ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಶ್ರೀಲಂಕಾ!

ಲಂಡನ್: ಏಕದಿನ ಮತ್ತು ಟಿ20ಐ ಎರಡರಲ್ಲೂ ವಿಶ್ವಕಪ್‌ ಗೆದ್ದಿರುವ ಬಲಿಷ್ಠ ತಂಡಗಳ ಸಾಲಿನಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಈಚೆಗೇಕೋ ತೀರಾ ಮಂಕಾಗಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಕೆಟ್ಟ ದಾಖಲೆಗೆ ಕಾರಣವಾಗಿದೆ. ಗುರುವಾರ (ಜುಲೈ 1) ಲಂಡನ್‌ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿನ ಸೋಲಿನೊಂದಿಗೆ ಲಂಕಾ ಬೇಡದ ದಾಖಲೆ ನಿರ್ಮಿಸಿದೆ.

WTC ಫೈನಲ್‌ನಲ್ಲಿ ಗೆದ್ದ ಮೇಲೆ ಕೇನ್ ವಿಲಿಯಮ್ಸನ್ ವಿರಾಟ್ ಕೊಹ್ಲಿ ಅಪ್ಪಿ ಎದೆಗೊರಗಿದ್ಯಾಕೆ ಗೊತ್ತಾ?!WTC ಫೈನಲ್‌ನಲ್ಲಿ ಗೆದ್ದ ಮೇಲೆ ಕೇನ್ ವಿಲಿಯಮ್ಸನ್ ವಿರಾಟ್ ಕೊಹ್ಲಿ ಅಪ್ಪಿ ಎದೆಗೊರಗಿದ್ಯಾಕೆ ಗೊತ್ತಾ?!

ಶ್ರೀಲಂಕಾ-ಇಂಗ್ಲೆಂಡ್ ಗುರುವಾರದ ಮುಖಾಮುಖಿಯಲ್ಲಿ ಕುಸಾಲ್ ಪೆರೆರಾ ಪಡೆ ಇಯಾನ್ ಮಾರ್ಗನ್ ಬಳಗದ ವಿರುದ್ಧ 8 ವಿಕೆಟ್‌ ಸೋಲನುಭವಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಲಂಕಾ 2-0ಯಿಂದ ಸೋತಿದೆ.

ಶ್ರೀಲಂಕಾ-ಇಂಗ್ಲೆಂಡ್ ಸ್ಕೋರ್‌

ಶ್ರೀಲಂಕಾ-ಇಂಗ್ಲೆಂಡ್ ಸ್ಕೋರ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ, 50 ಓವರ್‌ಗೆ 9 ವಿಕೆಟ್ ಕಳೆದು 241 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ, 43 ಓವರ್‌ಗೆ 2 ವಿಕೆಟ್‌ ನಷ್ಟದಲ್ಲಿ 244 ರನ್‌ ಗಳಿಸಿತು. ಇಂಗ್ಲೆಂಡ್‌ನ ಸ್ಯಾಮ್ ಕರನ್ 48 ರನ್‌ಗೆ 5, ಡೇವಿಡ್ ವಿಲ್ಲೆ 64 ರನ್‌ಗೆ 4 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ವನಿಂದು ಹಸರಂಗ 1, ಚಮಿಕ ಕರುಣರತ್ನೆ 1 ವಿಕೆಟ್‌ ಪಡೆದರು.

ಏಕದಿನದಲ್ಲಿ ದಾಖಲೆಯ ಸೋಲು

ಏಕದಿನದಲ್ಲಿ ದಾಖಲೆಯ ಸೋಲು

ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ಅತೀ ಹೆಚ್ಚು ಪಂದ್ಯಗಳನ್ನು ಸೋತಿರುವ ವಿಶ್ವ ದಾಖಲೆಯಲ್ಲಿ ಶ್ರೀಲಂಕಾ ತಂಡ ಈಗ ಮೊದಲ ಸ್ಥಾನಕ್ಕೇರಿದೆ. 428 ಏಕದಿನ ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ಈ ಬೇಡದ ದಾಖಲೆ ನಿರ್ಮಿಸಿದೆ. ಇದಕ್ಕೂ ಮುನ್ನ ಭಾರತ ತಂಡ 427 ಏಕದಿನ ಪಂದ್ಯಗಳನ್ನು ಸೋತು ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು.

ಲಂಕಾ ಹೀನಾಯ ಸ್ಥಿತಿ

ಲಂಕಾ ಹೀನಾಯ ಸ್ಥಿತಿ

ಇಂಗ್ಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಏಕದಿನ ಸರಣಿಗೂ ಮುನ್ನ ಆಡಿದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಮೂರರಲ್ಲೂ ಸೋತಿತ್ತು. ಅದೂ ಹೆಚ್ಚಿನ ಪಂದ್ಯಗಳಲ್ಲಿ ಸುಲಭ ಸೋಲು. ಈಗ ಏಕದಿನದಲ್ಲೂ ಕ್ಲೀನ್‌ ಸ್ವೀಪ್‌ ಆಗುವ ಭೀತಿಯಲ್ಲಿದೆ. ಮುಂದೆ ಜುಲೈ 13ರಿಂದ ಭಾರತ-ಶ್ರೀಲಂಕಾ ಮಧ್ಯೆ ಸೀಮಿತ ಓವರ್‌ಗಳ ಸರಣಿಯಿದ್ದು, ಅಲ್ಲೂ ಭಾರತ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

RCB ಹಾಗು Maxwell ವಿಚಾರದಲ್ಲಿ ಭರ್ಜರಿ ಸುದ್ದಿ | Oneindia Kannada
ಒಡಿಐನಲ್ಲಿ ಹೆಚ್ಚು ಸೋತಿರುವ ತಂಡಗಳು

ಒಡಿಐನಲ್ಲಿ ಹೆಚ್ಚು ಸೋತಿರುವ ತಂಡಗಳು

1. ಶ್ರೀಲಂಕಾ, ಆಡಿರುವ ಏಕದಿನ ಪಂದ್ಯಗಳು 860, ಸೋಲು 428, ಗೆಲುವು 390

2. ಭಾರತ, ಆಡಿರುವ ಏಕದಿನ ಪಂದ್ಯಗಳು 933, ಸೋಲು 427, ಗೆಲುವು 516

3. ಪಾಕಿಸ್ತಾನ, ಆಡಿರುವ ಏಕದಿನ ಪಂದ್ಯಗಳು 933, ಸೋಲು 414, ಗೆಲುವು 490

4. ವೆಸ್ಟ್ ಇಂಡೀಸ್, ಆಡಿರುವ ಏಕದಿನ ಪಂದ್ಯಗಳು 828, ಸೋಲು 384, ಗೆಲುವು 404

For Quick Alerts
ALLOW NOTIFICATIONS
For Daily Alerts
Story first published: Friday, July 2, 2021, 10:16 [IST]
Other articles published on Jul 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X