ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿಲ್ರುವಾನ್ ಅಮೋಘ ದಾಳಿ: ದ. ಆಫ್ರಿಕಾ ವಿರುದ್ಧ ಶ್ರೀಲಂಕಾಕ್ಕೆ ಭರ್ಜರಿ ಜಯ

srilanka south africa first test report RESULT

ಗಾಲ್, ಜುಲೈ 14: ಆಫ್‌ ಸ್ಪಿನ್ನರ್ ದಿಲ್ರುವಾನ್ ಪೆರೇರಾ ಅವರ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿದೆ.

ಗೆಲ್ಲಲು 352 ರನ್‌ಗಳ ಬೃಹತ್ ಗುರಿಯೊಂದಿಗೆ ಎರಡನೆಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ, ಸ್ಪಿನ್ ದಾಳಿಗೆ ಕಂಗೆಟ್ಟು ಕೇವಲ 73 ರನ್‌ಗೆ ಆಲೌಟ್ ಆಗುವ ಮೂಲಕ 278 ರನ್‌ಗಳ ಭಾರಿ ಅಂತರದಿಂದ ಸೋಲು ಕಂಡಿತು.

ಮೊದಲ ಇನ್ನಿಂಗ್ಸ್‌ನಲ್ಲಿಯೂ ಹೀನಾಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಹರಿಣಗಳು 126 ರನ್‌ಗೆ ಸರ್ವಪತನ ಕಂಡಿದ್ದರು.

ಮೊದಲ ಇನ್ನಿಂಗ್ಸ್‌ನಲ್ಲಿ 161 ರನ್‌ಗಳ ಮನ್ನಡೆ ಪಡೆದುಕೊಂಡಿದ್ದ ಶ್ರೀಲಂಕಾ, ಎರಡನೆಯ ಇನ್ನಿಂಗ್ಸ್‌ನಲ್ಲಿ 190 ರನ್‌ಗೆ ಆಲೌಟ್ ಆಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಗಳಿಸಿದ್ದ ದಿಮುತ್ ಕರುಣರತ್ನೆ, ಎರಡನೆಯ ಇನ್ನಿಂಗ್ಸ್‌ನಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದರು.

ಕಗಿಸೊ ರಬಾಡ ಮತ್ತು ಕೇಶವ್ ಮಹಾರಾಜ್ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು.

ವಿಪರೀತ ತಿರುವು ಪಡೆದುಕೊಳ್ಳುತ್ತಿದ್ದ ಪಿಚ್‌ನಲ್ಲಿ ಶ್ರೀಲಂಕಾದ ಸ್ಪಿನ್ನರ್‌ಗಳನ್ನು ಎದುರಿಸಲು ತಡಬಡಾಯಿಸಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳ ಪರಿಸ್ಥಿತಿ ಎರಡನೆಯ ಇನ್ನಿಂಗ್ಸ್‌ನಲ್ಲಿ ಇನ್ನೂ ಹೀನಾಯವಾಗಿತ್ತು.

ಮೂವರ ಹೊರತಾಗಿ ಯಾವ ಬ್ಯಾಟ್ಸ್‌ಮನ್‌ ಕೂಡ ಎರಡಂಕಿ ಮೊತ್ತ ದಾಖಲಿಸಲಿಲ್ಲ. ವೆರ್ನನ್ ಫಿಲಾಂಡರ್ ಗಳಿಸಿದ ಅಜೇಯ 22 ರನ್ ಹರಿಣಗಳ ಪಾಲಿನ ಗರಿಷ್ಠ ರನ್ ಎನಿಸಿತು.

ಆಫ್‌ ಸ್ಪಿನ್ನರ್ ದಿಲ್ರವಾನ್ ಪೆರೇರಾ ಮತ್ತು ಅನುಭವಿ ಎಡಗೈ ಬೌಲರ್ ರಂಗನಾ ಹೆರಾತ್ 9 ವಿಕೆಟ್‌ಗಳನ್ನು ಹಂಚಿಕೊಂಡರು. ಒಂದು ವಿಕೆಟ್ ವೇಗಿ ಲಕ್ಷಣ್ ಸಂದಾಕನ್ ಪಾಲಾಯಿತು.

ಇದು ದಕ್ಷಿಣ ಆಫ್ರಿಕಾ ನಾಲ್ಕನೆಯ ಇನ್ನಿಂಗ್ಸ್‌ನಲ್ಲಿ ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ. 1991-92ರ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಕೂಡ ಹೌದು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನ್ನಿಂಗ್ಸ್: 287/10 (78.4 ಓವರ್): ದಿಮುತ್ ಕರುಣರತ್ನೆ 158*, ಧನುಷ್ಕ ಗುಣತಿಲಕ 26, ಲಕ್ಷಣ್ ಸಂದಾಕನ್ 25, ಕಗಿಸೊ ರಬಾಡ 50/4, ತಬ್ರಿಯಾಜ್ ಶಮ್ಸಿ 91/3

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್: 126/10 (54.3 ಓವರ್): ಫಾಫ್ ಡು ಪ್ಲೆಸಿಸ್ 49, ವೆರ್ನನ್ ಫಿಲಾಂಡರ್ 18, ತೆಂಬಾ ಬವುಮಾ 17, ದಿಲ್ರುವಾನ್ ಪೆರೇರಾ 46/4, ಸುರಂಗಾ ಲಕ್ಮಲ್ 21/3, ರಂಗನಾ ಹೆರಾತ್ 39/2

ಶ್ರೀಲಂಕಾ ಎರಡನೆಯ ಇನ್ನಿಂಗ್ಸ್: 190/10 (57.4 ಓವರ್) ದಿಮುತ್ ಕರುಣರತ್ನೆ 60, ಆಂಜೆಲೊ ಮ್ಯಾಥ್ಯೂಸ್ 35, ಸುರಂಗಾ ಲಕ್ಮಲ್ 33*, ಕಗಿಸೊ ರಬಾಡ 44/3, ಕೇಶವ್ ಮಹಾರಾಜ್ 58/4

ದಕ್ಷಿಣ ಆಫ್ರಿಕಾ ಎರಡನೆಯ ಇನ್ನಿಂಗ್ಸ್: 73/10 (28.5 ಓವರ್) ವೆರ್ನನ್ ಫಿಲಾಂಡರ್ 22, ಏಡನ್ ಮರ್ಕ್ರಮ್ 19, ದಿಲ್ರುವಾನ್ ಪೆರೇರಾ 32/6, ರಂಗನಾ ಹೆರಾತ್ 38/3.

ಫಲಿತಾಂಶ: ಶ್ರೀಲಂಕಾಕ್ಕೆ 278 ರನ್‌ಗಳ ಗೆಲುವು ಮತ್ತು 2 ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ.
ಪಂದ್ಯ ಶ್ರೇಷ್ಠ: ದಿಮುತ್ ಕರುಣರತ್ನೆ

Story first published: Saturday, July 14, 2018, 18:41 [IST]
Other articles published on Jul 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X