ಯುಜುವೇಂದ್ರ ಚಾಹಲ್ ದಾಳಿ!: ವಿಡಿಯೋ

ಅಂಪೈರ್ ತೀರ್ಪು ಬದಲಿಸಿದ್ದರಿಂದ ಅಸಮಾಧಾನಗೊಂಡ ಧೃವ್ ಶೋರೆ ನಾಯಕತ್ವದ ಡೆಲ್ಲಿ ತಂಡ ಮೈದಾನದಿಂದ ಹೊರ ನಡೆಯಿತು. ಆ ಬಳಿಕ ಮ್ಯಾಚ್‌ ರೆಫರಿ ಪಿ ರಂಗನಾಥನ್ ಮಧ್ಯ ಪ್ರವೇಶಿಸಿ ಪಂದ್ಯವನ್ನು ಮರುಪ್ರಾರಂಭಿಸಿದ್ದರು. ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿತ್ತು.

ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!

'ಶುಬ್‌ಮಾನ್‌ ಗಿಲ್‌ಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸಲಾಗಿದೆ. ಮ್ಯಾಚ್ ರೆಫರಿ ಪಿ ರಂಗನಾಥನ್ ವಿಧಿಸಿರುವ ದಂಡವನ್ನು ಗಿಲ್ ಒಪ್ಪಿಕೊಂಡಿದ್ದಾರೆ,' ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ. ಮೈದಾನದಿಂದ ಹೊರ ನಡೆದಿದ್ದಕ್ಕಾಗಿ ಡೆಲ್ಲಿ ನಾಯಕ ದೃವ್ ಶೋರೆಗೂ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಲಾಗಿದೆ.

Story first published: Thursday, January 9, 2020, 11:32 [IST]
Other articles published on Jan 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X