ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರನ್ ಚೇಸಿಂಗ್ ಸ್ಟಾರ್ ಆದ ಸ್ಮೃತಿ ಮಂದಾನ: ಕೊನೆಯ 14 ಇನ್ನಿಂಗ್ಸ್ 11 ಅರ್ಧಶತಕ!

Smriti mandana

ಟೀಂ ಇಂಡಿಯಾ ಮಹಿಳಾ ಬ್ಯಾಟರಿ ಸ್ಮೃತಿ ಮಂಧಾನ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಚೇಸಿಂಗ್ ನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಪ್ರತಿ ಬಾರಿ ಕಣಕ್ಕೆ ಇಳಿದಾಗಲೂ ಅರ್ಧಶತಕಕ್ಕೂ ಹೆಚ್ಚು ರನ್ ಕಲೆ ಹಾಕಿ ಎದುರಾಳಿಗಳಿಗೆ ಕಂಟಕವಾದರು. ಟೀಂ ಇಂಡಿಯಾ ಯುವ ಆರಂಭಿಕರನ್ನು ಔಟ್ ಮಾಡಲು ಸಾಧ್ಯವಾಗದೆ ಎದುರಾಳಿ ಬೌಲರ್ ಗಳು ತಲೆಕೆಡಿಸಿಕೊಂಡಿದ್ದಾರೆ.

ಚೇಸಿಂಗ್ ನಲ್ಲಿ 25ರ ಹರೆಯದ ಸ್ಮೃತಿ ಮಂಧಾನ ಆ ಮಟ್ಟಿಗೆ ವಿಜೃಂಭಿಸುತ್ತಿದ್ದಾರೆ. ಚೇಸ್ ನಲ್ಲಿ ಆಕೆ ಆಡಿದ ಕೊನೆಯ 14 ಇನ್ನಿಂಗ್ಸ್ ಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಚೇಸಿಂಗ್‌ನಲ್ಲಿ ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಸ್ಮೃತಿ ಮಂದಾನ ಸತತ 11 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ಇದರಲ್ಲಿ ಶತಕವೂ ಸೇರಿದೆ. ಅವರು ಸತತ 10 ಇನ್ನಿಂಗ್ಸ್‌ಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಸ್ಮೃತಿ ಮಂಧಾನ 64 ಇನ್ನಿಂಗ್ಸ್‌ಗಳಲ್ಲಿ 898 ರನ್ ಗಳಿಸಿದ್ದು, ಕೊನೆಯ 14 ಇನ್ನಿಂಗ್ಸ್‌ಗಳಲ್ಲಿ 64 ರನ್ ಗಳಿಸಿದ್ದಾರೆ. ಇದರಲ್ಲಿ 10 ಅರ್ಧ ಶತಕ ಹಾಗೂ ಒಂದು ಶತಕ ಸೇರಿದೆ. ಗರಿಷ್ಠ ಸ್ಕೋರ್ 105 ರನ್ ಸಿಡಿಸಿದ್ದಾರೆ.

ಸ್ಮೃತಿ ಕೊನೆಯ 14 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 71, 13, 22, 49, 80 *, 74, 63, 90 *, 105, 73 *, 53 *, 86, 52, 67 ರನ್ ಗಳಿಸಿದರು. ಈ ಅಂಕಿ ಅಂಶಗಳನ್ನು ನೋಡಿದರೆ, ಚೇಸಿಂಗ್‌ನಲ್ಲಿ ಈಕೆ ಭಾರತ ಮಹಿಳಾ ಕ್ರಿಕೆಟ್‌ನ ಚೇಸಿಂಗ್ ಮಾಸ್ಟರ್ ಆಗಿದ್ದಾರೆ. ಟೀಂ ಇಂಡಿಯಾ ಮಹಿಳಾ ಓಪನರ್ ವಿಶ್ವ ಕ್ರಿಕೆಟ್‌ನ ಅತ್ಯಂತ ನಿಪುಣ ಆಟಗಾರರಲ್ಲಿ ಒಬ್ಬರಾಗಿದ್ದು, ಈ ಯುವ ಬ್ಯಾಟರ್‌ಗೆ ಪ್ರಶಂಸೆಯ ಸುರಿಮಳೆಯಾಗಿದೆ.

ಇನ್ಮುಂದೆ ಟೀಂ‌ ಇಂಡಿಯಾದಲ್ಲಿ‌ Ravindra Jadeja ಸ್ಥಾನ ಎಲ್ಲಿ ಗೊತ್ತಾ? | Oneindia Kannada

ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 63 ಏಕದಿನ ಪಂದ್ಯಗಳನ್ನು ಆಡಿರುವ ಸ್ಮೃತಿ ಮಂಧಾನ 41.71 ಸರಾಸರಿ 2390 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 19 ಅರ್ಧ ಶತಕಗಳು ಸೇರಿವೆ. ಗರಿಷ್ಠ ಸ್ಕೋರ್ 135 ರನ್ ಆಗಿತ್ತು. 84 ಟಿ20 ಪಂದ್ಯಗಳಲ್ಲಿ 25 ಸರಾಸರಿಯೊಂದಿಗೆ 1,971 ರನ್ ಗಳಿಸಿದ್ದಾರೆ. ಇದರಲ್ಲಿ 14 ಅರ್ಧಶತಕಗಳು.ಅತ್ಯಧಿಕ ಸ್ಕೋರ್ 86 ರನ್. ಅಲ್ಲದೆ 4 ಟೆಸ್ಟ್ ಪಂದ್ಯಗಳಲ್ಲಿ 46 ಸರಾಸರಿಯಲ್ಲಿ 325 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳು ಸೇರಿವೆ. ಗರಿಷ್ಠ ಸ್ಕೋರ್ 127 ರನ್ ಆಗಿದೆ.

Story first published: Friday, February 25, 2022, 9:44 [IST]
Other articles published on Feb 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X