ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾದ ಲೆಜೆಂಡ್ ಮಖಾಯ ಎಂಟಿನಿ ಮಗನಿಗೆ ಭಾರತದಲ್ಲಿ ತರಬೇತಿ

Thando Ntini

ದಕ್ಷಿಣ ಆಫ್ರಿಕಾದ ವೇಗದ ಬೌಲರ್, ಲೆಜೆಂಡರಿ ಮಖಾಯ ಎಂಟಿನಿ ಮಗ, ತಾಂದೋ ಎಂಟಿನಿ ಮುಂಬೈನಲ್ಲಿ ದಿನೇಶ್ ಲ್ಯಾಡ್ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವೇಗದ ಬೌಲರ್‌ಗಳಿಗೆ ಹೆಸರುವಾಸಿಯಾದ ದಕ್ಷಿಣ ಆಫ್ರಿಕಾದ ಬೌಲರ್‌ಗಳು ತಮ್ಮ ಮಕ್ಕಳಿಗೆ ಭಾರತದಲ್ಲಿ ತರಬೇತಿ ನೀಡುತ್ತಿರುವುದು ವಿಶೇಷವಾಗಿದೆ.

IPL 2022: ತನ್ನದೇ ದಾಖಲೆ ಮುರಿದ ಉಮ್ರಾನ್ ಮಲ್ಲಿಕ್, ಸೀಸನ್‌ನ ಅತಿ ವೇಗದ ಎಸೆತ!IPL 2022: ತನ್ನದೇ ದಾಖಲೆ ಮುರಿದ ಉಮ್ರಾನ್ ಮಲ್ಲಿಕ್, ಸೀಸನ್‌ನ ಅತಿ ವೇಗದ ಎಸೆತ!

ದಿನೇಶ್ ಲ್ಯಾಡ್ ಭಾರತದ ಸೂಪರ್‌ಸ್ಟಾರ್ ರೋಹಿತ್ ಶರ್ಮಾ ಮತ್ತು ಶಾರ್ದೂಲ್ ಠಾಕೂರ್‌ಗೆ ತರಬೇತಿ ನೀಡಿದ್ದ ಕೋಚ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ 21 ವರ್ಷದ ಆಲ್‌ರೌಂಡರ್ ತಾಂದೋ ಎಂಟಿನಿ 2018ರ ಅಂಡರ್-19 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಆಟವಾಡಿದ್ರು.

14 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಈ ಯುವ ಬೌಲರ್ 32 ವಿಕೆಟ್‌ಗಳನ್ನ ಪಡೆದಿದ್ದಾರೆ. ಇನ್ನು 14 ಟಿ20 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನ ಕಬಳಿಸಿದ್ದಾರೆ.

ತಾಂದೋ ಎಂಟಿನಿ ಸದ್ಯ ಸ್ವಾಮಿ ವಿವೇಕಾನಂದ ಸ್ಕೂಲ್, ಬೊರಿವಾಲಿ ಬಳಿಯಲ್ಲಿ ತರಬೇತಿ ಪಡೆಯುತ್ತಿದ್ದು, ಲ್ಯಾಡ್ ಯಾವುದೇ ಶುಲ್ಕವಿಲ್ಲದೆ ಆತನಿಗೆ ತರಬೇತಿ ನೀಡುತ್ತಿದ್ದಾರೆ. ಭಾರತದ ದೇಶಿಯ ಪ್ರತಿಭೆಗಳಿಗೆ ತರಬೇತಿ ನೀಡುವಲ್ಲಿ ಅತ್ಯಂತ ಯಶಸ್ವಿಯಾಗಿರುವ ಈ ಕೋಚ್‌ ಸಿದ್ದಾರ್ಥ್ ಲಾಡ್ ಅಂತಹ ಪ್ರತಿಭೆಗಳಿಗೆ ದಾರಿಯಾಗಿದ್ದಾರೆ. ಸಿದ್ದಾರ್ಥ್ ಲಾಡ್ ಮುಂಬೈ ತಂಡದ ನಾಯಕನು ಆಗಿದ್ದರು.

Makhaya Ntini

"ವಾಸ್ತವವಾಗಿ ಅವರು (ತಾಂಡೋ) ನನ್ನ ರೈಲ್ವೇಸ್ ವಿದ್ಯಾರ್ಥಿಯೊಬ್ಬನ ಮೂಲಕ ಬಂದರು. ಆತ ದಕ್ಷಿಣ ಆಫ್ರಿಕಾದ ತಂಡದ ಬೌಲರ್ ಜೊತೆಗೆ ಸಂಪರ್ಕ ಹೊಂದಿದ್ದರು. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಆಫ್-ಸೀಸನ್ ಇದೆ ಮತ್ತು ಥಂಡೋ ಸುಮ್ಮನೆ ಕುಳಿತಿದ್ದ. ಹಾಗಾಗಿ ಮಖಾಯ್ ನನ್ನ ರೈಲ್ವೇ ವಿದ್ಯಾರ್ಥಿಯನ್ನು ಸಂಪರ್ಕಿಸಿ ಭಾರತದಲ್ಲಿ ಒಳ್ಳೆಯ ಕೋಚ್ ಇದ್ದಾರೆಯೇ ಎಂದು ಕೇಳಿದರು. ನನ್ನ ವಿದ್ಯಾರ್ಥಿ ಪ್ರತಿಯಾಗಿ ನನ್ನ ಹೆಸರನ್ನು ಸೂಚಿಸಿದ್ದು, ಅವರು ನನ್ನ ಬಳಿಗೆ ಬಂದರು, " ಎಂದು ಲಾಡ್ ತಿಳಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.

Gayle ದಾಖಲೆ ಮುರಿದ David Warner | Oneindia Kannada

ಮಖಾಯ ಎಂಟಿನಿ ದಕ್ಷಿಣ ಆಫ್ರಿಕಾದ ಪರ 301 ಟೆಸ್ಟ್ ಪಂದ್ಯಗಳಲ್ಲಿ 390 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು.

Story first published: Friday, May 6, 2022, 13:49 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X