ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭುವನೇಶ್ವರ್ ಕುಮಾರ್ ಮಾರಕ ಬೌಲಿಂಗ್‌ಗೆ ತಲೆ ಬಾಗಿದ ಶ್ರೀಲಂಕಾ

Sri Lanka vs India, 1st T20I Match: India beat Sri Lanka by 38 runs

ಕೊಲಂಬೋ: ಕೊಲಂಬೋದ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ (ಜುಲೈ 25) ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ 38 ರನ್‌ಗಳ ಭರ್ಜರಿ ಜಯ ಗಳಿಸಿದೆ. ಉಪನಾಯಕ ಭುವನೇಶ್ವರ್ ಕುಮಾರ್ ಅವರ ಮಾರಕ ಬೌಲಿಂಗ್ ನೆರವಿನೊಂದಿಗೆ ಭಾರತ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 1-0ಯ ಮುನ್ನಡೆ ಗಳಿಸಿದೆ.

ಐಪಿಎಲ್ 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!ಐಪಿಎಲ್ 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!

ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿತ್ತು. ಬ್ಯಾಟಿಂಗ್‌ಗೆ ಇಳಿದ ಭಾರತ, ಶಿಖರ್ ಧವನ್ 46 (36), ಸಂಜು ಸ್ಯಾಮ್ಸನ್ 27, ಸೂರ್ಯಕುಮಾರ್ ಯಾದವ್ 50 (34), ಹಾರ್ದಿಕ್ ಪಾಂಡ್ಯ 10, ಇಶಾನ್ ಕಿಶನ್ ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 164 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಶ್ರೀಲಂಕಾ, ಅವಿಷ್ಕಾ ಫೆರ್ನಾಂಡೋ 26, ಮಿನೋದ್ ಭಾನುಕಾ 10, ಚರಿತ್ ಅಸಲಂಕಾ 44, ದಸುನ್ ಶನಕಾ 16, ಧನಂಜಯ ಡಿ ಸಿಲ್ವಾ 9, ಚಮಿಕ ಕರುಣರತ್ನೆ 3 ರನ್‌ನೊಂದಿಗೆ 18.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 126 ರನ್ ಗಳಿಸಿತು.

ಭಾರತ vs ಪಾಕ್ ಟಿ20 ವಿಶ್ವಕಪ್‌ ಮುಖಾಮುಖಿಯ ಬಗ್ಗೆ ಗಂಭೀರ ಹೇಳಿಕೆ ನೀಡಿದ ಶೋಯೆಬ್ ಅಖ್ತರ್!ಭಾರತ vs ಪಾಕ್ ಟಿ20 ವಿಶ್ವಕಪ್‌ ಮುಖಾಮುಖಿಯ ಬಗ್ಗೆ ಗಂಭೀರ ಹೇಳಿಕೆ ನೀಡಿದ ಶೋಯೆಬ್ ಅಖ್ತರ್!

Ishan Kishan ಅವರ ಆಟ ನೋಡಿ ಹಾಡಿ ಹೊಗಳಿದ ಅಭಿಮಾನಿಗಳು | Oneindia Kannada

ಭಾರತದ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ದುಶ್ಮಂತ ಚಮೀರ 2, ಚಮಿಕ ಕರುಣರತ್ನೆ 1, ವನಿಂದು ಹಸರಂಗ 2 ವಿಕೆಟ್‌ ಪಡೆದರೆ, ಶ್ರೀಲಂಕಾದ ಇನ್ನಿಂಗ್ಸ್‌ನಲ್ಲಿ ಭಾರತದ ಭುವನೇಶ್ವರ್ ಕುಮಾರ್ 22ಕ್ಕೆ 4, ದೀಪಕ್ ಚಾಹರ್ 2, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಯುಜುವೇಂದ್ರ ಚಾಹಲ್ ತಲಾ 1 ವಿಕೆಟ್ ಪಡೆದರು. ಭುವಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Monday, July 26, 2021, 0:43 [IST]
Other articles published on Jul 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X