ಐಪಿಎಲ್ ವೇಳಾಪಟ್ಟಿ ಮತ್ತು ಸ್ಥಳಗಳಲ್ಲಿ ಅಲ್ಪ ಬದಲಾವಣೆ

Posted By:
ಐಪಿಎಲ್ ವೇಳಾಪಟ್ಟಿ ಮತ್ತು ಸ್ಥಳಗಳಲ್ಲಿ ಬದಲಾವಣೆ | Filmibeat Kannada
Slight change in IPL schedule and venu

ಮುಂಬೈ, ಮಾರ್ಚ್ 20: ಐಪಿಎಲ್‌ ತಂಡ ಪಂಜಾಬ್‌ ಎಲೆವೆನ್ ನೀಡಿದ್ದ ಮನವಿಯನ್ನು ಪುರಸ್ಕರಿಸುವ ಐಪಿಎಲ್ ಆಡಳಿತ ಮಂಡಳಿ ಐಪಿಎಲ್ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ ಮಾಡಿದೆ.

ಕೆಲವು ಪಂದ್ಯಗಳ ವೇಳಾಪಟ್ಟಿ ಮತ್ತು ಕ್ರೀಡಾಂಗಣವನ್ನು ಮಾತ್ರವೇ ಬದಲಾವಣೆ ಮಾಡಿದ್ದು, ಹೊಸ ವೇಳಾಪಟ್ಟಿ ಪ್ರಕಾರ ಪಂಜಾಬ್‌ ತಂಡವು ನಾಲ್ಕು ಪಂದ್ಯಗಳನ್ನು ಇಂದೋರ್‌ನಲ್ಲಿ ಮತ್ತು ಮೂರು ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದೆ.

ಐಪಿಎಲ್ 2018: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ

ಎಲ್ಲಾ ಐಪಿಎಲ್ ತಂಡಗಳು ತಮ್ಮ ತವರು ನೆಲದಲ್ಲಿ ನಾಲ್ಕು ಪಂದ್ಯವನ್ನು ಆಡುವಂತೆ ವೇಳಾಪಟ್ಟಿ ರೂಪಿಸಲಾಗಿತ್ತು, ಆದರೆ ಸಂಚಾರ ಸಮಯ ಮತ್ತು ವೆಚ್ಚ ತಪ್ಪಿಸಲು ಈ ಭಾರಿ ಈ ಕೆಲವು ರಾಜಿ ಮಾಡಿಕೊಂಡಿದ್ದು, ಹೀಗಾಗಿ ದೆಹಲಿ ತಂಡವು ಈ ಋತುವಿನ ತನ್ನ ಮೊದಲ ಐಪಿಎಲ್‌ ಪಂದ್ಯವನ್ನು ಮೊಹಾಲಿಯಲ್ಲಿ ಆಡಲಿದೆ.

ಬದಲಾಗಿರುವ ವೇಳಾಪಟ್ಟಿ ಈ ಕೆಳಕಂಡಂತೆ ಇದೆ...

ಪಂದ್ಯ ಸಮಯ ದಿನಾಂಕ ಪಂದ್ಯ ಸ್ಥಳ
2 4pm 8th april ಪಂಜಾಬ್‌ v/s ದೆಹಲಿ ಮೊಹಾಲಿ
12 8pm 15th April ಪಂಜಾಬ್ v/s ಚೆನ್ನೈ ಮೊಹಾಲಿ
16 8pm 19th April ಪಂಜಾಬ್ v/s ಹೈದರಾಬಾದ್ ಮೊಹಾಲಿ
22 8pm 23th April ದೆಹಲಿ v/s ಪಂಜಾಬ್ ದೆಹಲಿ
34 8pm 4th May ಪಂಜಾಬ್ v/s ಮುಂಬೈ ಇಂಧೋರ್
38 8pm 6th may ಪಂಜಾಬ್ v/s ರಾಜಸ್ಥಾನ ಇಂಧೋರ್
44 4pm 12th May ಪಂಜಾಬ್ v/s ಕೊಲ್ಕತ್ತಾ ಇಂಧೋರ್
48 8pm 14th May ಪಂಜಾಬ್ v/s ಆರ್‌ಸಿಬಿ ಇಂಧೋರ್‌

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, March 20, 2018, 20:08 [IST]
Other articles published on Mar 20, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ