ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ನಿವೃತ್ತಿ: 'ಯುಗವೊಂದರ ಅಂತ್ಯ' ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Sourav Ganguly Reaction To Ms Dhoni Retirement

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕೆಟ್ ಲೋಕದ ದಿಗ್ಗಜರು ಧೋನಿ ನಿವೃತ್ತಿಗೆ ಶುಭ ಹಾರೈಸಿದ್ದಾರೆ. ಧೋನಿ ಕ್ರಿಕೆಟ್ ಸಾಧನೆಯನ್ನು ಸ್ಮರಿಸಿಕೊಂಡಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಮಾಜಿ ನಾಯಕ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ 2004ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಪದಾರ್ಪಣೆಯನ್ನು ಮಾಡಿದರು. ಬಳಿಕ ಟೀಮ್ ಇಂಡಿಯಾದ ನಾಯಕರಾದ ಧೋನಿ ಆಸ್ಟ್ರೇಲಿಯಾ ಸರಣಿಯಲ್ಲಿ ಗಂಗೂಲಿ ನಿವೃತ್ತಿಯನ್ನು ಘೋಷಿಸಿದ ಸಂದರ್ಭದಲ್ಲಿ ಪಂದ್ಯದ ಅಂತಿಮ ಹಂತದಲ್ಲಿ ನಾಯಕತ್ವದ ಜವಾಬ್ಧಾರಿಯನ್ನು ಗಂಗೂಲಿಗೆ ನೀಡಿದ್ದರು. ಈ ಮೂಲಕ ಮಾಜಿ ನಾಯಕನಿಗೆ ಧೋನಿ ಶ್ರೇಷ್ಠ ಗೌರವವನ್ನು ನೀಡಿದ್ದರು.

ಧೋನಿ ನಿವೃತ್ತಿ: ಮಾಹಿ ವೃತ್ತಿ ಬದುಕಿನ ಮಹತ್ವದ ಕ್ಷಣಗಳ ಮೆಲುಕುಧೋನಿ ನಿವೃತ್ತಿ: ಮಾಹಿ ವೃತ್ತಿ ಬದುಕಿನ ಮಹತ್ವದ ಕ್ಷಣಗಳ ಮೆಲುಕು

ಧೋನಿ ನಿವೃತ್ತಿಯ ಸಂದರ್ಭದಲ್ಲಿ ಗಂಗೂಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ಇದು ಒಂದು ಯುಗದ ಅಂತ್ಯ. ಅವರು ದೇಶ ಮತ್ತು ವಿಶ್ವ ಕ್ರಿಕೆಟ್‌ಗೆ ಕೊಡುಗೆಯನ್ನು ನೀಡಿದ ಅದೆಂತಾ ಆಟಗಾರ. ಅವರಲ್ಲಿನ ನಾಯಕತ್ವದ ಗುಣಗಳನ್ನು ಸರಿದೂಗಿಸುವುದು ಇನ್ನೋರ್ವ ಆಟಗಾರಿಗೆ ಅಸಾಧ್ಯ.ಅದರಲ್ಲೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆತನೋರ್ವ ಶ್ರೇಷ್ಠ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ"

ಬ್ಯಾಟಿಂಗ್‌ನಲ್ಲಿನ ಶಕ್ತಿಯನ್ನು ನೋಡಿ ಅವರ ಆರಂಭಿಕ ಹಂತಗಳಲ್ಲಿ ಕ್ರಿಕೆಟ್ ಜಗತ್ತು ಎದ್ದುನಿಂತು ಅವರ ಚಾಕಚಕ್ಯತೆ ಮತ್ತು ಸಂಪೂರ್ಣ ಆಟವನ್ನು ಗಮನಿಸುವಂತೆ ಮಾಡಿತು. ಪ್ರತಿಯೊಂದು ಒಳ್ಳೆಯ ವಿಷಯವೂ ಕೊನೆಗೊಳ್ಳುತ್ತದೆ ಮತ್ತು ಇದು ಸಂಪೂರ್ಣವಾಗಿ ಅದ್ಭುತವಾಗಿದೆ. ವಿಕೆಟ್‌ಕೀಪರ್ ಆಗಿ ಬಂದು ದೇಶಕ್ಕೆ ಛಾಪು ಮೂಡಿಸುವ ಮಾನದಂಡಗಳನ್ನು ಅವರು ನಿಗದಿಪಡಿಸಿದ್ದಾರೆ. ಅಂಗಳದಲ್ಲಿ ಯಾವುದೇ ಕೊರತೆಗಳಿಲ್ಲದೆ ವೃತ್ತಿ ಜೀವನವನ್ನು ಮುಗಿಸಿದ್ದಾರೆ. ಜೀವನದಲ್ಲಿ ಶ್ರೇಷ್ಠವಾಗಿರುವುದನ್ನು ನಾನು ಬಯಸುತ್ತೇನೆ" ಎಂದು ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

ಧೋನಿ ನಿವೃತ್ತಿ: ಕೊಹ್ಲಿ, ಸಚಿನ್, ರವಿಶಾಸ್ತ್ರಿಯಿಂದ ಧೋನಿಗೆ ವಿದಾಯದ ನುಡಿಧೋನಿ ನಿವೃತ್ತಿ: ಕೊಹ್ಲಿ, ಸಚಿನ್, ರವಿಶಾಸ್ತ್ರಿಯಿಂದ ಧೋನಿಗೆ ವಿದಾಯದ ನುಡಿ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಧಓನಿ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಧೋನಿ ಒಬ್ಬರು. ಅವರ ವೈಯಕ್ತಿಕ ನಿರ್ಧಾರವನ್ನು ಅರ್ಥ ಮಾಡಿಕೊಳ್ಳುತ್ತೇನೆ ಹಾಗೂ ಅದನ್ನು ಗೌರವಿಸುತ್ತೇನೆ ಎಂದು ಹೇಳುತ್ತಾ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ.

Story first published: Monday, August 17, 2020, 9:57 [IST]
Other articles published on Aug 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X